ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗೆ ಮೂತ್ರ ಕುಡಿಸಿದ ಮತ್ತೊಂದು ಘಟನೆ:ಮೂವರು ಶಿಕ್ಷಕರ ಅಮಾನತು

Last Updated 21 ಜುಲೈ 2012, 19:30 IST
ಅಕ್ಷರ ಗಾತ್ರ

ಪೆರಂಬಲೂರ್ (ತಮಿಳುನಾಡು)(ಪಿಟಿಐ): ಮೂವರು ಶಿಕ್ಷಕರು ಬಲವಂತವಾಗಿ 14 ವರ್ಷದ  ವಿದ್ಯಾರ್ಥಿಯೊಬ್ಬನಿಗೆ ಆತನ ಮೂತ್ರವನ್ನು ಬಲವಂತವಾಗಿ ಕುಡಿಸಿದ ಘಟನೆ  ತಮಿಳುನಾಡಿನ ಪೆರಂಬಲೂರ್‌ನಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಕೋಲ್ಕತ್ತದ ಶಾಂತಿನಿಕೇತನದಲ್ಲಿ ನಡೆದ ಪ್ರಕರಣ ಇನ್ನೂ ಹಸಿಯಾಗಿರುವಾಗಲೇ ಈ ಪ್ರಕರಣ ವರದಿಯಾಗಿದೆ.

ಘಟನೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಯನ್ನು ದಂಡಿಸಿದ ಆರೋಪದಲ್ಲಿ  ಮೂವರು ಶಿಕ್ಷಕರನ್ನು ಬಂಧಿಸಲಾಗಿದೆ. ವಿದ್ಯಾರ್ಥಿಯ ಪೋಷಕರು ಮಾಡಿರುವ ಆರೋಪಗಳ ಹಿನ್ನೆಲೆಯಲ್ಲಿ ಮೂವರು ಶಿಕ್ಷಕರನ್ನು ಅಮಾನತು ಮಾಡಲಾಗಿದೆ.

ಇಲಾಖಾ ಮಟ್ಟದಲ್ಲಿ ನಡೆಸಿದ ತನಿಖೆಯಲ್ಲಿ, ಬಲವಂತವಾಗಿ ವಿದ್ಯಾರ್ಥಿಗೆ ಮೂತ್ರಪಾನ ಮಾಡಲಾಗಿಲ್ಲ ಎಂದು ಕಂಡು ಬಂದಿದೆ ಪೊಲೀಸರು ತಿಳಿಸಿದ್ದಾರೆ. ಆದಾಗ್ಯೂ, ವಿದ್ಯಾರ್ಥಿಯನ್ನು ದಂಡಿಸಿದ ಆರೋಪದಲ್ಲಿ ಮೂವರು ಶಿಕ್ಷಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಈ ಘಟನೆಯು ಶುಕ್ರವಾರ ಇಲ್ಲಿನ ಅಗರಮ್ ಶೀಕರ್ ಸಿರುಮಲರ್ ಪ್ರೌಢಶಾಲೆಯಲ್ಲಿ  ನಡೆದಿದೆ ಎನ್ನಲಾಗಿದ್ದು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದ್ದಾರೆ. ವಿದ್ಯಾರ್ಥಿಯ ಪೋಷಕರು ಈ ಘಟನೆಗೆ ಸಂಬಂಧಿಸಿದಂತೆ ಶಾಲಾ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ. ಈ ಘಟನೆಗೆ ಬಗ್ಗೆ ಸಾರ್ವಜನಿಕ ವಲಯದಲ್ಲೂ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆ ನಡೆದಿರುವುದನ್ನು ಶಾಲಾ ಆಡಳಿತ ಮಂಡಳಿ  ನಿರಾಕರಿಸಿದೆ.

ತರಗತಿ ಆರಂಭವಾದ ಕೂಡಲೇ ವಿದ್ಯಾರ್ಥಿಯು ತನಗೆ ಶೌಚಾಲಯಕ್ಕೆ ತೆರಳಲು ಅವಕಾಶ ನೀಡಬೇಕು ಎಂದು ಪದೇ ಪದೇ ಮನವಿ ಮಾಡಿದ್ದಕ್ಕೆ ಶಿಕ್ಷಕರು ಬಲವಂತವಾಗಿ ಆತನ ಮೂತ್ರವನ್ನೇ ಕುಡಿಸಿದ್ದಾರೆ ಎಂದು ಪೋಷಕರು ದೂರಿನಲ್ಲಿ ಆರೋಪಿಸಿದ್ದಾರೆ.ಘಟನೆಯಿಂದ ಆಘಾತಗೊಂಡ ವಿದ್ಯಾರ್ಥಿ ಕುಂಬಕೋಣಂ ಸಮೀಪವಿರುವ ತನ್ನ ಸ್ವಗ್ರಾಮ ಶೋಲನ್‌ಮಲೆಗೆ ಓಡಿ ಹೋಗಿದ್ದು, ಆತನನ್ನು ಅಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೋಷಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT