ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ಸೃಜನಶೀಲತೆಯ ಬ್ಯೂಟಿ...

Last Updated 16 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ವಾಲ್ಟ್ ಡಿಸ್ನಿಯ `ಬ್ಯೂಟಿ ಅಂಡ್ ದಿ ಬೀಸ್ಟ್~ ನಾಟಕವನ್ನು ಸರಳ ಬಿರ್ಲಾ ಅಕಾಡೆಮಿ ವಿದ್ಯಾರ್ಥಿಗಳು ಜ್ಯೋತಿ ನಿವಾಸ್ ಸಭಾಂಗಣದಲ್ಲಿ ಈಚೆಗೆ ಪ್ರದರ್ಶಿಸಿದರು. ಅಕಾಡೆಮಿಯ 120 ವಿದ್ಯಾರ್ಥಿಗಳು ಈ ಕಲಾ ಪ್ರದರ್ಶನವನ್ನು ನಡೆಸಿಕೊಟ್ಟರು. ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ನಡೆದ ಈ ಪ್ರದರ್ಶನ ಎಲ್ಲರ ಮನಸೆಳೆಯಿತು.

`ಶಿಕ್ಷಣದ ಜತೆಗೆ ವಿದ್ಯಾರ್ಥಿಗಳನ್ನು ಪಠ್ಯೇತರ ಚಟುವಟಿಕೆಗಳಲ್ಲೂ ಉತ್ತೇಜಿಸುವ ಸಲುವಾಗಿ ಇಂಥ ಸೃಜನಾತ್ಮಕ ಚಟುವಟಿಕೆಗಳನ್ನು ಸಂಸ್ಥೆ ಪ್ರೋತ್ಸಾಹಿಸುತ್ತಾ ಬಂದಿದೆ.

ಇದು ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಪೂರಕ. ಕಳೆದ ಎಂಟು ವರ್ಷಗಳಲ್ಲಿ ಎಸ್‌ಬಿಎ ಜತೆಗೆ ವಿದ್ಯಾರ್ಥಿಗಳಿಗೆ ಜೀವನ ಕೌಶಲಗಳನ್ನು ಒದಗಿಸುವ ಕಾರ್ಯದಲ್ಲಿ ತೊಡಗಿದೆ. ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿ ನಮ್ಮ ಆದ್ಯತೆ. ಬ್ಯೂಟಿ ಅಂಡ್ ದಿಬೀಸ್ಟ್‌ನಂತಹ ನಾಟಕ ಪ್ರದರ್ಶಿಸುತ್ತಿರುವುದು ಅವರ ಸೃಜನಶೀಲತೆಯ ದ್ಯೋತಕವಾಗಿದ್ದು, ಅವರ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ~ ಎಂದು ವಿದ್ಯಾರ್ಥಿ ಕಲಾವಿದರ ಪ್ರಯತ್ನವನ್ನು ಪ್ರಶಂಸಿಸಿದರು ಎಸ್‌ಬಿಎಯ ಆಡಳಿತ ಮಂಡಳಿ ಅಧ್ಯಕ್ಷ ಕುಮಾರ್ ಮಂಗಳಂ ಬಿರ್ಲಾ. 


`ಅಭಿನಯವು ವಿದ್ಯಾರ್ಥಿಗಳ ಏಕಾಗ್ರತೆ, ಆತ್ಮ ವಿಶ್ವಾಸ, ಪ್ರತಿಭೆಯನ್ನು ಪ್ರತಿಬಿಂಬಿಸಿದೆ. ಈ ಸುಂದರ ರಂಗಪ್ರದರ್ಶನವನ್ನು ಮನೋಜ್ಞವಾಗಿ ಅಭಿನಯಿಸಿರುವುದು ಹೆಮ್ಮಯ ವಿಷಯ~ ಎಂದು ಎಸ್‌ಬಿಎ ಪ್ರಾಂಶುಪಾಲ ಶಂತನು ದಾಸ್ ಅಭಿನಂದಿಸಿದರು.

`ಬ್ಯೂಟಿ ಅಂಡ್ ದಿ ಬೀಸ್ಟ್~ ನಾಟಕವನ್ನು ಅಲೆಕ್ಸಾಂಡರ್ ಅಬ್ರಹಾಂ ನಿರ್ದೇಶಿಸಿದ್ದು, ಡೇನಿಯಲ್ ಇಲ್ಬಸ್ ಕ್ಲಿಫರ್ಡ್ ನೃತ್ಯ ನಿರ್ದೇಶನ ಮಾಡಿದ್ದರು. ರೋಹಿನ್ ಗೇಬ್ರಿಯಲ್ ಜೋಸೆಫ್ ಸಂಗೀತ ಸಂಯೋಜನೆ ಇತ್ತು. ಮೂಲ ಸಂಗೀತ ಅಲನ್ ಮೆಂಕೆನ್, ಹೋವರ್ಡ್ ಆಶ್ಮನ್ ಮತ್ತು ಟಿಮ್ ರೈಸ್ ಅವರದ್ದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT