ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ಪ್ರವಾಸಿಗರಿಂದ ರಂಗಿನಾಟ

Last Updated 20 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಗಂಗಾವತಿ:  ಹೋಳಿಹಬ್ಬ, ರಂಗಿನಾಟದ ಬಗ್ಗೆ ಕಲ್ಪನೆಯೇ ಇಲ್ಲದ ವಿದೇಶಿ ಪ್ರವಾಸಿಗರು ಬಣ್ಣಗಳ ಹಬ್ಬದ ಮೋಡಿಗೆ ಮನಸೋತರು.
ಇಲ್ಲಿಗೆ ಸಮೀಪದ ವಿರೂಪಾಪುರ ಗಡ್ಡೆಯಲ್ಲಿ ಭಾನುವಾರ ಸ್ಥಳೀಯರ ಒಡಗೂಡಿ ಓಕುಳಿಯಾಡಿ ಸಂಭ್ರಮಿಸಿದರು.

ವಿವಿಧ ದೇಶಗಳ 500ಕ್ಕೂ ಹೆಚ್ಚು ಪ್ರವಾಸಿಗರು ಹೋಳಿ ಹಬ್ಬಕ್ಕೆ ರಂಗು ತುಂಬಿ, ಬಣ್ಣದ ಹೊಳೆಯಲ್ಲಿ ಮಿಂದೆದ್ದರು. ಫ್ರಾನ್ಸ್, ಜರ್ಮನಿ, ಇಂಗ್ಲೆಂಡ್, ಅಮೆರಿಕ, ಸ್ಪೇನ್, ಇಟಲಿ, ಇಸ್ರೇಲ್, ಅಫ್ಘಾನಿಸ್ತಾನ ಮೊದಲಾದ ದೇಶಗಳಿಂದ ಆಗಮಿಸಿದ್ದ ಪ್ರವಾಸಿಗರು ಮುಂಜಾನೆಯಿಂದಲೇ ಓಕುಳಿಯಾಟದಲ್ಲಿ ತೊಡಗಿದರು.

ಗೋವನ್ ಕಾರ್ನಾರ್‌ನಿಂದ ಮೆರವಣಿಗೆ ಹೊರಟು ಐತಿಹಾಸಿಕ ಪಾದಸೇತುವೆ ತಿರುವಿನವರೆಗೂ ಸಂಗೀತಕ್ಕೆ ತಕ್ಕಂತೆ ನೃತ್ಯ, ಮೋಜು-ಮಸ್ತಿ ಮಾಡಿದ ವಿದೇಶಿಯರು ಬಳಿಕ ನದಿಗೆ ತೆರಳಿ ಸ್ನಾನ ಮುಗಿಸಿದರು. ವಿದೇಶಿ ಯುವ ಜೋಡಿಗಳು ಹೆಚ್ಚಾಗಿ ರಂಗಿನಾಟದಲ್ಲಿ ಪಾಲ್ಗೊಂಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT