ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ಜೀವನ ಮೆಲುಕು ಹಾಕಿದ ಟಾಟಾ

Last Updated 12 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ (ಪಿಟಿಐ):  ಸುಮಾರು 38 ವರ್ಷಗಳ ಹಿಂದೆ  ವಿಶ್ವದ ಪ್ರತಿಷ್ಠಿತ ಹಾರ್ವರ್ಡ್‌ ವಿಶ್ವವಿದ್ಯಾಲಯಕ್ಕೆ ವಿದ್ಯಾರ್ಥಿ­ಯಾಗಿ ಸೇರಿಕೊಂಡಾಗ ಆರಂಭದ 13  ವಾರಗಳಲ್ಲಿ ತುಂಬಾ ಗೊಂದಲ ಮತ್ತು ಮುಜುಗರಕ್ಕೆ ಒಳಗಾಗಿದ್ದಾಗಿ  ಟಾಟಾ ಸಂಸ್ಥೆಯ ಮಾಜಿ ಅಧ್ಯಕ್ಷ ರತನ್‌ ಟಾಟಾ ಹೇಳಿಕೊಂಡಿದ್ದಾರೆ.

ಬಾಸ್ಟನ್‌ನ  ಹಾರ್ವರ್ಡ್‌ ಬಿಸಿನೆಸ್‌ ಸ್ಕೂಲ್‌ (ಎಚ್‌-ಬಿ­ಎಸ್‌)ಆವರಣದಲ್ಲಿ ಟಾಟಾ ಪ್ರತಿಷ್ಠಾನ ನಿರ್ಮಿಸಿರುವ ಎಂಟು ಅಂತಸ್ತಿನ ಭವ್ಯವಾದ ಟಾಟಾ ಸಭಾಂಗಣ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ತಮ್ಮ ವಿದ್ಯಾರ್ಥಿ ಜೀವನದ ನೆನಪುಗಳನ್ನು ಮೆಲುಕು ಹಾಕಿದರು.

‘ವಿಶ್ವವಿದ್ಯಾಲಯದಲ್ಲಿ ಆರಂಭದ 13 ವಾರಗಳು ನನ್ನ ಜೀವನದ ಅವಿಸ್ಮರಣೀಯ ಕ್ಷಣಗಳು. ನನ್ನನ್ನು ನಾನು ಕಂಡುಕೊಂಡೆ. ನನ್ನನ್ನು ವಿಭಿನ್ನ ಚಿಂತನೆಗೆ ಹಚ್ಚಿದ ಆ ದಿನಗಳು ಜೀವನದ ಪಥವನ್ನೇ ಬದಲಿಸಿದವು’ ಎಂದು ಭಾವುಕರಾದರು.

‘ಒಂಟಿತನ ಕಾಡಿದರೂ ಆ ದಿನಗಳು ನನ್ನನ್ನು ಹೊಸ ಜಗತ್ತಿಗೆ ತೆರೆದು­ಕೊಳ್ಳು­ವಂತೆ ಪ್ರೇರೆಪಿಸಿದವು.  ನಾಯ­ಕತ್ವ ಗುಣಗಳನ್ನು ಹುಟ್ಟು ಹಾಕಿದವು’ ಎಂದು ಟಾಟಾ 1975ರ ಸುಮಾರಿನ ತಮ್ಮ ವಿದ್ಯಾರ್ಥಿ ಜೀವನದ ದಿನ­ಗಳನ್ನು ಸ್ಮರಿಸಿಕೊಂಡರು.

ಈ ಭವ್ಯ ಸಭಾಂಗಣ ನಿರ್ಮಾಣಕ್ಕೆ ಟಾಟಾ ಪ್ರತಿಷ್ಠಾನ ರೂ30,000 ಕೋಟಿ ದೇಣಿಗೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT