ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳಲ್ಲಿ ಇರಬೇಕಾದ ಸದ್ಗುಣಗಳು

Last Updated 20 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಸಾಮಾನ್ಯವಾಗಿ ಶಾಲೆಯಲ್ಲಿ ಹೋಗಿ ಕಲಿಯುವವರನ್ನು ವಿದ್ಯಾರ್ಥಿಗಳು ಎನ್ನಲಾಗುತ್ತದೆ. ವಿದ್ಯಾರ್ಥಿ ಎಂದರೆ ವಿದ್ಯೆಯನ್ನು ಯಾಚಿಸುವವನು ಎಂದು ಅರ್ಥವಾಗುತ್ತದೆ. ಈ ದೃಷ್ಟಿಯಿಂದ ನೋಡುವುದಾದರೆ ಇಂದು ಶಾಲೆಗೆ ಹೋಗುವ ಎಲ್ಲರನ್ನೂ ವಿದ್ಯಾರ್ಥಿ ಎನ್ನಬಹುದೇ? ಎಂಬ ಸಂಶಯ ಉಂಟಾಗುತ್ತದೆ.

ಜ್ಞಾನಾರ್ಜನೆಯು ವಿದ್ಯಾರ್ಥಿಯ ಮೂಲ ಕರ್ತವ್ಯ. ಅದರೊಡನೆ ತನ್ನ ಸದ್ಗುಣಗಳನ್ನು ಬೆಳೆಸಿಕೊಳ್ಳುವುದು, ಒಳ್ಳೆಯ ನಡೆನುಡಿ ಕಲಿಯುವುದು ವಿದ್ಯಾರ್ಥಿಯ ಕರ್ತವ್ಯವಾಗಿದೆ.

ವಿದ್ಯಾರ್ಥಿಗಳಲ್ಲಿ ಹಲವಾರು ಉತ್ತಮ ಗುಣಗಳಿರಬೇಕು. ವಿನಯಶೀಲತೆ, ನಯಗಾರಿಕೆ, ಸಹನೆ, ಸಹಿಷ್ಣುತೆ, ಸದಭಿಪ್ರಾಯ, ಸ್ವಾಭಿಮಾನ, ಸ್ವಾವಲಂಬನೆ, ಪರೋಪಕಾರ ಬುದ್ಧಿ, ಸತ್ಯಸಂಧತೆ, ಪ್ರಾಮಾಣಿಕತನ ಇತ್ಯಾದಿ ಹಲವಾರು ಗುಣಗಳಿರಬೇಕು. ವಿದ್ಯಾಭಿರುಚಿಯು ಎಲ್ಲಕ್ಕೂ ಮೊದಲಿನ ಸದ್ಗುಣ.
 
ದಿನದಿನದ ಕೆಲಸವನ್ನು ಸ್ವಲ್ಪವೂ ತಪ್ಪದೆ ಮಾಡುವ ಕರ್ತವ್ಯ ಪಾರಾಯಣತೆ ವಿದ್ಯಾರ್ಥಿಯಲ್ಲಿರಬೇಕು. ಪಾಠದಲ್ಲಿ ಹೇಗೊ ಹಾಗೆಯೇ ಪಠ್ಯೇತರ ಚಟುವಟಿಕೆಗಳಲ್ಲಿಯೂ ಉತ್ಸಾಹವುಳ್ಳವನಾಗಿರಬೇಕು.

ಗುರುಹಿರಿಯರಲ್ಲಿ ವಿಧೇಯತೆ, ಗೌರವಗಳನ್ನು ವ್ಯಕ್ತಪಡಿಸುವ ಗುಣವುಳ್ಳವನಾಗಿರಬೇಕು.ಒಮ್ಮೆಲೇ ಎಲ್ಲಾ ಸದ್ಗುಣಗಳನ್ನು ನಮ್ಮದಾಗಿಸಿಕೊಳ್ಳಲು ಬರುವುದಿಲ್ಲ. ಅದಕ್ಕಾಗಿ ಸತತ ಶ್ರಮಿಸಬೇಕು.

ಬೇರೆಯವರೊಡನೆ ಬೆರೆತು ನಮ್ಮಲ್ಲಿರುವ ಲೋಪದೋಷಗಳನ್ನು ಹೋಗಲಾಡಿಸಲು ಯತ್ನಿಸಬೇಕು. ಕಷ್ಟಪಟ್ಟು ದುಡಿಯುವುದರಿಂದ ಉತ್ತಮ ಗುಣಗಳನ್ನು ರೂಪಿಸಿಕೊಳ್ಳಲು ಬರುತ್ತದೆ.
 
`ಸಾಧಿಸಿದರೆ ಸಬಳ ನುಂಗಬಹುದು~ ಎಂಬ ನಾಣ್ನುಡಿ ಇದೆ. ಸದ್ಗುಣಗಳಿಂದ ಕೂಡಿದ ವಿದ್ಯಾರ್ಥಿಯು ಆದರ್ಶಪ್ರಾಯವೆನಿಸುವನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT