ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳಿಗೆ ಸದೃಢ ಮನಸ್ಸು ಅಗತ್ಯ

Last Updated 12 ಜನವರಿ 2012, 6:10 IST
ಅಕ್ಷರ ಗಾತ್ರ

ಶಿಗ್ಗಾವಿ: ವಿದ್ಯಾರ್ಥಿಗಳಲ್ಲಿನ ಸದೃಢವಾದ ಮನಸ್ಸು ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಪೂರಕವಾಗಿದೆ.ಜೊತೆಗೆ   ಸುತ್ತಲಿನ ವಾತಾವರಣ ಉತ್ತಮ ವಾಗಿರಬೇಕು ಎಂದು ಡಾ. ಮಮತಾ ಪಾಟೀಲ ಹೇಳಿದರು.

ತಾಲ್ಲೂಕಿನ ಬಂಕಾಪುರ ಪಟ್ಟಣದ ಸರ್ಕಾರಿ ಪದವಿ ಮಹಾವಿದ್ಯಾಲಯದ ಆವರಣದಲ್ಲಿ  ಬುಧವಾರ ನಡೆದ ವಿದ್ಯಾರ್ಥಿಗಳ  ಆರೋಗ್ಯ ಸಮಸ್ಯೆ ಕುರಿತು ವಿಶೇಷ ಉಪನ್ಯಾಸ ಕಾರ್ಯಾಗಾರದಲ್ಲಿ ಅವರು ಮಾತನಾಡಿ, ಸತತ ಅಧ್ಯಯನ ಯಶಸ್ವಿಗೆ  ಮಾರ್ಗವಾಗಿದ್ದು, ಅದಕ್ಕೆ ಆರೋಗ್ಯವು ಸಹ ಅಷ್ಟೇ ಮಹತ್ವದಾಗಿದೆ. ಯುವಕರು ತಮ್ಮಿಲ್ಲಿನ ದುಷ್ಚಟಗಳನ್ನು ಬಿಟ್ಟು ಅಧ್ಯಯನದ ಕಡೆ ಹೆಚ್ಚಿನ ಗಮನಹರಿಸಿ, ಓದುವ ವಿಷಯ ಹಾಗೂ ಮಾಡುವ ಕೆಲಸದಲ್ಲಿ ಆತ್ಮವಿಶ್ವಾಸ, ನಂಬಿಕೆ ಅಗತ್ಯವಾಗಿದೆ. ಹಾಗಿದ್ದಾಗ ಅಸಾಧ್ಯವಾದದ್ದನ್ನು ಸಾಧಿಸಬಹುದು ಎಂದರು.

ಟಿ.ವಿ. ಮಾದ್ಯಮಗಳ ಅಬ್ಬರದಿಂದ  ಹಾಗೂ ವಿದೇಶ ಸಂಸ್ಕೃತ ವ್ಯಾಮೋಹದಿಂದ ವಿದ್ಯಾರ್ಥಿಗಳು  ಮಕ್ಕಳೂ ದಾರಿ ತಪ್ಪುತ್ತಿದ್ದಾರೆ ಎಂಬ ಭಯ ಪಾಲಕ ರನ್ನು ನಿತ್ಯ ಕಾಡುತ್ತಿದೆ. ಉತ್ತಮ ಆರೋಗ್ಯ ಪಡೆ ಯುವ ಮೂಲಕ ಜೀವನದ ಗುಣಮಟ್ಟ ಹೆಚ್ಚಿಸಿ ಕೊಳ್ಳಬೇಕು ಎಂದು ಹೇಳಿದರು.

ಪ್ರಾಚಾರ್ಯ ನರಸಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹದಿ-ಹರೆಯದ ಯುವಕರಲ್ಲಿ ಸದೃಢವಾದ ದೇಹ ಹಾಗೂ ಮನಸ್ಸಿನ ಶುದ್ಧತೆ  ಉದ್ದೇಶ ಈ ಕಾರ್ಯಾಗಾರದ್ದಾಗಿದ್ದು,   ಚಂಚಲತೆ ದೂರ ಮಾಡುವ ಮೂಲಕ ಓದಿನಲ್ಲಿ ಕೇಂದ್ರಿ ಕರಿಸಬೇಕು. ಅದರಿಂದ ಭವಿಷ್ಯದಲ್ಲಿ ಜಯಗಳಿಸಲು ಸಾಧ್ಯವಿದೆ ಎಂದು ಹೇಳಿದರು.

ಪ್ರೊ. ಸುಜಾತಾ ಕಡ್ಲಿ ಕಾರ್ಯಾಗಾರದ ನೇತೃತ್ವ ವಹಿಸಿದ್ದರು, ಯಮುನಾ ಕೋಣಸೇರೆ, ಡಿ.ಎಸ್. ಸೋಗಲದ, ಜಿ.ಸಿ.ಬಜ್ಜೆ, ತಾರಾಮತಿ ನಾಕೋಡ, ಚಂಗದೀಶ ಚಂದ್ರಗೇರಿ, ಅನೀತಾ ಪಾಟೀಲ, ಸವಿತಾ ಮಲ್ಲಿ ಗಾಂವ, ಎಂ.ಜಿ.ರಂಗನವರ, ಸಂತೋಷ ಕುಮಾರ, ವಿ.ಎಸ್. ಗುಡಿಗೇರಿ, ಉಮೇಶ, ಪ್ರಕಾಶ, ಹೊಳೆಮ್ಮನವರ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT