ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಸಂಪರ್ಕ ಕಲ್ಪಿಸಲು ಒತ್ತಾಯ

Last Updated 8 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಕೆಂಗೇರಿ: ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಒತ್ತಾಯಿಸಿ ಮಂಗನಹಳ್ಳಿ, ಜನಶ್ರೀ ನಗರದ ನಾಗರಿಕರು ಬುಧವಾರ ಮಾಗಡಿ ರಸ್ತೆ ಅಂಜನಾನಗರ ಮುಖ್ಯ ರಸ್ತೆಯಲ್ಲಿರುವ `ಬೆಸ್ಕಾಂ~ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಅಂಧಕಾರದಲ್ಲಿ ಕಾಲ ಕಳೆಯುತ್ತಿರುವ ಜನಶ್ರೀನಗರ ಸಚಿವೆ ಶೋಭಾ ಕರಂದ್ಲಾಜೆ ಅವರ ಸ್ವಕ್ಷೇತ್ರಕ್ಕೆ ಸೇರಿದೆ. ವಿದ್ಯುತ್ ಸಂಪರ್ಕ ಕಲ್ಪಿಸುವ ಸಂಬಂಧ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಕೆಲವು ರಾಜಕೀಯ ಮುಖಂಡರ ಮಾತುಗಳಿಗೆ ಮಣಿದಿರುವ ಸಚಿವರು, ವಿದ್ಯುತ್ ಸಂಪರ್ಕ ಕಲ್ಪಿಸಲು ಉದಾಸೀನ ತೋರುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಸುಮಾರು 700 ಮನೆಗಳನ್ನು ಹೊಂದಿರುವ ಪ್ರದೇಶದ ನಿವಾಸಿಗಳಿಗೆ ದೀಪದ ಬೆಳಕೇ ಗತಿಯಾಗಿದ್ದು, ಜನತೆ ಪ್ರತಿ ದಿನ ಕಗ್ಗತ್ತಲಲ್ಲಿಯೇ ಕಾಲ ಕಳೆಯುವಂತಾಗಿದೆ ಎಂದು ಅವರು ಸಮಸ್ಯೆಯನ್ನು ತೋಡಿಕೊಂಡರು.
ಶಾಸಕ ಬಾಲಕೃಷ್ಣ, ಕರ್ನಾಟಕ ನಾಡ ಸಂರಕ್ಷಣಾ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಮಾಸ್ತಿ ಕರೀಗೌಡ, ಮುಖಂಡರಾದ ಶೋಭಾ ಆನಂದ್, ನಾಗರಾಜು ಯಶೋಧ ತಿಮ್ಮೇಗೌಡ, ಪ್ರಕಾಶ್ ಇತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT