ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾ ಪೋಷಕದಿಂದ ಧನ ಸಹಾಯ ವಿತರಣೆ

Last Updated 19 ಅಕ್ಟೋಬರ್ 2011, 10:55 IST
ಅಕ್ಷರ ಗಾತ್ರ

ಶಿರಸಿ: ವಿದ್ಯಾ ಪೋಷಕ ಸಂಸ್ಥೆ ಆಶ್ರಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಪ್ರತಿಭಾವಂತ ಅರ್ಹ ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿನ ಧನ ಸಹಾಯ ವಿತರಿಸುವ ಕಾರ್ಯಕ್ರಮ ಏರ್ಪಾಟಾಗಿದೆ.

ಶಿರಸಿ, ಯಲ್ಲಾಪುರ, ಮುಂಡಗೋಡ ತಾಲ್ಲೂಕು ವಿದ್ಯಾರ್ಥಿಗಳಿಗೆ ಧನ ಸಹಾಯ ವಿತರಿಸುವ ಕಾರ್ಯಕ್ರಮ ಅ.22 ಮಧ್ಯಾಹ್ನ 3.30ಗಂಟೆಗೆ ಕಡವೆ ಶ್ರೀಪಾದ ಹೆಗಡೆ ಕಲ್ಯಾಣ ಮಂಟಪದಲ್ಲಿ ಏರ್ಪಾಟಾಗಿದೆ. ಸಿದ್ದಾಪುರ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಅ.23 ಮಧ್ಯಾಹ್ನ 3.30ಗಂಟೆಗೆ ಸಿದ್ದಾಪುರ ಶಂಕರ ಮಠದಲ್ಲಿ, ಕಾರವಾರ, ಕುಮಟಾ, ಹೊನ್ನಾವರ ಮತ್ತು ಭಟ್ಕಳ ತಾಲ್ಲೂಕುಗಳ ವಿದ್ಯಾರ್ಥಿಗಳಿಗೆ ಹೊನ್ನಾವರದ ಹವ್ಯಕ ಸಭಾಭವನದಲ್ಲಿ ಅ.24ರ ಮಧ್ಯಾಹ್ನ 3.30ಗಂಟೆಗೆ ಧನ ಸಹಾಯ ವಿತರಣೆ ಕಾರ್ಯಕ್ರಮ ಏರ್ಪಾಟಾಗಿದೆ ಎಂದು ಪ್ರಕಟಣೆ ತಿಳಿಸಿದೆ. 

 ವೃದ್ಧಾಪ್ಯ ವೇತನ, ಅಂಗವಿಕಲ ವೇತನ, ವಿಧವಾ ವೇತನ ಹಾಗೂ ಸಂಧ್ಯಾ ಸುರಕ್ಷಾ ಯೋಜನೆ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆ ಅಡಿಯ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳು ಕಡ್ಡಾಯವಾಗಿ `ಆಧಾರ~ ಸಂಖ್ಯೆ ಪಡೆಯಬೇಕು ಎಂದು ತಹಸೀಲ್ದಾರರು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಆಧಾರ ಯೋಜನೆ ಅಡಿಯಲ್ಲಿ ಮಾಹಿತಿ ನೀಡಿ ಆಧಾರ ಸಂಖ್ಯೆ ಪಡೆದು ಆರು ತಿಂಗಳ ಒಳಗೆ ಸಂಬಂಧಿಸಿದ ತಹಸೀಲ್ದಾರರಿಗೆ ಸಲ್ಲಿಸದಿದ್ದಲ್ಲಿ ಅಂತಹ ಫಲಾನುಭವಿಗಳ ಪಿಂಚಣಿ ತಾತ್ಕಾಲಿ ಕವಾಗಿ ತಡೆಹಿಡಿ ಯಲಾಗುತ್ತದೆ. ಈ ಯೋಜನೆಗಳ ಫಲಾನುಭವಿಗಳು ಆಧಾರ ನೋಂದಣಿ ಕೇಂದ್ರಕ್ಕೆ ಹೋಗುವಾಗ ತಮ್ಮಲ್ಲಿರುವ ಪಿಂಚಣಿ ಮಂಜೂರಿ ಆದೇಶದ ಪ್ರತಿ, ಬ್ಯಾಂಕ್ ಪುಸ್ತಕದ ಮಾಹಿತಿ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT