ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳಿ: ದಿಬ್ಬದ

Last Updated 4 ಸೆಪ್ಟೆಂಬರ್ 2013, 9:42 IST
ಅಕ್ಷರ ಗಾತ್ರ

ಬೆಳಗಾವಿ: `ಶಿಸ್ತು ಯಶಸ್ಸಿನ ತಳಹದಿ. ಹೀಗಾಗಿ ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳಬೇಕು' ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ (ಆರ್‌ಸಿಯು) ಕುಲಸಚಿವ ಡಾ. ಶಾಂತಿನಾಥ ದಿಬ್ಬದ ಸಲಹೆ ನೀಡಿದರು.

ಇಲ್ಲಿನ ಎಸ್‌ಎಸ್‌ಎಸ್ ಸಮಿತಿಯ ಮಹಾವೀರ ಮಿರ್ಜಿ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಜಗದೀಶ ಸವದತ್ತಿ ಪದವಿಪೂರ್ವ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಶ್ರಮ ಪಟ್ಟು ಓದಬೇಕು. ಸತತವಾಗಿ ಅಧ್ಯಯನ ಮಾಡಿದಾಗ ಮಾತ್ರ ಜೀವನದಲ್ಲಿ ಉನ್ನತ ಮಟ್ಟದವರೆಗೆ ಬೆಳೆಯಲು ಸಾಧ್ಯ ಎಂದರು.

ಎಸ್‌ಎಸ್‌ಎಸ್ ಸಮಿತಿ ಸಂಸ್ಥೆಯ ಅಧ್ಯಕ್ಷ ಜಗದೀಶ ಸವದತ್ತಿ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳು ಜೀವನದಲ್ಲಿ ಸ್ಪಷ್ಟ ಗುರಿ ಹೊಂದಬೇಕು. ಅದನ್ನು ಸಾಧಿಸಲು ನಿರಂತರವಾಗಿ ಶ್ರಮಿಸಬೇಕು. ಇದರ ಜೊತೆಗೆ ಕ್ರೀಡಾಕೂಟ ಹಾಗೂ ಸ್ಫರ್ಧಾತ್ಮಕ ಪರೀಕ್ಷೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.

ಪ್ರೊ. ವಿ.ಬಿ.ತುರಮರಿ ಸ್ವಾಗತಿಸಿದರು. ಪ್ರೊ. ಎ.ಬಿ.ಪಾಟೀಲ, ಪ್ರೊ. ನಿರ್ಮಲಾ ಗಡಾದ ವರದಿ ವಾಚನ ಮಾಡಿದರು. ವಾದಿರಾಜ ಹಾವಳಿ ವಂದಿಸಿದರು. ಮಯೂರ ಬರಗಾಲೆ ನಿರೂಪಿಸಿದರು.

ನೇತ್ರ ತಪಾಸಣಾ ಶಿಬಿರ
ಬೆಳಗಾವಿ:
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸ್ಥಳೀಯ ಶಾಖೆ ಹಾಗೂ ಸಾರ್ವಜನಿಕ ಗಣೇಶ ಉತ್ಸವ ಮಂಡಳ ವತಿಯಿಂದ ರಕ್ತದಾನ, ನೇತ್ರದಾನ ಹಾಗೂ ನೇತ್ರ ತಪಾಸಣಾ ಶಿಬಿರ ಇಲ್ಲಿನ ಶಹಾಪುರದಲ್ಲಿ ಜರುಗಿತು.

ಅಶೋಕ ಬದಾಮಿ ಮಾತನಾಡಿದರು. ವಾಸನ್ ಐ ಕೇರ್ ಆಸ್ಪತ್ರೆಯ ಡಾ. ಪ್ರಶಾಂತ ಜಾಧವ, ಕೆಎಲ್‌ಸಿ ಸಂಸ್ಥೆಯ ಅರುಣ ಮಾತನಾಡಿದರು. ಶಿಬಿರದಲ್ಲಿ 40 ಜನರು ರಕ್ತದಾನ ಮಾಡಿದರು. 202 ಜನರು ನೇತ್ರ ತಪಾಸಣೆ ಮಾಡಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT