ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾಗೆ ಶಾರುಖ್ ಜೊತೆಯಾಗುವಾಸೆ!

Last Updated 17 ಮೇ 2012, 19:30 IST
ಅಕ್ಷರ ಗಾತ್ರ

ವಿದ್ಯಾಬಾಲನ್‌ಗೆ ಪ್ರಣಯ ಕತೆಯೊಂದರಲ್ಲಿ ಶಾರುಖ್ ಖಾನ್ ಜೊತೆ ನಟಿಸುವ ಆಸೆಯಂತೆ! ಎಲ್ಲ ಹುಡುಗಿಯರೂ ತಮ್ಮ ಜೀವನದಲ್ಲೊಬ್ಬ ರಾಜ್ ಇರಲಿ ಎಂದು ಬಯಸುತ್ತಾರೆ.

ಅದೇ `ದಿಲ್‌ವಾಲೆ ದುಲ್ಹನಿಯಾ ಲೇ ಜಾಯೆಂಗೆ~ ಚಿತ್ರದಲ್ಲಿ ಶಾರುಖ್ ನಿರ್ವಹಿಸಿದ ಪಾತ್ರ. ಈಗಲೂ ಆ ಪಾತ್ರವೆಂದರೆ ಹೃದಯದಲ್ಲಿ ನದಿಯೊಂದು ಓಡುತ್ತದೆ~ ಎಂದೆಲ್ಲ ವಿದ್ಯಾ ಹೇಳಿದ್ದಾರೆ.

ಅವರಿಗೆ ಪ್ರಣಯ ಕತೆ ಎಂದರೆ ನೆನಪಾಗುವುದೇ ರಾಜೇಶ್ ಖನ್ನಾ ಮತ್ತು ಶಾರುಖ್ ಖಾನ್ ಅಂತೆ! ಹಾಗೆ ಅಮೀರ್ ಖಾನ್, ಸಲ್ಮಾನ್ ಖಾನ್ ಜೊತೆಗೂ ನಟಿಸುವಾಸೆ ಇದೆಯಂತೆ.

ಅಮೀರ್ ಖಾನ್ ಅವರ `ಸತ್ಯಮೇವ ಜಯತೆ~ ಕಾರ್ಯಕ್ರಮವನ್ನು ಅಮೀರ್ ಹೊರತು ಪಡಿಸಿದರೆ ಮತ್ಯಾರೂ ಮಾಡಲಾರರು ಎಂಬ ಮೆಚ್ಚುಗೆಯ ಮಾತನ್ನೂ ಆಡಿದ್ದಾರೆ. ವಿದ್ಯಾ ಬಾಲನ್ ಈವರೆಗೂ ಯಾವುದೇ ಖಾನ್‌ಗಳ ಜೊತೆಗೆ ನಟಿಸಿಲ್ಲ.

ಅಭಿಷೇಕ್ ಬಚ್ಚನ್ ಜೊತೆಗಿನ ನಟನೆ ಇವರಿಗೆ ಖುಷಿ ಕೊಡುತ್ತದೆಯಂತೆ. `ಪಾ~ ಚಿತ್ರದಲ್ಲಿ ಅಭಿ ಜೊತೆಗೆ ಕೆಲಸ ಮಾಡಿದ್ದು ಅನನ್ಯ ಅನುಭವ ಎನ್ನುವುದು ವಿದ್ಯಾ ಮೆಚ್ಚುಗೆ. ಇವರನ್ನು ಹೊರತು ಪಡಿಸಿದರೆ ಹೃತಿಕ್ ರೋಷನ್ ಜೊತೆಗೂ ಕೆಲಸ ಮಾಡುವಾಸೆಯಂತೆ.

ಒಂದೊಂದೇ ಹೆಸರನ್ನು ಬಿಚ್ಚಿಡುತ್ತ ಹೋದ ವಿದ್ಯಾ ಕೊನೆಗೆ ಹೇಳಿದ್ದು ಒಳ್ಳೆಯ ನಟ ಹಾಗೂ ನಿರ್ದೇಶಕರೊಂದಿಗೆ ಕೆಲಸ ಮಾಡುವ ಆಸೆ ಇದೆ ಅಂತ ತಮ್ಮ ಪಟ್ಟಿಗೆ ಪೂರ್ಣವಿರಾಮ ಇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT