ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ತಂತಿ ಬದಲಿಸಲು ಆಗ್ರಹಿಸಿ ಧರಣಿ

Last Updated 25 ಜನವರಿ 2012, 4:25 IST
ಅಕ್ಷರ ಗಾತ್ರ

ಕುರುಗೋಡು: ಕಲ್ಲುಕಂಭ ಗ್ರಾಮದಲ್ಲಿ ಅಳವಡಿಸಿರುವ ವಿದ್ಯುತ್ ಸರಬರಾಜು ತಂತಿ ಮತ್ತು ಶಿಥಿಲಾವಸ್ಥೆಯಲ್ಲಿರುವ ಕಂಬಗಳನ್ನು ತಕ್ಷಣ ಬದಲಿಸಬೇಕೆಂದು ಆಗ್ರಹಿಸಿ ಮಂಗಳವಾರದಿಂದ ಸರದಿ ಉಪವಾಸ ಸತ್ಯಾಗ್ರ ಪ್ರಾರಂಭಿಸಿದರು.
 
ಈ ಸಂದರ್ಭದಲ್ಲಿ ಉಪವಾಸ ನಿರತ ಪಂಪಾಪತಿ ಮಾತನಾಡಿ, ಗ್ರಾಮದ ಒಂದು ಮತ್ತು ಎರಡನೇ ವಾರ್ಡಿನಲ್ಲಿ ಕಳೆದ ಮೂರು ದಶಕಗಳ ಹಿಂದೆ ಅಳವಡಿಸಿರುವ ಬೀದಿ ದೀಪದ ವಿದ್ಯುತ್ ಕಂಬ ಸಂಪೂರ್ಣ ಸಿಥಲಗೊಂಡಿವೆ. ಇದಕ್ಕೆ ಅಳವಡಿಸಿದ ತಂತಿ ಜೋತಾಡುತ್ತಿದ್ದು ಅಪಾಯಕ್ಕೆ ಆಹ್ವಾನ ಮಾಡುತ್ತಿದೆ.
 
ಕೆಲವು ಕಂಬಗಳಲ್ಲಿ ಕಬ್ಬಿಣದ ಸಲಾಕೆಗಳು ಕಾಣಿಸುತ್ತಿದ್ದು, ಹಾದಿಹೋಕರಿಗೆ ವಿದ್ಯು ಶಾಕ್ ಹೊಡೆದ ಉದಾಹರಣೆಗಳಿಗೆ ಎಂದು ತಿಳಿಸಿದರು.

 ಈ ವಾರ್ಡಿನ ಸುತ್ತಮುತ್ತಲು ಹೊಲಗದ್ದೆ ಇರುವುದರಿಂದ ವಿಷಜಂತುವಿನ ಹಾವಳಿ ಇದೆ. ಈ ಭಾಗದ ವಾಸಿಸುವ ಜನರು ನಿತ್ಯ ಭಯದಲ್ಲಿ ಬದುಕು ವಂತಾಗಿದೆ. ಈ ಬಗ್ಗೆ ಅನೇಕ ಬಾರಿ ವಿದ್ಯುತ್ ಅಧಿಕಾರಿಗೆ ಮನವಿ ಸಲ್ಲಿಸಿದರು ಬರವಸೆ ಬಿಟ್ಟು ಮತ್ತೇನು ದೊರೆತಿಲ್ಲ. ಇದರಿಂದ ಹೋರಾಟ ಅನಿವಾರ್ಯವಾಗಿದೆ ಎಂದರು. 

 ಕೆಲ ಸಮಯದ ನಂತರ ಕುರುಗೋಡು ಜೆಸ್ಕಾಂ ಸಹಾಯಕ ಅಭಿಂತರ ವೈಎಂ. ವೈದ್ಯನಾಥ್ ಧರಣಿ ನಿರತ ಸ್ಥಳಕ್ಕೆ ಆಗಮಿಸಿ ಶನಿವಾರದೊಳಗೆ ಕಂಬ ಮತ್ತು ತಂತಿ ಬದಲಿಸುವ ಭರವಸೆ ನೀಡಿದರು. ಆದರೆ ಇದಕ್ಕೆ ಒಪ್ಪದ ಪ್ರತಿಭಟನಾ ನಿರತರು ಕಂಬ ಮತ್ತು ತಂತಿ ಗ್ರಾಮಕ್ಕೆ ಬರುವವರೆಗೆ ಉಪವಾಸ ಮುಂದುವರೆಸುವ ಪಟ್ಟು ಹಿಡಿದಿದ್ದಾರೆ.

 ಮೊದಲದಿನವಾದ ಮಂಗಳವಾರ ಗ್ರಾಮದ ಯವಕರಾದ ಪಂಪಾಪತಿ ಮತ್ತು ಪ್ರಭುಶೇಖರಗೌಡ ಉಪವಾಸ ಕುಳಿತಿದ್ದಾರೆ. 

 ಗ್ರಾಮದ ಸ್ವಾಮಿ ವಿವೇಕಾನಂದ ಯುವಕ ಸಂಘ, ಬಾಬು ಜಗ್‌ಜೀವನರಾಮ್ ಸಂಘ, ಪುಟ್ಟರಾಜ ಗವಾಯಿ ಯುವಕ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನೇತೃತ್ವ ವಹಿಸಿದ್ದರು. ಗ್ರಾಮದ ಮುಖಂಡರು, ತಾ.ಪಂ. ಮತ್ತು ಗ್ರಾ.ಪಂ. ಸದಸ್ಯರು ಭಾಗವಹಿಸಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT