ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿನಿಯ ಸೌಮ್ಯಳ ಆತ್ಮಹತ್ಯೆ ಪ್ರಕರಣ: ತನಿಖೆಗೆ ಒತ್ತಾಯ

Last Updated 21 ಜೂನ್ 2011, 6:10 IST
ಅಕ್ಷರ ಗಾತ್ರ

ಹಾವೇರಿ: ಶಾಲಾ ಶಿಕ್ಷಕರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯ ಸೌಮ್ಯಳ ಪ್ರಕರಣ ವನ್ನು ಸಮಗ್ರ ತನಿಖೆ ಒಪ್ಪಿಸಬೇಕು. ತಪ್ಪಿತಸ್ಥ ಶಿಕ್ಷಕರನ್ನು ಅಮಾನತು ಗೊಳಿಸಿ ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿ ನಗರದ ನೂರಾರು ಜನರು ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದ ಸಭಾಭವನದಿಂದ ಪ್ರತಿ ಭಟನಾ ಮೆರವಣಿಗೆ ಆರಂಭಿಸಿದ ಪ್ರತಿ ಭಟನಾಕಾರರು, ಶಾಲಾ ಶಿಕ್ಷಕರು ಹಾಗೂ ಆಡಳಿತ ಮಂಡಳಿ ವಿರುದ್ಧ ಘೋಷಣೆಗಳನ್ನು ಕೂಗಿದರಲ್ಲದೇ, ಸೌಮ್ಯಳ ಆತ್ಮಹತ್ಯೆ ಪ್ರಕರಣದ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿ ಸಿದರು,
ನಂತರ ಮಂಜುನಾಥ ನಗರದಲ್ಲಿ ರುವ ಜೆ.ಪಿ.ರೋಟರಿ ಶಾಲೆಗೆ ತೆರಳಿದ ಪ್ರತಿಭಟನಾಕಾರರು, ಸುಮಾರು ಒಂದು ಗಂಟೆಗಳ ಕಾಲ ಧರಣಿ ನಡೆಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಸುರೇಶ ಹೊಸಮನಿ ಮಾತ ನಾಡಿ, ನಗರದ ಜೆ.ಪಿ.ರೋಟರಿ ಶಾಲೆ ಯಲ್ಲಿ ಉತ್ತಮ ಬೋಧನೆ ಇಲ್ಲ. ಆಡಳಿತ ಮಂಡಳಿ ಕೇವಲ ಹಣಗಳಿ ಸುವುದರಲ್ಲಿಯೇ ಮಗ್ನವಾಗಿದೆ. ಒಂದು ದಿನ ಶುಲ್ಕ ನೀಡುವುದು ವಿಳಂಬ ವಾದರೆ, ದಂಡ ಸಹಿತ ಶುಲ್ಕ ಹಾಗೂ ಡೊನೇಶನ್ ವಸೂಲಿ ಮಾಡುವ ಆಡಳಿತ ಮಂಡಳಿಯವರು ಉತ್ತಮ ಬೋಧಕ ಸಿಬ್ಬಂದಿಯನ್ನು ನೇಮಿಸಿಲ್ಲ, ನಿವೃತ್ತ ಇಲ್ಲವೇ ಕಡಿಮೆ ಸಂಬಳಕ್ಕೆ ಅನರ್ಹ ಶಿಕ್ಷಕರನ್ನು ನೇಮಕ ಮಾಡಿ ಕೊಂಡು ಪಾಠ ಮಾಡಿಸುತ್ತಿದ್ದಾರೆ. ಹೀಗಾಗಿ ಮುಗ್ದ ವಿದ್ಯಾರ್ಥಿಗಳು ಆತ್ಮಹತ್ಯೆಯಂತಹ ದಾರಿ ತುಳಿಯು ತ್ತಿದ್ದಾರೆ ಎಂದು ಅಪಾದಿಸಿದರು.

ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರ ದುರ್ವರ್ತನೆಗೆ ಇನ್ನಷ್ಟು ವಿದ್ಯಾ ರ್ಥಿಗಳು ಬಲಿಯಾಗುವ ಮೊದಲು ಶಾಲೆ ಶಿಕ್ಷಕರ ಹಾಗೂ ಆಡಳಿತ ಮಂಡಳಿ ದುರ್ವರ್ತನೆ ಕುರಿತು ತನಿಖೆ ನಡೆಸಿ, ಶಾಲೆಯ ಪರವಾನಿಗೆ ಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ದರು.

ಕಳೆದ ವರ್ಷ 9ನೇ ತರಗತಿಯಲ್ಲಿದ್ದ 55 ವಿದ್ಯಾರ್ಥಿಗಳಲ್ಲಿ 23 ವಿದ್ಯಾರ್ಥಿ ಗಳು ಅನುತ್ತೀರ್ಣರಾಗಿದ್ದಾರೆಂದರೆ, ಶಾಲೆಯ ಶಿಕ್ಷಣದ ಗುಣಮಟ್ಟ ಯಾವ ರೀತಿ ಇದೇ ಎಂಬುದನ್ನು ಅರ್ಥ ಮಾಡಿ ಕೊಳ್ಳಬಹುದು. ಅನುತ್ತೀರ್ಣರಾದ 23 ವಿದ್ಯಾರ್ಥಿಗಳಲ್ಲಿ 22 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡುವು ದಾಗಿ ತಿಳಿಸಿರುವ ಶಿಕ್ಷಕರು, ಸೌಮ್ಯಳಿಗೆ ಪರೀಕ್ಷೆ ಕುಳಿತುಕೊಳ್ಳಲು ಅವಕಾಶ ನೀರಾಕರಿ ಸಿರುವುದೇ ಅವಳ ಆತ್ಮಹತ್ಯೆಗೆ ಕಾರಣ ಎಂದು ಆರೋಪಿಸಿದರು.

ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಅನಗತ್ಯ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು. ದುರ್ವರ್ತನೆ ನಡೆಸುವ ಶಿಕ್ಷರನ್ನು ಅಮಾನತ್ತುನಲ್ಲಿಟ್ಟು ಬಂಧಿಸ ಬೇಕು. ಸೌಮ್ಯಳ ಆತ್ಮಹತ್ಯೆಗೆ ಶಿಕ್ಷಕರು ಹಾಗೂ ಆಡಳಿತ ಮಂಡಳಿ ನೇರ ಹೊಣೆಯಾಗಿರುವುದರಿಂದ ಕೂಡಲೇ ಸೌಮ್ಯಗಳ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಕೊಡಿಸಬೇಕು ಎಂದು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ಉಪ ವಿಭಾಗಾ ಧಿಕಾರಿ ರಾಜೇಂದ್ರ ಚೋಳಿನ್ ಅವರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಪ್ರಕರಣ ಕುರಿತು ಸೂಕ್ತ ತನಿಖೆ ನಡೆಸ ಬೇಕೆಂದು ಒತ್ತಾಯಿಸಿದರು. ಮನವಿ ಸ್ವೀಕರಿಸಿದ ಉಪವಿಭಾಗಾಧಿಕಾರಿಗಳು ಒಂದು ವಾರದಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸುವುದಾಗಿ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ ಪುರದ, ಎಸ್.ಎಂ.ಕಟಗಿ, ಶಿವಯೋಗಿ ಹೂಗಾರ, ಮಲ್ಲಯ್ಯ ಕಬ್ಬಿಣಕಂತಿ ಮಠ, ನಾಗರಾಜ ಸೊಂಟನ ವರ, ಪುಟ್ಟಪ್ಪ ಚನ್ನಮ್ಮನವರ, ರಮೇಶ ಆನ ವಟ್ಟಿ, ರುದ್ರಪ್ಪ ಪುರದ ಸೇರಿದಂತೆ ನೂರಾರು ಜನರು, ಕ್ಷೇತ್ರ ಶಿಕ್ಷಣಾಧಿ ಕಾರಿ ರಾಮಶೆಟ್ಟಿ, ಸಿಪಿಐ ಎಂ.ಮುರು ಗೇಂದ್ರಯ್ಯ ಹಾಜರಿದ್ದರು.

ಶಾಲೆಗೆ ನೋಟಿಸ್ ಜಾರಿ
ಹಾವೇರಿ: ನಗರದ ಜೆ.ಪಿ.ರೋಟರಿ ಶಾಲೆ ವಿದ್ಯಾರ್ಥಿನಿ ಸೌಮ್ಯ ಪುರದ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಜೆ.ಪಿ.ರೋಟರಿ ಶಾಲೆಗೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ರಾಮಶೆಟ್ಟಿ ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದಾರೆ.

ಸಾರ್ವಜನಿಕರು ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸೋಮವಾರ ಪ್ರತಿ ಭಟನೆ ನಡೆಸಿ ಸೌಮ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರ ವಿರುದ್ಧ ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಲು, ಆತ್ಮಹತ್ಯೆ ಮಾಡಿಕೊಂಡ ಸೌಮ್ಯಳ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲು ಹಾಗೂ ಶಾಲೆ ಪರವಾನಿಗೆ ರದ್ದುಗೊಳಿಸಲು ಮನವಿ ಸಲ್ಲಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಶಾಲೆಯ ಹಾಗೂ ವಿದ್ಯಾರ್ಥಿನಿಗೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಸಿದ್ಧಪಡಿಸಿ ಇಟ್ಟು ಕೊಳ್ಳಲು ನೋಟಿಸ್‌ನಲ್ಲಿ ಸೂಚಿಸಿರುವ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಶೆಟ್ಟಿ ಅವರು, ನೋಟಿಸ್ ಮುಟ್ಟಿದ ಮೂರು ದಿನಗಳಲ್ಲಿ ಸದರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಹೇಳಿಕೆ ಸಲ್ಲಿಸುವಂತೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT