ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಸಮಸ್ಯೆ: ಮುಂಜಾಗ್ರತೆ ಸೂಚನೆ

Last Updated 8 ಜೂನ್ 2011, 8:05 IST
ಅಕ್ಷರ ಗಾತ್ರ

ಸಿದ್ದಾಪುರ: ಈ ಮಳೆಗಾಲದ ಸಂದರ್ಭದಲ್ಲಿ ತಾಲ್ಲೂಕಿನ ಯಾವುದೇ ಪ್ರದೇಶದಲ್ಲಿ ವಾರಗಟ್ಟಲೆ ವಿದ್ಯುತ್ ಇಲ್ಲದಂತಾಗಬಾರದು. ಅಂಥ ಪರಿಸ್ಥಿತಿ ಬಾರದಂತೆ ಎಚ್ಚರಿಕೆ ವಹಿಸಬೇಕು ಎಂದು ತಾ.ಪಂ. ಉಪಾಧ್ಯಕ್ಷ ಪ್ರಸನ್ನ ಹೆಗಡೆ ಹೆಸ್ಕಾಂಗೆ ಸೂಚನೆ ನೀಡಿದರು.

ಮಂಗಳವಾರ ಪಟ್ಟಣದ ತಾ.ಪಂ. ಕಾರ್ಯಾಲಯದಲ್ಲಿ ನಡೆದ  ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿ, ವಿದ್ಯುತ್ ಲೈನ್‌ಗಳಿಗೆ ತಾಗುವ ಮರದ ಕೊಂಬೆ-ರೆಂಬೆಗಳನ್ನು ಕತ್ತರಿಸಿದ ಸಂದರ್ಭದಲ್ಲಿ ಅದನ್ನು ಅಲ್ಲಿಯೇ ರಸ್ತೆಗಳ ಮೇಲೆ ಹಾಕಕೂಡದು ಎಂದು ಕೂಡ ಅವರು ಸೂಚನೆ ನೀಡಿದರು.

ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನೆಯ ಸಂದರ್ಭದಲ್ಲಿ ಮಾತನಾಡಿದ ತಾ.ಪಂ. ಉಪಾಧ್ಯಕ್ಷರು `ಸ್ಥಳೀಯ ಆಸ್ಪತ್ರೆಯಲ್ಲಿ ರೋಗಿಗಳೊಡನೆ ನರ್ಸ್ ಮತ್ತು ಸಿಬ್ಬಂದಿ ಸರಿಯಾಗಿ ವರ್ತಿಸಬೇಕು~ ಎಂದು ತಾಕೀತು ಮಾಡಿದರು.

ಪ್ರಗತಿ ಪರಿಶೀಲನೆಯ ಸಂದರ್ಭದಲ್ಲಿ ವಿವರ ನೀಡಿದ ಜಾನ್ಮನೆ ವಲಯ ಅರಣ್ಯಾಧಿಕಾರಿ ರಘು, ದೇವಸ್ಥಾನಗಳ ಸಮೀಪ ಪವಿತ್ರ ವನ ನಿರ್ಮಾಣ ಮಾಡುವ ಬಗ್ಗೆ ಪಶ್ಚಿಮ ಘಟ್ಟ ಕಾರ್ಯಪಡೆ ಯೋಜನೆ ರೂಪಿಸಿದೆ. ಪ್ರಸ್ತುತ ಇಲಾಖೆಯಲ್ಲಿ 26,800 ಸಸಿಗಳು ಲಭ್ಯವಿದ್ದು, ಪಶ್ಚಿಮ ಘಟ್ಟ ಕಾರ್ಯಪಡೆ 23,000 ಸಸಿಗಳನ್ನು ತಯಾರಿಸಿದೆ ಎಂದರು.

`ಸಹಾಯಧನದೊಂದಿಗೆ ಮೈಲಿತುತ್ತ  ವಿತರಣೆ ಇನ್ನೂ ಪ್ರಾರಂಭವಾಗಿಲ್ಲ. ಇದಕ್ಕಾಗಿ ರಾಜ್ಯಮಟ್ಟದಲ್ಲಿ ಟೆಂಡರ್ ಪ್ರಕ್ರಿಯೆ ನಡೆದಿದೆ. ತಾ.ಪಂ. ಠರಾವು ಮಾಡಿದಲ್ಲಿ ಪಟ್ಟಣದ ಮಾರ್ಕೆಟಿಂಗ್ ಸೊಸೈಟಿಯಿಂದ ಶೇ. 50ರ ಸಹಾಯಧನದೊಂದಿಗೆ ಮೈಲಿತುತ್ತ ವಿತರಣೆಗೆ ಕ್ರಮಕೈಗೊಳ್ಳುತ್ತೇವೆ~ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕೃಷ್ಣಪ್ಪ ಸಭೆಗೆ ತಿಳಿಸಿದರು.

ಬೀಜ, ಗೊಬ್ಬರ: ರೈತರಿಗೆ ವಿತರಣೆ ಮಾಡಲು ಭತ್ತದ ಬೀಜದ ದಾಸ್ತಾನಿದೆ. ಗೊಬ್ಬರ ಸರಬರಾಜು  ಮಾಡಲು ವಿವಿಧ ಕಂಪೆನಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ತಾ.ಪಂ. ಅಧ್ಯಕ್ಷೆ ಶಾಂತಿ ಈಶ್ವರ ಹಸ್ಲರ್   ಅಧ್ಯಕ್ಷತೆ ವಹಿಸಿದ್ದರು. ನೀಲಕಂಠ ಗೌಡರ್, ವಸಂತ ನಾಯ್ಕ ಮತ್ತು ಕಾ.ನಿ. ಅಧಿಕಾರಿ ವಿ.ಎಸ್. ಹೆಗಡೆ ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT