ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಕೊರತೆ: ಸೊರಗುತ್ತಿರುವ ಬೆಳೆ

Last Updated 25 ಸೆಪ್ಟೆಂಬರ್ 2011, 19:50 IST
ಅಕ್ಷರ ಗಾತ್ರ

ಹಳೇಬೀಡು:  ಮೂರು ದಿನಗಳಿಂದ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾ ಗದೆ ಇರುವುದರಿಂದ ಹಲವು ಬೆಳೆಗಳಿಗೆ ಹಾನಿಯಾಗಿದೆ.

ವಿದ್ಯುತ್ ಅಭಾವದ ಜೊತೆಗೆ ಮಳೆ ಇಲ್ಲದೆ ಬಿಸಿಲಿನ ತಾಪ ಹೆಚ್ಚಾಗಿರು ವುದರಿಂದ ಬೆಳೆಗಳು ಬಾಡುತ್ತಿವೆ. ಬೆಳೆಗಳು ಒಣಗುವ ಹಂತ ತಲುಪಿವೆ. ಮಳೆ ಹಾಗೂ ವಿದ್ಯುತ್ ಕ್ಷಾಮದಿಂದ ರೈತವರ್ಗ ಕಣ್ಣೀರಲ್ಲಿ ಕೈತೊಳೆಯು ವಂತಾಗಿದೆ.

`ಸೆಸ್ಕ್‌ನವರು ಮಾಹಿತಿ ನೀಡದೆ ಬೇಕಾಬಿಟ್ಟಿ ವಿದ್ಯುತ್ ಸರಬರಾಜು ಮಾಡುತ್ತಿರುವುದರಿಂದ ಬೆಳೆಗಳಿಗೆ ನೀರುಣಿಸಲು ದಿನವಿಡಿ ಜಮೀನಿನಲ್ಲಿ  ಕಾಯುವಂತಾಗಿದೆ. ಮನೆಗೆ ಬಂದಾಗ ವಿದ್ಯುತ್ ಬಂದರೆ ಪುನಃ ಹೊಲಕ್ಕೆ ಹೋಗುವುದರಲ್ಲಿ ನಾಪತ್ತೆ ಯಾಗುತ್ತದೆ. ದಿನದಲ್ಲಿ ಕನಿಷ್ಠ ಮೂರು ಗಂಟೆಯೂ  ಗುಣಮಟ್ಟದ ವಿದ್ಯುತ್ ಸರಬರಾಜಾಗುತ್ತಿಲ್ಲ~ ಎಂಬುದು ರೈತರ ಅಳಲು.

ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ವಿದ್ಯಾರ್ಥಿಗಳು ರಾತ್ರಿ ಅಭ್ಯಾಸ ಮಾಡಲು ತೊಂದರೆಯಾಗಿದೆ. ಅರ್ಧ ವಾರ್ಷಿಕ ಪರೀಕ್ಷೆ ಸಮಯದಲ್ಲಿಯೂ ವಿದ್ಯುತ್ ತೆಗೆಯುತ್ತಿರುವುದರಿಂದ ಪೋಷಕರು ಹಿಡಿಶಾಪ ಹಾಕುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT