ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳ ಆಶಾಕಿರಣ ತರಳಬಾಳು ಕಾಲೇಜು

Last Updated 21 ಜೂನ್ 2011, 6:15 IST
ಅಕ್ಷರ ಗಾತ್ರ

ರಾಣೆಬೆನ್ನೂರು: ನಗರದ ಹೊರ ವಲಯದಲ್ಲಿರುವ ತರಳಬಾಳು ಬೃಹ ನ್ಮಠವು ಜನತೆಗೆ ಧಾರ್ಮಿಕ ಸಂಸ್ಕೃತಿ ಯನ್ನು ಮೂಡಿಸುವುದರ ಜೊತೆಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಕೂಡ ರಾಜ್ಯದ ನಾನಾ ಭಾಗಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದ್ದು ವಿಶೇಷ.

ಲಿಂ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಬಹು ದೊಡ್ಡ ಕನಸು ಕಂಡಿದ್ದರು. ನಾಡಿನುದ್ದಗಲಕ್ಕೂ ಗ್ರಾಮೀಣ ಪ್ರದೇಶಗಳಲ್ಲಿ ನೂರಾರು ಶಿಕ್ಷಣ ಸಂಸ್ಥೆಗಳ ಜೊತೆಗೆ ವಿದ್ಯಾರ್ಥಿ ನಿಲಯವನ್ನು ತೆರೆದರು. ಇವುಗಳಲ್ಲಿ 1980ರಲ್ಲಿ ಶ್ರೀ ತರಳಬಾಳು ಎಂಜಿನಿಯರಿಂಗ್ ಕಾಲೇಜು ತೆರೆದರು.

ಲಿಂ.ಶಿವಕುಮಾರ ಸ್ವಾಮೀಜಿ ಅವರ ಕನಸು ನನಸಾಗುವಂತೆ ನಗರದಲ್ಲಿ ಸ್ಥಾಪಿಸಿದ ಶ್ರೀ ತರಳಬಾಳು ಎಂಜಿನಿಯ ರಿಂಗ್ ಕಾಲೇಜು ಮೂರು ದಶಕಗಳಲ್ಲಿ ಬೃಹದಾಕಾರವಾಗಿ ಬೆಳೆದು ರಾಜ್ಯದ ಎಂಜಿನಿಯರಿಂಗ್ ಶಿಕ್ಷಣದ ನಕಾಶೆ ಯಲ್ಲಿ ದಾಖಲೆ ನಿರ್ಮಿಸಿದೆ.

ಬೆಳಗಾವಿ ವಿಶ್ವೇಶ್ವರಯ್ಯ ಎಂಜಿನಿ ಯರಿಂಗ್ ವಿಶ್ವವಿದ್ಯಾಲಯದ (ವಿ.ಟಿ.ವಿ) ವ್ಯಾಪ್ತಿಯಲ್ಲಿ ಬರುವ ಈ ಕಾಲೇಜಿನಲ್ಲಿ ಬೋಧಿಸುತ್ತಿರುವ 6 ವಿಷಯಗಳಿಗೆ ನವದೆಹಲಿಯ ಅಖಿಲ ಭಾರತ ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆ ಯಿಂದ ಮಾನ್ಯತೆ ಪಡೆದಿದೆ. ಈ ಕಾಲೇಜಿನಲ್ಲಿ ಸಿವಿಲ್, ಮೆಕ್ಯಾನಿಕಲ್, ವಿದ್ಯುತ್ ಮತ್ತು ವಿದ್ಯುನ್ಮಾನ ಹಾಗೂ ಸಂಪರ್ಕ, ಗಣಕ ವಿಜ್ಞಾನ, ಮಾಹಿತಿ ವಿಜ್ಞಾನ ವಿಷಯಗಳಲ್ಲಿ ವ್ಯಾಸಂಗ ಮಾಡಬಹುದಾಗಿದೆ. ಪ್ರಸಕ್ತ ಸಾಲಿನಲ್ಲಿ 1800 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ನೇಪಾಳ, ಅಂಡಮಾನ್-ನಿಕೋಬಾರ್ ವಿದ್ಯಾರ್ಥಿಗಳೂ ವ್ಯಾಸಂಗ ಮಾಡುತ್ತಿದ್ದಾರೆ.

ಬೃಹತ್ ಕಟ್ಟಡ: ನಗರದಿಂದ 3 ಕಿ.ಮೀ. ಅಂತರದಲ್ಲಿ ರಾಷ್ಟ್ರೀಯ ಹೆದ್ದಾರಿ -4 ರ ಬಳಿ ಸುಂದರ ವಾತಾ ವರಣದಲ್ಲಿ 53 ಎಕರೆಯ ಬಹು ವಿಸ್ತಾರದಲ್ಲಿ 18 ಕೋಟಿಗೂ ಹೆಚ್ಚು ಅಂದಾಜು ವೆಚ್ಚದಲ್ಲಿ ನಿರ್ಮಿಸಿರುವ ಅತ್ಯಾಧುನಿಕ ಕಟ್ಟಡ, ಇಂಟ್‌ರ್‌ನೆಟ್ ವ್ಯವಸ್ಥೆ, ವಿಶಾಲವಾದ ಉದ್ಯಾನ ಸದಾ ಹಚ್ಚ ಹಸಿರಿನಿಂದ ಕೂಡಿದೆ.

ಉನ್ನತ ಮಟ್ಟದ ಮತ್ತು ಪರಿಪೂರ್ಣ ನಂಬಿಕೆ ಯುಳ್ಳ ಭಾವಿ ಎಂಜಿನಿಯರುಗಳನ್ನು ರೂಪಿಸಿ, ಕಾಲೇಜನ್ನು ಉತ್ಕೃಷ್ಟ ಶೈಕ್ಷಣಿಕ ಕೇಂದ್ರವನ್ನಾಗಿ ಅಭಿವೃದ್ಧಿಪಡಿ ಸುವತ್ತ ಮತ್ತು ಮಾನವ ಸಂಪನ್ಮೂ ಲದ ಅಭಿವೃದ್ಧಿಗೊಳಿಸುವುದು ಕಾಲೇಜಿನ ಮುಖ್ಯ ಉದ್ದೇಶ. ಸುಸಜ್ಜಿತ ಪ್ರಯೋಗಾಲಯಗಳು, ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಿದ್ಯಾರ್ಥಿನಿಲಯಗಳು, ಗ್ರಂಥಾಲಯ ಗಳು, ಕಾರ್ಯಾಗಾರಗಳು ಮತ್ತು ಬಸ್ ಸೌಕರ್ಯ, ಸಿಬ್ಬಂದಿ ವಸತಿ ಗೃಹ ಗಳು, ಬ್ಯಾಂಕ್, ದೂರವಾಣಿ ಸೌಲಭ್ಯ, ಪುಸ್ತಕ ಅಂಗಡಿ ಹೊಂದಿದ್ದು, ರ‌್ಯಾಗಿಂಗ್ ಮುಕ್ತ ಕಾಲೇಜು ಇದಾಗಿದೆ. 

ಸುವರ್ಣಾವಕಾಶ: ಕ್ಯಾಂಪಸ್ ಸಂದರ್ಶನ ಮತ್ತು ಪದವಿ ನಂತರ ಕಂಪೆನಿಗಳಲ್ಲಿ ಸಂದರ್ಶನಗಳಿಂದಾಗಿ ಅಸಂಖ್ಯಾತ ವಿದ್ಯಾರ್ಥಿಗಳು ಹತ್ತಾರು ಕಂಪೆನಿ ಸೇರಿದ್ದಾರೆ. ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಕಂಪೆನಿಗಳು, ಕಾಲೇಜಿನಲ್ಲಿ ಕ್ಯಾಂಪಸ್ ಸಂದರ್ಶನದ ಮೂಲಕ ವಿದ್ಯಾರ್ಥಿಗಳಿಗೆ ಉದ್ಯೋಗಾ ವಕಾಶ ಕಲ್ಪಿಸಿಕೊಟ್ಟಿದೆ. ಬರುವ ದಿನ ಗಳಲ್ಲಿ ಇನ್ನೂ ಹೆಚ್ಚಿನ ಕಂಪೆನಿಗಳು ಕ್ಯಾಂಪಸ್ ಸಂದರ್ಶನ ನಡೆಸಲಿವೆ.

2008-09ನೇ ಸಾಲಿನಲ್ಲಿ ಬೆಳ ಗಾವಿ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿ ವಿನಾಯಕ ನರಸಾಪೂರ ಬಂಗಾರದ ಪದಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಯುವ ಉದ್ದಿಮೆದಾರರಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡಿ, ಪ್ರೋತ್ಸಾಹಿಸಲಿಕ್ಕಾಗಿಯೇ ಕರ್ನಾಟಕ ಸರ್ಕಾರದ ಹಣಕಾಸು ನೆರವಿನಿಂದ ಕಾಲೇಜಿನಲ್ಲಿ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಎಂಟರ್‌ಪ್ರೀನರ್ ಸ್ಟೆಪ್ ಪಾರ್ಕ್  ಮತ್ತು ಸಾರ್ವಜನಿಕರಿಗೆ ತಿಳಿವಳಿಕೆ, ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಆಶ್ರಯದಲ್ಲಿ ಎನರ್ಜಿ ಪಾರ್ಕ್ ಅನ್ನು ಸ್ಥಾಪಿಸಿದೆ.

ಪ್ರಾಚಾರ್ಯರಾದ ಡಾ.ಎಸ್.ಎನ್. ಶಿವಲಿಂಗಪ್ಪ ಅವರು ಮಹಾವಿದ್ಯಾಲ ಯದಲ್ಲಿ ಸತತ 29 ವರ್ಷದ ಅನು ಭವವನ್ನು ಪಡೆದವರಾಗಿದ್ದು, ಕಳೆದ ಮೂರೂವರೆ ವರ್ಷಗಳಿಂದ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT