ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಪತ್ತು ನಿರ್ವಹಣೆ ಮುಖ್ಯ

Last Updated 21 ಜನವರಿ 2011, 8:40 IST
ಅಕ್ಷರ ಗಾತ್ರ

ಹರಿಹರ: ‘ವಿಪತ್ತುಗಳನ್ನು ತಡೆಯಲು ಸಾಧ್ಯವಿಲ್ಲದಿದ್ದರೂ, ವಿಪತ್ತುಗಳನ್ನು ಹೇಗೆ ನಿರ್ವಹಿಸುತ್ತೇವೆ ಎಂಬುದು ಮುಖ್ಯವಾಗುತ್ತದೆ’ ಎಂದು ನಗರ ಪೊಲೀಸ್ ಠಾಣೆಯ ಪಿಎಸ್‌ಐ ಜೆ. ರಮೇಶ್ ಅಭಿಪ್ರಾಯಪಟ್ಟರು.

ನಗರದ ಎಸ್‌ಜೆವಿಪಿ ಕಾಲೇಜು ಸಭಾಂಗಣದಲ್ಲಿ, ಕಾಲೇಜಿ ಎನ್‌ಎಸ್‌ಎಸ್ ಘಟಕ ಹಾಗೂ ನ್ಯಾಷನಲ್ ಡೆಸಾಸ್ಟರ್ ರೆಸ್ಪಾನ್ಸ್ ಫೋರ್ಸ್ ಆಶ್ರಯದಲ್ಲಿ ಬುಧವಾರ ನಡೆದು ‘ವಿಪತ್ತು ನಿರ್ವಹಣೆ’ ಕುರಿತು ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನ್ಯಾಷನಲ್ ಡೆಸಾಸ್ಟರ್ ರೆಸ್ಪಾನ್ಸ್ ಫೋರ್ಸ್‌ನ ಸಿಪಿಐ ಆರ್. ಸೆಲ್ವಕುಮಾರ್, ಪಿಎಸ್‌ಐ ಎಸ್. ಸತೀಶನ್ ವಿಪತ್ತಿನ ವೇಳೆ ಮಾನವ ಹಾಗೂ ಪ್ರಾಣಿಗಳ ಜೀವರಕ್ಷಣೆ ಹೇಗೆ ಮಾಡಬೇಕು. ಗಾಯಗೊಂಡ ವ್ಯಕ್ತಿಗಳಿಗೆ ಯಾವ ರೀತಿ ತುರ್ತು ಚಿಕಿತ್ಸೆ ನೀಡಬೇಕು, ಪ್ಲಾಸ್ಟಿಕ್ ಕೊಡಪಾನಗಳನ್ನು ಹೇಗೆ ತೇಲುವಸ್ತುವನ್ನಾಗಿ ಬಳಸಬಹುದು ಎಂಬ ವಿಷಯಗಳ ಪ್ರಾತ್ಯಕ್ಷಿಕೆಗಳನ್ನು ತೋರಿಸಿದರು.

ಕಾಲೇಜಿನ ಪ್ರಾಂಶುಪಾಲ ಎಚ್.ಎ. ಭಿಕ್ಷಾವರ್ತಿಮಠ ಅಧ್ಯಕ್ಷತೆ ವಹಿಸಿದ್ದರು. ವಿಶ್ವನಾಥ ಹಲಗಣ್ಣನವರ, ನ್ಯಾಷನಲ್ ಡಯಾಸ್ಟರ್ ರೆಸ್ಪಾನ್ಸ್ ಫೋರ್ಸ್‌ನ ಸಿಪಿಐ ಆರ್. ಸೆಲ್ವಕುಮಾರ್ ಹಾಗೂ ಪಿಎಸ್‌ಐ ಎಸ್. ಸತೀಶನ್ ಉಪಸ್ಥಿತರಿದ್ದರು.

ಗೃಹರಕ್ಷದ ದಳದ ಅಧಿಕಾರಿ ಎಸ್. ಅನಂತರಾಮ ಶ್ರೇಷ್ಠಿ, ಗೃಹರಕ್ಷಕ ದಳದ ಮತ್ತು ಪೊಲೀಸ್ ಸಿಬ್ಬಂದಿ ಹಾಗೂ ಎನ್‌ಎಸ್‌ಎಸ್ ಘಟಕದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎನ್‌ಎಸ್‌ಎಸ್ ಅಧಿಕಾರಿ ರಮೇಶ ಪರ್ವತಿ ಸ್ವಾಗತಿಸಿದರು. ಡಾ.ಪರಮೇಶ್ ನಾಯ್ಕ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT