ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ಗಾಗಿ ಹೆಸ್ಕಾಂಗೆ ಬೀಗ

Last Updated 25 ಏಪ್ರಿಲ್ 2013, 7:45 IST
ಅಕ್ಷರ ಗಾತ್ರ

>ಚಿಕ್ಕೋಡಿ: ನಿಯಮಿತ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ತಾಲ್ಲೂಕಿನ ನಾಗರಮುನ್ನೋಳಿ ಮತ್ತು ಬೆಳಗಲಿ ಗ್ರಾಮದ ಕೃಷಿಕರು ನಾಗರಮುನ್ನೋಳಿ ಯಲ್ಲಿರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಬುಧ ವಾರ ಬೆಳಿಗ್ಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಭೀಕರ ಬರಗಾಲದಿಂದ ನಾಗರ ಮುನ್ನೋಳಿ ಹಾಗೂ ಬೆಳಗಲಿ ಗ್ರಾಮಗಳು ತತ್ತರಿಸುತ್ತಿವೆ. ಲಭ್ಯವಿರುವ ಅಲ್ಪ ನೀರನ್ನೂ ಬಳಸಿಕೊಳ್ಳಲು ವಿದ್ಯುತ್ ಕೊರತೆ ಕಾಡುತ್ತಿದೆ. ವಿದ್ಯುತ್ ಸರಬರಾಜು ಮಾಡಲು ವೇಳೆಯನ್ನೇ ನಿಗದಿಪಡಿಸಿಲ್ಲ. ಕೇಳಿದರೆ ಅಧಿಕಾರಿ ಗಳಿಂದಲೂ ಸಮಂಜಸವಾದ ಉತ್ತರ ಸಿಗುವುದಿಲ್ಲ. ಹೀಗಾಗಿ ಕೃಷಿಕರು ಹಗಲು ರಾತ್ರಿ ವಿದ್ಯುತ್‌ಗಾಗಿ ಚಾತಕ ಪಕ್ಷಿಯಂತೆ ಕಾದು ಕುಳಿತುಕೊಳ್ಳಬೇಕಾದ ಅನಿವಾ ರ್ಯತೆ ಎದುರಾಗಿದೆ ಎಂದು ಪ್ರತಿಭಟ ನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಹೋಬಳಿ ಕೇಂದ್ರ ಸ್ಥಾನವಾಗಿರುವ ನಾಗರಮುನ್ನೋಳಿಯಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 12ರವರೆಗೆ ತ್ರಿಫೇಸ್ ಹಾಗೂ ನಂತರ 3 ಗಂಟೆವರೆಗೆ ಸಿಂಗಲ್ ಫೇಸ್ ವಿದ್ಯುತ್ ಪೂರೈಕೆ ಮಾಡಿದರೆ ಸಾರ್ವಜನಿಕರು ಪಹಣಿ ಪತ್ರಿಕೆಗಳನ್ನು ಪಡೆದುಕೊಳ್ಳಲು, ಬ್ಯಾಂಕಿಂಗ್ ವ್ಯವ ಹಾರಗಳಿಗೂ ಅನುಕೂಲವಾಗುತ್ತದೆ. ವಿದ್ಯುತ್ ಪೂರೈಕೆಗೆ ವೇಳೆಯನ್ನು ನಿಗದಿಪಡಿಸಬೇಕು ಎಂದು ಒತ್ತಾಯಿಸಿ ದರು. ಬೆಳಗಲಿ ಗ್ರಾಮದ ಲಕ್ಷ್ಮಿ ಮಂದಿರ ಬಳಿ ಇರುವ ಟಿಸಿ ಕಂಬಗಳು ಶಿಥಿಲಗೊಂಡು ವರ್ಷಗಳೇ ಕಳೆದಿವೆ. ಅವಘಡ ಸಂಭವಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾ ಗಿದೆ. ಆದರೆ, ಸಾಕಷ್ಟು ಬಾರಿ ಮನವಿ ಮಾಡಿಕೊಂಡರೂ ಹೆಸ್ಕಾಂ ಅಧಿಕಾರಿಗಳು ಅದರತ್ತ ಗಮನವನ್ನೇ ಹರಿಸುತ್ತಿಲ್ಲ ಎಂದು ದೂರಿದರು.

ಬದಲಿ ಟಿಸಿ ಅಳವಡಿಸಲು ಅಧಿಕಾರಿಗಳು ರೈತರಿಂದ ಅಕ್ರಮವಾಗಿ ಹಣ ವಸೂಲಿ ಮಾಡುತ್ತಾರೆ ಹಾಗೂ 2-3 ತಿಂಗಳು ಅಲೆದಾಡಿದರೂ ಟಿಸಿ ಕೊಡುವುದಿಲ್ಲ. ಬದಲಿ ಟಿಸಿ ನೀಡುವ ಕುರಿತು ಕೃಷಿಕರಲ್ಲಿ ಮಾಹಿತಿಯೇ ಇಲ್ಲದಾಗಿದೆ. ಟಿಸಿ ಹಾಳಾದ ಮೇಲೆ ಎಷ್ಟು ದಿನಕ್ಕೆ ಬದಲಿ ಟಿಸಿ ನೀಡಲಾಗು ತ್ತದೆ. ಮತ್ತು ಅದಕ್ಕೆ ಕೃಷಿಕರು ಶುಲ್ಕ ಭರಿಸಬೇಕಾಗುತ್ತದೆಯೇ? ಎಂಬುದನ್ನು ಹೆಸ್ಕಾಂ ಸಾರ್ವಜನಿಕ ಮಾಹಿತಿ ನೀಡಬೇಕು ಎಂದು ಕರವೇ ಘಟಕದ ಅಧ್ಯಕ್ಷ ರಾಘವೇಂದ್ರ ಬಡಿಗೇರ ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಹೆಸ್ಕಾಂನ ಎಇಇ ಎಸ್.ಆರ್. ಸುಖಸಾಗರ, ಕೃಷಿಕರ ಸಮಸ್ಯೆಯನ್ನು ಆಲಿಸಿ, ದಿನದ 24 ಗಂಟೆಗಳ ಪೈಕಿ 5ಗಂಟೆ ತ್ರಿಫೇಸ್ ಮತ್ತು 5 ಗಂಟೆ ಸಿಂಗಲ್ ಫೇಸ್ ವಿದ್ಯುತ್ ಸರಬರಾಜು ಮಾಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರವೇ ರೈತರು ಪ್ರತಿಭಟನೆ ಹಿಂದಪಡೆದರು. ಶಿವಮುಗ್ಗಿ ನೇರ್ಲೆ, ಬಸವರಾಜ ಮನಗೂಳಿ, ಬಾಬಾಲಾಲ್ ಮುಲ್ತಾನಿ, ಮಾರುತಿ ಹುಲ್ಲೋಳಿ, ಮೌಲಾ ಜಮಾದಾರ, ರಾಮಣ್ಣಾ ಮಾನಗಾಂವೆ, ಚನ್ನಪ್ಪ ಮಾನಗಾಂವೆ, ಇಲಾಯಿ ನದಾಫ್, ರಾಮ ಮನಗೂಳಿ, ನಜರು ಪೆಂಡಾರಿ, ಲಕ್ಷ್ಮಣ ಕೊಟಬಾಗಿ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT