ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾ ನಟನಾ ತತ್ವ

ಪಂಚರಂಗಿ
Last Updated 25 ಜುಲೈ 2013, 19:59 IST
ಅಕ್ಷರ ಗಾತ್ರ

ಟನೆ ನಮಗೆ ಬೇರೊಂದು ಜಗತ್ತಿನಲ್ಲಿ ಬದುಕುವುದನ್ನು ಕಲಿಸುತ್ತದೆ ಎಂಬುದು ನಟಿ ವಿದ್ಯಾ ಬಾಲನ್ ಅನುಭವದ ಮಾತು. `ಅಭಿನಯದ ಮೂಲಕ ನಮ್ಮನ್ನು ನಾವು ಸಾಬೀತುಪಡಿಸಿಕೊಳ್ಳಬಹುದು ಎನ್ನಲಾಗದು. ಬೇರೊಬ್ಬರ ಜಗತ್ತಿಗೆ ಪರಕಾಯ ಪ್ರವೇಶ ಮಾಡುವ ಈ ಪ್ರಕ್ರಿಯೆಯಿಂದ ನನಗೆ ರೋಮಾಂಚನವಾಗಿದೆ' ಎಂದು ವಿದ್ಯಾ ತಾತ್ವಿಕವಾಗಿ ಮಾತನಾಡಿದ್ದಾರೆ.

ರಾಜ್‌ಕುಮಾರ್ ಗುಪ್ತಾ ನಿರ್ದೇಶನದ `ಘನ್‌ಚಕ್ಕರ್' ಚಿತ್ರದಲ್ಲಿ ಅಸಹಜ ಉಡುಪು ಧರಿಸುವ ಪಂಜಾಬಿ ಹೆಣ್ಣಿನ ಪಾತ್ರವನ್ನು ವಿದ್ಯಾ ನಿರ್ವಹಿಸಿದರು. ಪಾತ್ರಗಳಲ್ಲಿ ತಮ್ಮ ಸ್ವಭಾವಕ್ಕೆ ಹೊಂದುವ ದಾರಿಗಳನ್ನು ಹುಡುಕುವುದನ್ನು ಅಭ್ಯಾಸ ಮಾಡಿಕೊಂಡಿರುವುದಾಗಿ ಹೇಳುವ ವಿದ್ಯಾ `ಘನಚಕ್ಕರ್' ಚಿತ್ರದ ಪಾತ್ರದ ರೂಹನ್ನು ಬಿಚ್ಚಿಡುವುದು ಹೀಗೆ:

`ಆ ಚಿತ್ರದಲ್ಲಿ ನಾನು ನಿರ್ವಹಿಸಿದ ಪಾತ್ರ ಆಸಕ್ತಿಕರವಾದದ್ದು. ಅವಳು ತನ್ನಷ್ಟಕ್ಕೆ ತಾನು ನಂಬಿದ ಜಗತ್ತಿನಲ್ಲಿ ಬದುಕುವವಳು. ಅದನ್ನು ಅರ್ಥ ಮಾಡಿಕೊಂಡೇ ಆ ಪಾತ್ರವನ್ನು ನೋಡಬೇಕು'.

`ಘನಚಕ್ಕರ್' ಚಿತ್ರ ಹೆಚ್ಚು ಹಣ ಗಳಿಸಲಿಲ್ಲ. ಆದರೆ ವಿಮರ್ಶಕರು ಮತ್ತು ವೀಕ್ಷಕರು ವಿದ್ಯಾ ಅಭಿನಯವನ್ನು ಕೊಂಡಾಡಿದರು. `ನನ್ನ ಕೆಲಸವನ್ನಷ್ಟೇ ಶ್ರದ್ಧೆಯಿಂದ ಮಾಡುತ್ತೇನೆ. ಘನಚಕ್ಕರ್‌ನಲ್ಲಿ ಸಂಜು (ಇಮ್ರಾನ್ ಹಶ್ಮಿ) ಪಾತ್ರ ಮುಖ್ಯ. ನನ್ನ ಪಾತ್ರ ಅಷ್ಟೊಂದು ಮುಖ್ಯವಲ್ಲ. ಆದರೆ ಪಾತ್ರವನ್ನು ಪ್ರೀತಿಸುವ ನನಗೆ ಆ ಪಾತ್ರ ತೃಪ್ತಿ ತಂದಿದೆ' ಎಂದು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT