ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ಸಂಕ್ಷಿಪ್ತ ಸುದ್ದಿಗಳು...

Last Updated 16 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಯುಎಇ ಅಧ್ಯಕ್ಷರ ವಿಹಾರದೋಣಿ ದುಬಾರಿ ಆಸ್ತಿ
ನ್ಯೂಯಾರ್ಕ್‌ (ಪಿಟಿಐ):
ಯುಎಇ ಅಧ್ಯಕ್ಷ ಶೇಖ್‌ ಖಲೀಫಾ ಬಿನ್‌ ಜೈಯದ್‌ ಅಲ್‌–ನಹ್ಯಾನ್‌ ಅವರು ಈ ವರ್ಷ ಖರೀದಿಸಿರುವ, ಸುಮಾರು 62.7 ಕೋಟಿ ಡಾಲರ್‌ (ಅಂದಾಜು ₨3,887ಕೋಟಿ) ಮೌಲ್ಯದ ‘ಅಜ್ಜಾಮ್‌’ ಹೆಸರಿನ ವಿಹಾರ ದೋಣಿ ಯು ಇದುವರೆಗೆ ಜಗತ್ತಿನಲ್ಲಿ ಖರೀದಿಸ­ಲಾಗಿರುವ ಐಷಾರಾಮಿ ಆಸ್ತಿಗಳಲ್ಲೇ  ಅತಿ ದುಬಾರಿಯಾದುದು ಎಂದು ‘ವೆಲ್ತ್‌–ಎಕ್ಸ್’ ವರದಿ ಮಾಡಿದೆ.

ಸಂಘಟಿತ ಪ್ರತಿಕ್ರಿಯೆಗೆ ಅಮೆರಿಕ ಮನವಿ
ಸೋಲ್‌ (ಎಎಫ್‌ಪಿ):
ಉತ್ತರ ಕೊರಿಯಾದ ಯುವ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಅವರ ಮಾವ ಜಾಂಗ್‌ ಸೊಂಗ್‌ಥೇಕ್‌ ಅವರನ್ನು ನೇಣಿಗೆ ಹಾಕಿ­ರುವ ‘ಭೀತಿಕಾರಕ ಬೆಳವಣಿಗೆ’ ಬಗ್ಗೆ ಸಂಘಟಿತವಾಗಿ ಪ್ರತಿಕ್ರಿಯಿಸಲು ಅಮೆರಿಕ ವಿನಂತಿಸಿಕೊಂಡಿದೆ.

ಅಮೆರಿಕದಲ್ಲೂ ‘ಏಕತಾ ಓಟ’
ವಾಷಿಂಗ್ಟನ್ (ಪಿಟಿಐ):
ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ 63ನೇ ಪುಣ್ಯ ತಿಥಿ ಅಂಗವಾಗಿ ಇಲ್ಲಿ ಆಯೋಜಿಸಿದ್ದ ‘ಏಕತಾ ಓಟ’ದಲ್ಲಿ ಭಾರತ ಮೂಲದ ಅಮೆರಿಕ ಪ್ರಜೆಗಳು ಭಾಗವಹಿಸಿ ಗೌರವ ಸಲ್ಲಿಸಿದರು.

ಮಂಡೇಲಾ ಕಂಚಿನ ಪ್ರತಿಮೆ ಅನಾವರಣ
ಪ್ರಿಟೋರಿಯಾ (ಪಿಟಿಐ):
ತವರೂರಿನಲ್ಲಿ ನೆಲ್ಸನ್‌ ಮಂಡೇಲಾ ಅವರ ಅಂತ್ಯಸಂಸ್ಕಾರ ನಡೆದ ಮರುದಿನವೇ 9 ಮೀಟರ್‌ ಎತ್ತರದ ಅವರ ಕಂಚಿನ ಪ್ರತಿಮೆಯನ್ನು ಇಲ್ಲಿ ಅನಾವರಣಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT