ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿನಾಕಾರಣ ಅನುಮಾನ ಬೇಡ

ಅಕ್ಷರ ಗಾತ್ರ

ಮಾಟ – ಮಂತ್ರ, ಕಂದಾಚಾರ ನಮ್ಮ ಸಮಾಜದಲ್ಲಿ ಆಳವಾಗಿ ಬೇರು ಬಿಟ್ಟಿರುವ ಸಾಮಾಜಿಕ ಅನಿಷ್ಟಗಳು. ಇವುಗಳ ವಿರುದ್ಧ ದನಿ ಎತ್ತಿದ ವಿಜ್ಞಾನಿಗಳು, ವಿಚಾರವಂತರ ಜೊತೆಗೆ ಇತ್ತೀಚೆಗೆ ಮಹಾರಾಷ್ಟ್ರದ ಚಿಂತಕ ನರೇಂದ್ರ  ದಾಭೋಲ್ಕರ ಅವರ  ಗತಿ ಏನಾಯಿತೆಂಬು ದನ್ನು ನಾವೆಲ್ಲಾ ನೋಡಿದ್ದೇವೆ.

ಬಹುಜನರ ಅಂಧ ಶ್ರದ್ಧೆಗಳನ್ನೇ ಬಂಡವಾಳ ಮಾಡಿಕೊಂಡು, ಅವರ ಭಾವನೆಗಳನ್ನು ತಮ್ಮ ಸ್ವಾರ್ಥಕ್ಕೆ ತಕ್ಕಂತೆ ಬಳಸಿಕೊಂಡು, ನಾನಾ ರೀತಿಯಲ್ಲಿ ಸುಲಿ ಯುತ್ತಾ  ಮೌಢ್ಯಕೂಪಕ್ಕೆ ಅವರನ್ನು ತಳ್ಳುತ್ತಿ ರುವ ಧಾರ್ಮಿಕಶಾಹಿಗಳ ಕುತಂತ್ರ ದಿನೇ ದಿನೇ ಹೆಚ್ಚುತ್ತಿರುವುದು ಇಂದಿನ ಜಾಗತೀಕರಣದ ವಿಪರ್ಯಾಸವೇ ಸರಿ. ಇಂತಹ ಪಿಡುಗುಗಳನ್ನು ತೊಡೆದು ಹಾಕಲು ಕಾನೂನಿನ ಮೂಲಕವೇ ಸಾಧ್ಯವೆಂದರಿತ ದಾಭೋಲ್ಕರ  ದಶಕಗಳ ಕಾಲ ನಡೆಸಿದ ಹೋರಾಟ ಫಲ ನೀಡಬೇಕಾದರೆ ಅವರು ತಮ್ಮ ಪ್ರಾಣವನ್ನೇ ತೆರಬೇಕಾಯಿತು.

ಕರ್ನಾಟಕದಲ್ಲೂ ಇಂಥ ಸಾಮಾಜಿಕ ಅನಿಷ್ಟಗಳು ಅಸಂಖ್ಯಾತವಾಗಿ ತಾಂಡವವಾ ಡುತ್ತಿವೆ. ಸಂವಿಧಾನದಡಿ ಇವುಗಳ  ವಿರುದ್ಧ ಕಾರ್ಯ ನಿರ್ವಹಿಸುವುದು ಪ್ರತಿ ಸರ್ಕಾರದ  ಕರ್ತವ್ಯ. ನಮ್ಮ ಸರ್ಕಾರವೂ ಮಾಟ – ಮಂತ್ರ ಇತ್ಯಾದಿಗಳನ್ನು  ನಿಷೇಧಿಸುವ  ಕಾಯ್ದೆ ಜಾರಿಗೆ ತರಲು ಹೊರಟಿರುವುದರ ಹಿಂದಿನ ಉದ್ದೇಶ, ಬಹುಸಂಖ್ಯಾತರನ್ನು ಧಾರ್ಮಿಕ ಶಾಹಿಗಳ ಕುತಂತ್ರದ  ಬಿಗಿಮುಷ್ಟಿಯಿಂದ ಬಿಡಿಸುವುದೇ ವಿನಾ  ವಿರೋಧ ಪಕ್ಷದ ನಾಯಕ ಡಿ.ವಿ. ಸದಾನಂದಗೌಡರು ಹೇಳಿರುವಂತೆ ಜನರ ಭಾವನೆಗಳಿಗೆ ಧಕ್ಕೆ ತರುವುದಕ್ಕಲ್ಲ. ಈ ಕಾಯ್ದೆಯ ಹಿಂದೆ  ರಹಸ್ಯ ಕಾರ್ಯಸೂಚಿ ಇದೆ ಎಂಬ  ಅವರ ಅನುಮಾನ ಕಪೋಲಕಲ್ಪಿತ ಹಾಗೂ  ಬೇಜವಾಬ್ದಾರಿಯುತವಾದುದು.

ಬಹುಸಂಖ್ಯಾತ ಜನರಿಗಾಗುತ್ತಿರುವ ಮೋಸ, ವಂಚನೆಗಳನ್ನು ತಡೆದು ಸ್ವಸ್ಥ ಸಮಾಜಕ್ಕಾಗಿ ಸರ್ಕಾರ ಇಂಥ ಸಂದರ್ಭೋಚಿತ ಪ್ರಗತಿಪರ ಕಾಯ್ದೆಯನ್ನು ಜಾರಿಗೆ ತರುತ್ತಿರುವುದು ಶ್ಲಾಘ ನೀಯ. ಪಕ್ಷಾತೀತವಾಗಿ ಇದನ್ನು ಸ್ವಾಗತಿಸು ವುದು ಸಂವಿಧಾನದಲ್ಲಿ ನಂಬಿಕೆ ಇಟ್ಟವರೆಲ್ಲರ ಕರ್ತವ್ಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT