ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ವಿನಿಮಯ ಹೆಚ್ಚಳ

Last Updated 10 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಮುಂಬೈ (ಐಎಎನ್‌ಎಸ್): ಸೆಪ್ಟೆಂಬರ್ 2ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ ದೇಶದ ವಿದೇಶಿ ವಿನಿಮಯ ಮೌಲ್ಯವು ಸಾರ್ವಕಾಲಿಕ ದಾಖಲೆ ಮಟ್ಟ ತಲುಪಿದ್ದು, 320 ಶತಕೋಟಿ ಡಾಲರ್ (್ಙ1,4,40,000 ಕೋಟಿ) ಗಳಷ್ಟಾಗಿದೆ.

ಸರ್ಕಾರ ಬಳಿ ಇರುವ ಚಿನ್ನದ ಮೀಸಲು ಮೌಲ್ಯವು  ಆಗಸ್ಟ್ ತಿಂಗಳಲ್ಲಿ 3 ಶತಕೋಟಿ ಡಾಲರ್ ( ರೂ13,500 ಕೋಟಿ) ಗಳಷ್ಟು ಹೆಚ್ಚಿರುವುದು  ವಿದೇಶಿ ವಿನಿಮಯದ ದಾಖಲೆ ಪ್ರಗತಿಗೆ ಕಾರಣವಾಗಿದೆ.

ಚಿನ್ನದ ಮೌಲ್ಯವು ಕಳೆದ ತಿಂಗಳ 2.9 ಶತಕೋಟಿ ಡಾಲರ್‌ನಿಂದ ಸೆಪ್ಟೆಂಬರ್ 2ಕ್ಕೆ 28 ಶತಕೋಟಿ ಡಾಲರ್‌ಗಳಿಗೆ ಏರಿಕೆಯಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ. ಚಿನ್ನದ ಧಾರಣೆ ಕಳೆದ ವಾರ ಸಾರ್ವಕಾಲಿಕ ದಾಖಲೆ ಮಟ್ಟ ಔನ್ಸ್‌ಗೆ 1,921 ಡಾಲರ್ ತಲುಪಿತ್ತು. ಅಮೆರಿಕ ಮತ್ತು ಯೂರೋಪ್ ಒಕ್ಕೂಟದ ಸಾಲದ ಬಿಕ್ಕಟ್ಟು ಮತ್ತು ಜಾಗತಿಕ ಅರ್ಥಿಕ ಅಸ್ಥಿರತೆ ಹಿನ್ನೆಲೆಯಲ್ಲಿ `ಆರ್‌ಬಿಐ~ ತನ್ನ ಬಳಿ ಇರುವ ಚಿನ್ನದ ಮೀಸಲು ಪ್ರಮಾಣವನ್ನು ಇತ್ತೀಚೆಗೆ ಹೆಚ್ಚಿಸಿಕೊಂಡಿತ್ತು.

ವಿದೇಶಿ ವಿನಿಮಯಕ್ಕೆ ದೊಡ್ಡ ಪ್ರಮಾಣದ ಕೊಡುಗೆ ನೀಡುವ `ವಿದೇಶಿ ಕರೆನ್ಸಿ ಸಂಪತ್ತು ಈ ಅವಧಿಯಲ್ಲಿ 1.32 ಶತಕೋಟಿ ಡಾಲರ್‌ಗಳಷ್ಟು ಇಳಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT