ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಸಮರ್ಪಕ ಪೂರೈಕೆಗೆ ರೈತರ ಆಗ್ರಹ

Last Updated 5 ಡಿಸೆಂಬರ್ 2012, 8:38 IST
ಅಕ್ಷರ ಗಾತ್ರ

ಕೊಳ್ಳೇಗಾಲ: ರೈತರಿಗೆ ಹಿಂದಿನಂತೆ ಸಮರ್ಪಕ ವಿದ್ಯುತ್ ಪೂರೈಸಬೇಕು, ಕಬಿನಿ ಜಲಾಶಯದಿಂದ ರೈತರ ಜಮೀನಿಗೆ ನೀರು ಹರಿಸಿ ಬೆಳೆ   ರಕ್ಷಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕೊಳ್ಳೇಗಾಲ ತಾಲ್ಲೂಕು ಘಟಕದ ವತಿಯಿಂದ ಮಂಗಳವಾರ  ಉಪ ವಿಭಾಗಾಧಿಕಾರಿ ಕಚೇರಿ ಮುಂದೆ ಅನಿರ್ಧಿಷ್ಟ ಧರಣಿ ನಡೆಯಿತು.

   ರೈತಮುಖಂಡ ನಂಜುಂಡಸ್ವಾಮಿ ನೇತೃತ್ವದಲ್ಲಿ ಧರಣಿ ನಡೆಯಿತು.ಸ್ಥಳಕ್ಕೆ ಚೆಸ್ಕಾಂ, ಕಬಿನಿ ಹಿರಿಯ ಅಧಿಕಾರಿಗಳು ಬಂದು                 ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು.

ಉಪವಿಭಾಗಾಧಿಕಾರಿ ಎ.ಬಿ.      ಬಸವರಾಜು ಧರಣಿ ನಿರತರನ್ನು      ಉದ್ದೇಶಿಸಿ ಮಾತನಾಡಿ, ಅಧಿವೇಶನದ                     ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳು ನಿರತರಾಗಿರುವುದರಿಂದ ಸ್ಥಳಕ್ಕೆ  ಕರೆಸಲು ಸಾಧ್ಯವಿಲ್ಲ. ಸರ್ಕಾರದಿಂದ ರೈತರಿಗೆ ಪರಿಹಾರವನ್ನು ವಿತರಣೆ    ಮಾಡಲಾಗುತ್ತಿದೆ. ಈ ಹಣವನ್ನು      ರೈತರು ಪಡೆದುಕೊಳ್ಳಲು ಮುಂದಾ ಬೇಕು ಎಂದು ಮಾಹಿತಿ ನೀಡಿದರು.

ಕಚೇರಿ ಮುಂಭಾಗದಲ್ಲೇ ಕುಳಿತ    ರೈತರು ಧರಣಿ ಮುಂದುವರೆಸಿದರು. ಸ್ಥಳದಲ್ಲೇ ಕಡಲೇಪುರಿ ತಿಂದು ನೀರು ಕುಡಿದ ರೈತರು, ಅಧಿಕಾರಿಗಳು ಬಂದು ಸಮಂಜಸ ಭರವಸೆ ನೀಡುವ  ತನಕ ಧರಣಿಯನ್ನು ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು.
ಚೆಸ್ಕಾಂ ಕಾರ್ಯಪಾಲಕ   ಅಭಿಯಂತರ ವಿನಯ್ ಮತ್ತು ಎಇಇ     ಶ್ರೀಧರ್ ಸ್ಥಳಕ್ಕೆ ಆಗಮಿಸಿ ವಿದ್ಯುತ್    ಸಮಸ್ಯೆ ಬಗ್ಗೆ ಮಾಹಿತಿ                                  ನೀಡುತ್ತಿದ್ದಂತೆಯೇ, ರೈತರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ವಿದ್ಯುತ್ ಕೊರತೆ ಕಾರಣ ಸಮರ್ಪಕ ವಿದ್ಯುತ್ ಪೂರೈಸಲು ಸಾಧ್ಯವಾಗುತ್ತಿಲ್ಲ. ನಾವು ಸರ್ಕಾರದ ಆದೇಶದಂತೆ ನಡೆಯಬೇಕಿದೆ ಎಂದು    ವಿನಯ್ ತಿಳಿಸಿದರು.

ಕಬಿನಿ ಎಇಇ ಮಂಜುನಾಥ್,   ನಟೇಶ್ ಸ್ಥಳಕ್ಕೆ ಬಂದು ನೀರಿನ ಸಮಸ್ಯೆ ಬಗ್ಗೆ ವಿವರಿಸಿದರು.
ಇದಕ್ಕೆ ಮಣಿಯದ ರೈತರು ಕಾರ್ಯಪಾಲಕ ಅಭಿಯಂತರರು ಸ್ಥಳಕ್ಕೆ ಬಾರದ ಹೊರತು ಧರಣಿ ಕೈಬಿಡುವುದಿಲ್ಲ ಎಂದು ಪಟ್ಟು           ಹಿಡಿದರು.

ರೈತಮುಖಂಡ ನಂಜುಂಡಸ್ವಾಮಿ, ರೇಚಣ್ಣಸ್ವಾಮಿ, ಶಿವಕುಮಾರ್, ರವಿ, ಸಂಪತ್‌ಕುಮಾರ್ ಇತರರು ಧರಣಿ  ನಿರತರನ್ನುದ್ದೇಶಿಸಿ ಮಾತನಾಡಿದರು.

ಕಬಿನಿ ಹಿರಿಯ ಅಧಿಕಾರಿ ಸ್ಥಳಕ್ಕೆ ಬಾರದಿರುವ ಕಾರಣ ಮತ್ತು ಚೆಸ್ಕಾಂ ಅಧಿಕಾರಿಗಳು ವಿದ್ಯುತ್ ಪೂರೈಸುವ ಭರವಸೆ ನೀಡದ ಕಾರಣ ಧರಣಿ ಮುಂದುರೆಸುವುದಾಗಿ ನಂಜುಂಡಸ್ವಾಮಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT