ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಉಳಿಸಲು ಚಲನೆ ಗ್ರಹಿಕೆ ಸ್ವಿಚ್!

Last Updated 17 ಜನವರಿ 2012, 19:30 IST
ಅಕ್ಷರ ಗಾತ್ರ

ವಿದ್ಯುಚ್ಛಕ್ತಿ  ಉತ್ಪಾದನೆ ಮತ್ತು ಬೇಡಿಕೆಗಳಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ತಲೆನೋವಿನ ಕೆಲಸವಾಗಿದೆ. ಕೈಗಾರಿಕೀಕರಣ, ನಗರೀಕರಣ, ತಂತ್ರಜ್ಞಾನ ಇತ್ಯಾದಿಗಳು ವಿದ್ಯುತ್ ಶಕ್ತಿ ಅವಲಂಬನೆಯನ್ನು ವ್ಯಾಪಕವಾಗಿ ಹೆಚ್ಚಿಸಿವೆ. ಹಳ್ಳಿಗಾಡಿನಲ್ಲಂತೂ ವಿದ್ಯುತ್ ಕಣ್ಣಾಮುಚ್ಚಾಲೆ ಹೇಳತೀರದು. ಒಂದು ಯೂನಿಟ್ ವಿದ್ಯುತ್ ಉಳಿತಾಯ ಹತ್ತು ಯೂನಿಟ್ ಉತ್ಪಾದನೆಗೆ ಸಮವಾಗಿದೆ.  

 ಮನೆ ಇರಬಹುದು ಅಥವಾ ಕಚೇರಿ ಇರಬಹುದು ಅನೇಕ ಬಾರಿ ದೀಪ, ಫ್ಯಾನ್, ಎ.ಸಿ  (ಏರ್ ಕಂಡಿಷನರ್) ಸ್ವಿಚ್ ಆನ್ ಮಾಡಿ ಹಾಗೇ ಹೋಗಿರುತ್ತೇವೆ. ಹಿಂದಿರುಗಿ ಬಂದು ನೋಡಿದಾಗ ಅಯ್ಯೋ ಆಫ್ ಮಾಡೋದು ಮರೆತೇ ಬಿಟ್ಟಿದ್ದೇ.... ಎಂದು ಗೊಣಗುತ್ತೇವೆ.

ಅದರೇನು ಮಾಡುವುದು ಅಷ್ಟೊತ್ತಿಗಾಗಲೇ ಅಪಾರ ಶಕ್ತಿ ಅಪವ್ಯಯವಾಗಿರುತ್ತದೆ. ಈ ಸಮಸ್ಯೆಗೆ ಪರಿಹಾರವಾಗಿ ಮೈಸೂರಿನ ಐಡಿಯಾಸ್ ಅನ್‌ಲಿಮಿಟೆಡ್ ಕಂಪೆನಿ - ವ್ಯಕ್ತಿಯ ಚಲನೆ ಗ್ರಹಿಸುವ ಸ್ವಿಚ್ (ಣ್ಖಉಉಘೆ ಖಉಘೆಖಣ್ಕ ಖಐಇಏ) ಅಭಿವೃದ್ಧಿಪಡಿಸಿದ್ದಾರೆ.

ಅಡುಗೆ ಮನೆ, ಸ್ನಾನದ ಮನೆ, ಕೊಠಡಿ, ಕಾರಿಡಾರು, ಸಭಾಂಗಣ... ಹೀಗೆ ಯಾವುದೇ ಜಾಗ ಇರಲಿ ಅಲ್ಲಿ ವ್ಯಕ್ತಿಯ ಇರುವಿಕೆ ಗುರುತಿಸಿ ಸ್ವಿಚ್ ಆನ್ ಮಾಡುವ ಮತ್ತು ಇಲ್ಲದಿರುವಿಕೆ ಗುರುತಿಸಿ ಆಫ್ ಮಾಡುವ ಕೆಲಸ ಮಾಡುತ್ತದೆ ಈ ಸಾಧನ. ಫ್ಯಾನ್, ಹವಾ ನಿಯಂತ್ರಣ ಸಾಧನ, ಲೈಟು ಇತ್ಯಾದಿಗಳನ್ನು ತಾನೇ ತಾನಾಗಿ ಆಫ್ ಮತ್ತು ಆನ್ ಮಾಡುವ ಸಾಮರ್ಥ್ಯ ಈ ಸಾಧನಕ್ಕಿದೆ. ವಿದ್ಯುತ್ ಉಳಿಸಲು ಮತ್ತು ಶಕ್ತಿ ವ್ಯರ್ಥವಾಗದಂತೆ ತಡೆಯಲು ಈ ಉಪಕರಣ ಸಹಕಾರಿ. ಇದು ಪರಿಸರ ಸ್ನೇಹಿ ತಂತ್ರಜ್ಞಾನವಾಗಿದೆ.

ಉಷ್ಣತೆ ಆಧಾರದ ಮೇಲೆ ಈ ಸಾಧನ ಕಾರ್ಯನಿರ್ವಹಿಸುತ್ತದೆ. ಯಾವುದೇ ಹಾನಿಕರ ವಿಕರಣಗಳನ್ನು ಹೊರಸೂಸುವುದಿಲ್ಲ. ವಿವಿಧ ಮಾದರಿಗಳಲ್ಲಿ ಈ ಉಪಕರಣ ಲಭ್ಯವಿದೆ. ಈಗಾಗಲೇ ಇರುವ ವೈರಿಂಗ್ ಜೊತೆಗೆ ಎರಡು ಅಥವಾ ಮೂರು ತಂತಿಗಳನ್ನು ಸೇರಿಸಿ ಸ್ವಿಚ್ ಬೋರ್ಡ್‌ಗೆ ಅಳವಡಿಸಲಾಗುತ್ತದೆ. ಅಳವಡಿಕೆ ವಿಧಾನವೂ ಸರಳ ಮತ್ತು ಸುಲಭ.

ಆಫ್ ಆಂಡ್ ಆನ್ ಸಮಯವನ್ನು  ಬಳಕೆದಾರರೇ ನಿಗದಿ ಮಾಡಬಹುದಾಗಿದೆ. ಕೊಠಡಿಗೆ ವ್ಯಕ್ತಿ ಕಾಲಿಟ್ಟ ಮರುಕ್ಷಣ ಲೈಟ್ ಆನ್ ಆಗಬೇಕು ಎಂದು ಸಾಧನದಲ್ಲಿ ಟೈಮರ್ ಅಡ್ಜಸ್ಟ್ ಮಾಡಿಟ್ಟರೆ ಅದರಂತೆ ಅದು ಕಾರ್ಯನಿರ್ವಹಿಸುತ್ತದೆ. ಇನ್ನು ಕೊಠಡಿಯಲ್ಲಿ ಯಾರೂ ಇಲ್ಲದಿದ್ದಾಗ ಎಷ್ಟು ನಿಮಿಷದ ನಂತರ ಲೈಟ್ಸ್ ಆಫ್ ಆಗಬೇಕು ಎಂಬುದನ್ನು ಫಿಕ್ಸ್ ಮಾಡಿಟ್ಟರೆ ಸಾಕು ಸಲೀಸಾಗಿ ಅದು ಕೆಲಸಮಾಡುತ್ತದೆ.

ಬಹುಮಹಡಿ ಕಟ್ಟಡಗಳ ಕಾರಿಡಾರು, ಕಚೇರಿ, ಕಲ್ಯಾಣಮಂಟಪ, ಸಭಾಂಗಣ , ವಿಶ್ರಾಂತಿ ಕೊಠಡಿ, ಶಾಪಿಂಗ್ ಮಾಲ್, ಕಾರ್ಖಾನೆ, ಪ್ರಯೋಗಾಲಯ, ಬಾತ್ ರೂಂ , ಶೌಚಾಲಯ ಹೀಗೆ  ಎಲ್ಲ ಕಡೆಗಳಲ್ಲಿ ಈ ಸಾಧನ ಅಳವಡಿಸಬಹುದು.

 ಈ ಚಲನೆ ಗ್ರಹಿಕೆ ಸ್ವಿಚ್ ಅಳವಡಿಕೆಗೆ ಹೆಚ್ಚು ಖರ್ಚು ತಗುಲುವುದಿಲ್ಲ.  ಮಾಹಿತಿಗೆ ಠಿಠಿ://ಡಿಡಿಡಿ.ಜಿಛಿಠ್ಠ್ಞ್ಝಜಿಞಜಿಠಿಛಿ.ಜ್ಞಿ ಅಥವಾ ಮೊಬೈಲ್: 93421 87227 ಸಂಪರ್ಕಿಸಬಹುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT