ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ವಾಂಸರಿಗೆ ವಿದೇಶಿ ಆಹ್ವಾನ

Last Updated 22 ಜೂನ್ 2011, 19:30 IST
ಅಕ್ಷರ ಗಾತ್ರ

ಭಾರತೀಯ ವಿದ್ಯಾಭವನದ ಲಂಡನ್ ಕೇಂದ್ರ ಮತ್ತು ಏಷ್ಯನ್ ಮ್ಯೂಸಿಕ್ ಸರ್ಕ್ಯೂಟ್, ಭಾರತದ ವೇದ ವಿದ್ವಾಂಸರನ್ನು ಬ್ರಿಟನ್ ಮತ್ತು ಜರ್ಮನಿಗೆ ಆಹ್ವಾನಿಸಿವೆ.

ಬೆಂಗಳೂರಿನ ಎನ್‌ಎಂಕೆಆರ್‌ವಿ ಕಾಲೇಜಿನ ಪ್ರಾಧ್ಯಾಪಕ ಡಾ. ರಂಗನಾಥ್, ಬೆಂಗಳೂರು ಭಾರತೀಯ ವಿದ್ಯಾಭವನದ ಎಂ ಪಿ ಬಿರ್ಲಾ ಪ್ರತಿಷ್ಠಾನದ ವೇದ ಸಂಸ್ಕೃತಿ ವಿಭಾಗದ ಮುಖ್ಯಸ್ಥ ಪ್ರೊ. ಎಂ. ಎನ್. ಚಂದ್ರಶೇಖರ, ಶೇಷಾದ್ರಿಪುರ ಕಾಲೇಜಿನ ಸಂಸ್ಕೃತ ವಿಭಾಗದ ಪ್ರೊ. ಮುರಳೀಧರ ಗುರುವಾರ ಯುರೋಪ್‌ಗೆ ತೆರಳುತ್ತಿದ್ದಾರೆ.

ಇವರು ಜುಲೈ 10ರವರೆಗೂ ಜರ್ಮನಿ ಮತ್ತು ಲಂಡನ್‌ನ ಹಲವೆಡೆ ಋಗ್ವೇದ, ಯಜುರ್ವೇದ, ಸಾಮವೇದಗಳ ಆಯ್ದ ಭಾಗಗಳ ಅರ್ಥ ಸಹಿತ ಮಂತ್ರಘೋಷ ಮಾಡಲಿದ್ದಾರೆ. ಹಾಗೆಯೇ ಗುಜರಾತ್‌ನಿಂದ ತೆರಳಲಿರುವ ಐದು ಜನ ಸಂಗೀತ ವಿದ್ವಾಂಸರು ತಮ್ಮ ಸ್ವರ ನಿನಾದದಿಂದ ಅಲ್ಲಿನ ಜನರ ಮನ ತಣಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT