ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನ ಸಭಾ ಕ್ಷೇತ್ರ: ಬೂತ್‌ ಮಟ್ಟದ ಪದಾಧಿಕಾರಿಗಳ ಚುನಾವಣೆ

Last Updated 7 ಡಿಸೆಂಬರ್ 2013, 9:33 IST
ಅಕ್ಷರ ಗಾತ್ರ

ದೇವನಹಳ್ಳಿ: ದೇವನಹಳ್ಳಿ ವಿಧಾನ ಸಭಾ ಕ್ಷೇತ್ರದ ಬೂತ್‌ ಮಟ್ಟದ ಪದಾ ಧಿಕಾರಿಗಳ ಚುನಾವಣೆಯಲ್ಲಿ ಯುವ ಯುವ ಕಾಂಗ್ರೆಸ್‌ ಪಕ್ಷದ ನೋಂದಾ ಯಿತ ಸದಸ್ಯರು ದೇವನಹಳ್ಳಿ ಗುರು ಭವನದಲ್ಲಿ ಮತದಾನ ಮಾಡಿದರು.

ಚುನಾವಣೆ ಪ್ರಕ್ರಿಯೆ ಕುರಿತು ಮಾತನಾಡಿದ ತಾಲ್ಲೂಕು ಯುವ ಕಾಂಗ್ರೆಸ್‌ ಅಧ್ಯಕ್ಷ ಪ್ರಸನ್ನ ಕುಮಾರ್‌, ‘ರಾಹುಲ್‌ ಗಾಂಧಿಯವರ ಆಶಯ ದಂತೆ ಬೂತ್‌ ಮಟ್ಟದಿಂದಲೇ ಪಕ್ಷ ಸಂಘಟಿಸುವ ಮೂಲಕ ಯುವ ಸಮು ದಾಯ ಸಕ್ರೀಯವಾಗಿ ರಾಜಕೀಯ ದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಉದ್ದೇಶದಿಂದ ಎರಡು ವರ್ಷಗಳಿಗೊಮ್ಮೆ ಚುನಾವಣೆ ಮೂಲಕ ಬೂತ್‌ ಮಟ್ಟದಿಂದ ಲೋಕ ಸಭೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡ ಲಾಗುತ್ತಿದೆ. ಇದು ಎಲ್ಲಾರಿಗೂ ಅವ ಕಾಶ ಸಿಗದಿದ್ದರೂ ಅರ್ಹರು ಆಯ್ಕೆ ಗೊಳ್ಳುತ್ತಾರೆ’ ಎಂದರು.

‘ಬೂತ್‌ ಮಟ್ಟದಲ್ಲಿ ಒಂದು ಅಧ್ಯಕ್ಷ ಸ್ಥಾನ ಒಂದು ಉಪಾಧ್ಯಕ್ಷ ಸ್ಥಾನ ಮೂರು ಪ್ರಧಾನ ಕಾರ್ಯದರ್ಶಿಗಳ ಹುದ್ದೆ ಇರಲಿದ್ದು, ಇದರಲ್ಲಿ ಒಬ್ಬ ಮಹಿಳೆಗೆ ಮತ್ತೊಂದು ಹಿಂದುಳಿದ ವರ್ಗ ಅಥವಾ ಅಲ್ಪಸಂಖ್ಯಾತರಿಗೆ ಮತ್ತೊಂದು ಪರಿಶಿಷ್ಟರಿಗೆ ಮೀಸಲು ಕಲ್ಪಿಸಲಾಗಿದೆ. ವಿಧಾನಸಭೆ ವ್ಯಾಪ್ತಿ ಯಲ್ಲಿ ಒಂದು ಸಾವಿರ ಯುವತಿ ಯರು, ಎರಡು ಸಾವಿರ ಯುವಕರು ಪಕ್ಷದಲ್ಲಿ ನೋಂದಾಯಿಸಿಕೊಂಡಿದ್ದು 260 ಬೂತ್‌ಗೆ 398 ಪದಾಧಿ ಕಾರಿಗಳ ಆಯ್ಕೆಗೆ ಚುನಾವಣೆ ನಡೆಸ ಲಾಗುತ್ತಿದೆ.

ಚುನಾವಣೆಯಲ್ಲಿ ಆಯ್ಕೆ ಗೊಂಡ ಪದಾಧಿಕಾರಿಗಳು ಮುಂದಿನ ಎಲ್ಲಾ ಹಂತದ ಪಕ್ಷದ ಪದಾ ಧಿಕಾರಿಗಳ ಆಯ್ಕೆಗೆ ಸಂಬಂಧಿಸಿದಂತೆ ಮತದಾನ ಮಾಡುವ ಅರ್ಹತೆ ಹೊಂದಿದ್ದಾರೆ. ಚುನಾವಣಾ ಆಯೋಗ ನಡೆಸುವ ನಿಯಮ ಮಾದರಿಯಲ್ಲೇ ಚುನಾವಣೆ ನಡೆಸ ಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT