ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳ ಪರಿಕಲ್ಪನೆಯ ಸೈಕಲ್

Last Updated 14 ಜುಲೈ 2013, 19:59 IST
ಅಕ್ಷರ ಗಾತ್ರ

ಅಂಗವಿಕಲರ ಸಮುದಾಯದಲ್ಲಿ ಟ್ರೈಸಿಕಲ್‌ಗಳ (ತ್ರಿಚಕ್ರ ಸೈಕಲ್‌ಗಳು) ಬಳಕೆ ಸಾಮಾನ್ಯ. ಆದರೆ ಬಹುತೇಕರಿಗೆ ಈ ತ್ರಿಚಕ್ರ ಸೈಕಲ್‌ಗಳನ್ನು ಕೈಗಳಿಂದ ತುಳಿಯುವಷ್ಟು ಶಕ್ತಿ ಇರುವುದಿಲ್ಲ. ಇಂತಹ ಜನರಿಗೆ ಉಪಯೋಗವಾಗಲೆಂಬ ಉದ್ದೇಶದಿಂದ ಬಿಎಂಎಸ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಬ್ಯಾಟರಿ ಚಾಲಿತ ವಿಶೇಷ ಟ್ರೈ ಸಿಕಲ್‌ಗಳನ್ನು ಆವಿಷ್ಕರಿಸಿದ್ದಾರೆ. ಈ ನೂತನ ಆವಿಷ್ಕಾರದ ಟ್ರೈಸಿಕಲ್‌ಗೆ ವಿದ್ಯುತ್ ಮೋಟಾರ್ ಅಳವಡಿಸಲಾಗಿದೆ.

ಕೈಚಾಲಿತ ತ್ರಿಚಕ್ರ ಸೈಕಲ್‌ಗೆ ಬ್ಯಾಟರಿ ಹಾಗೂ ನಿಯಂತ್ರಕವನ್ನು ಅಳವಡಿಸುವ ಮೂಲಕ ಇದರ ಉಪಯೋಗವನ್ನು ಸುಲಭಗೊಳಿಸಲಾಗಿದೆ.

ಈ ಯೋಜನೆಯ ಮುಖ್ಯಸ್ಥರು ಹಾಗೂ ಐಎಂಇ ವಿಭಾಗದ ಪ್ರೊ. ಬಿ. ರಮೇಶ್ ನಾಯಕ್ ಅವರು, `ಈಗಿನ ತಲೆಮಾರಿನ ವಿದ್ಯಾರ್ಥಿಗಳಿಗೆ ಸಾಮಾಜಿಕ ಕಾಳಜಿ ಇರುವುದು ಈ ಆವಿಷ್ಕಾರದಿಂದ ತಿಳಿಯುತ್ತದೆ. ಇವರ ಪರಿಕಲ್ಪನೆಯಿಂದಾಗಿ ಅಂಗವಿಕಲರಿಗೆ ಬ್ಯಾಟರಿ ಆಧರಿತ ತ್ರಿಚಕ್ರ ಸೈಕಲ್‌ಗಳು ಲಭಿಸಿದಂತಾಗಿದೆ' ಎಂದರು.

   ಈ ಯೋಜನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಲ್ಲಿ ಒಬ್ಬರಾದ ನೇಹಾ ರಾವ್ ಅವರು,  `ಈ ಟ್ರೈಸಿಕಲ್ ವಿನ್ಯಾಸಗೊಳಿಸುವ ಮುನ್ನ ಕೈಗೆಟುಕುವ ದರದಲ್ಲಿ, ಅತ್ಯಂತ ದೀರ್ಘಾವಧಿ ಬಾಳಿಕೆ ಬರುವ ವಿದ್ಯುತ್ ಟ್ರೈಸಿಕಲ್ ಪರಿಚಯಿಸುವ ಉದ್ದೇಶ ಹೊಂದಲಾಗಿತ್ತು' ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT