ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ವಿನಿಮಯ ವಂಚನೆಗೆ ಜೈಲು

ವಜ್ರ ವ್ಯಾಪಾರಿಗೆ `ಫೆಮಾ'ದಡಿ ಶಿಕ್ಷೆ
Last Updated 25 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ವಿದೇಶಿ ವಿನಿಮಯ ಸುಂಕ ಪಾವತಿಸುವುದನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದವರಿಗೆ ದಂಡ ಪಾವತಿಯಷ್ಟೇ ಅಲ್ಲ, ಇನ್ನು ಜೈಲು ಶಿಕ್ಷೆಯೂ ಕಾದಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.

ಇತ್ತೀಚಿನ ಒಂದು ಪ್ರಕರಣದಲ್ಲಿ ಸೂರತ್ ಮೂಲದ ವಜ್ರದ ವ್ಯಾಪಾರಿಯೊಬ್ಬರು ಉದ್ದೇಶ ಪೂರ್ವಕವಾಗಿಯೇ ವಿದೇಶಿ ವಿನಿಮಯ ಸುಂಕ ಪಾವತಿಸುವುದನ್ನು ತಪ್ಪಿಸಿದ್ದಕ್ಕೆ `ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ'(ಎಫ್‌ಇಎಂಎ-ಫೆಮಾ) ಸೆಕ್ಷನ್ 14ರಡಿ ಜಾರಿ ನಿರ್ದೇಶನಾಲಯ ರೂ.3.99 ಲಕ್ಷ ದಂಡ ವಿಧಿಸಿದೆ. ಜತೆಗೆ, ದಾವೆ ಹೂಡಿ 3 ತಿಂಗಳ ಜೈಲು ಶಿಕ್ಷೆ ಆಗುವಂತೆಯೂ ಮಾಡಿದೆ.

ಶಿಕ್ಷೆಗೊಳಗಾದ ಸೂರತ್‌ನ ಈ ವಜ್ರ ವ್ಯಾಪಾರಿ 60,000 ಡಾಲರ್(ರೂ.32.40 ಲಕ್ಷ) ಮೊತ್ತವನ್ನು ವಿದೇಶಕ್ಕೆ ಅಕ್ರಮವಾಗಿ ವರ್ಗಾಯಿಸಿದ್ದರು.

ವಿದೇಶಿ ವಿನಿಮಯ ಸುಂಕ ವಂಚಿಸಿದ ಪ್ರಕರಣದಲ್ಲಿ 1999ರ ನಂತರ ಇದೇ ಮೊದಲ ಬಾರಿಗೆ ಜಾರಿ ನಿರ್ದೇಶನಾಲಯ `ಫೆಮಾ'ದಡಿ ಬಂಧಿಸಿ ಜೈಲಿಗೆ ಕಳುಹಿಸುವ ಕ್ರಮವನ್ನು ಕೈಗೊಂಡಿದೆ. ಉದ್ದೇಶ ಪೂರ್ವಕವಾಗಿ ವಿದೇಶಿ ವಿನಿಮಯ ಸುಂಕ ತಪ್ಪಿಸುವವರಿಗೆ ಹಾಗೂ ಭಾರಿ ಪ್ರಮಾಣದಲ್ಲಿ ಸುಂಕ ಬಾಕಿ ಉಳಿಸಿಕೊಂಡವರಿಗೂ ಮುಂದಿನ ದಿನಗಳಲ್ಲಿ ಇದೇ ಬಗೆಯಲ್ಲಿ ದಂಡ ಮತ್ತು ಜೈಲು ಶಿಕ್ಷೆಯಾಗುವ ಸಾಧ್ಯತೆಗಳಿವೆ ಎಂದು ನಿರ್ದೇಶನಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT