ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ತಿನ ಕಣ್ಣಾಮುಚ್ಚಾಲೆ

Last Updated 24 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನಗರ ಹಾಗೂ ಪಟ್ಟಣ ಪ್ರದೇಶದಲ್ಲಿ ಕೇವಲ ಒಂದು ಗಂಟೆ ಮಾತ್ರ ಲೋಡ್ ಶೆಡ್ಡಿಂಗ್ ಮಾಡಲಾಗುವುದೆಂದು ಘೋಷಿಸಿ ಅದರ ವೇಳಾಪಟ್ಟಿಯನ್ನು ಪತ್ರಿಕೆಗಳಲ್ಲಿ ಪ್ರಕಟಿಸಿದ್ದರೂ ಬೀದರ್ ನಗರದಲ್ಲಿ ಮಾತ್ರ ರಾತ್ರಿ 3 ರಿಂದ 3-30 ಗಂಟೆ ಮತ್ತು ಹಗಲಿನಲ್ಲಿ 6 ಗಂಟೆ ಹೀಗೆ ಒಟ್ಟು 9 ರಿಂದ 9-30 ಗಂಟೆ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ.

ಸಾಯಂಕಾಲ 5-30 ಗಂಟೆಗೆ ಕರೆಂಟ್ ಹೋದರೆ ಬರುವುದು ರಾತ್ರಿ 8 ಗಂಟೆಗೆ. ಒಂದು ವೇಳೆ 7-30ಕ್ಕೆ ಕರೆಂಟ್ ಹೋದರೆ ಬರುವುದು 10 ಗಂಟೆಗೆ. 8 ಗಂಟೆಗೆ ಕರೆಂಟ್ ಬಂದರೆ ಕರ್ಫ್ಯೂ ಸಡಲಿಸಿದಂತೆ. 8 ರಿಂದ 9ರ ವರಗೆ ಮಾತ್ರ ಕರೆಂಟ್ ಇರುತ್ತದೆ.

ಆ ಒಂದು ಗಂಟೆಯ ಅವಧಿಯಲ್ಲಿಯೇ ರಾತ್ರಿಯ ಅಡುಗೆ, ಊಟ - ತಿಂಡಿ ಎಲ್ಲವನ್ನು ಮುಗಿಸಿಕೊಳ್ಳಬೇಕು. ಏಕೆಂದರೆ 9 ಗಂಟೆಗೆ ಮತ್ತೆ ಕರೆಂಟ್ ಮಾಯವಾಗಿ 10-30 ಗಂಟೆಯವರೆಗೂ ಕಾಣಿಸಿ ಕೊಳ್ಳುವುದಿಲ್ಲ.ಇನ್ನು ಹಗಲಿನಲ್ಲಿಯಂತೂ ವೇಳಾ ಪಟ್ಟಿಯೇ ಇಲ್ಲ.

ಪ್ರತಿ ಎರಡು ತಾಸಿಗೊಮ್ಮೆ ಸ್ವಲ್ಪ ಹೊತ್ತು ಕಾಣಿಸಿಕೊಂಡು ಪುನಃ ಕಣ್ಮರೆಯಾಗುತ್ತದೆ. ಹಗಲು ಹೇಗಾದರೂ ನಿಭಾಯಿಸಬಹುದು. ಆದರೆ ರಾತ್ರಿಯ ಅವಸ್ಥೆ ಕೇಳುವಂತಿಲ್ಲ. ವಿದ್ಯುತ್ತಿನ ಈ ಕಣ್ಣಾಮುಚ್ಚಾಲೆ ಏಕೆ? ಕೇವಲ ಒಂದು ಗಂಟೆಯ ಲೋಡ್ ಶೆಡ್ಡಿಂಗ್ ಎಂಬ ಮಹಾಸುಳ್ಳನ್ನು ಸರ್ಕಾರ ಹೇಳುತ್ತಿರುವುದೇಕೆ? 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT