ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಪ್ರೊ: ಎಲ್‌ಇಡಿ ದೀಪಕ್ಕೆ ಪ್ರಶಸ್ತಿ

Last Updated 18 ಫೆಬ್ರುವರಿ 2011, 17:05 IST
ಅಕ್ಷರ ಗಾತ್ರ

ಬೆಂಗಳೂರು:  ಪರಿಸರ ಸ್ನೇಹಿ ಮತ್ತು ಸುಧಾರಿತ ತಂತ್ರಜ್ಞಾನದ ‘ವಿಪ್ರೊ’ ಬಹುಬಳಕೆ  ‘ಎಲ್‌ಇಡಿ’ ದೀಪಗಳು ಹಾಗೂ ಪೀಠೋಪಕರಣಗಳ ಪ್ರದರ್ಶನ ಶುಕ್ರವಾರ ಇಲ್ಲಿ ನಡೆಯಿತು.

ನಗರ ಸೌಂದರ್ಯ ವರ್ಧನೆ ಕಲ್ಪನೆಯಡಿ ನಿರ್ಮಿಸಲಾದ ವಿಪ್ರೊ ಬೀದಿ ದೀಪ ‘ಒರಿಯೊ’ಕ್ಕೆ ಪ್ರಸಕ್ತ ಸಾಲಿನ ‘ಏಷ್ಯಾ-ಶ್ರೇಷ್ಠತೆ ಮನ್ನಣೆ ಪ್ರಶಸ್ತಿ’ ಲಭಿಸಿದೆ. ದೇಶದ ಪ್ರಮುಖ 120 ಪರಿಸರ ಸ್ನೇಹಿ ಕಟ್ಟಡಗಳಲ್ಲಿ 70 ಕಟ್ಟಡಗಳಿಗೆ  ಈಗಾಗಲೇ ಹಸಿರು ತಂತ್ರಜ್ಞಾನದ ‘ಎಲ್‌ಇಡಿ’ ದೀಪಗಳನ್ನು ಕಂಪೆನಿ ಅಳವಡಿಸಿದೆ. ಒಳಾಂಗಣ ಮತ್ತು ಹೊರಾಂಗಣ ಬಳಕೆಯ ವಿಶಾಲ ಶ್ರೇಣಿಯ ದೀಪಗಳನ್ನು ಈ ಪ್ರದರ್ಶನ ಒಳಗೊಂಡಿದೆ ಎಂದು ವಿಪ್ರೊ ಎಲ್‌ಇಡಿ ದೀಪಗಳ ಮಾರುಕಟ್ಟೆ ಮುಖ್ಯಸ್ಥ ಪರಾಗ್ ಕುಲಕರ್ಣಿ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ದೇಶಿಯ ಮಾರುಕಟ್ಟೆಯಲ್ಲಿ ವಿಪ್ರೊ ‘ಎಲ್‌ಇಡಿ’ ದೀಪಗಳು ಶೇ 34ರಷ್ಟು ಮಾರುಕಟ್ಟೆ ಪ್ರಗತಿ ಹೊಂದಿವೆ. ಬೀದಿ ದೀಪಗಳ ವಿನ್ಯಾಸದಲ್ಲಿ ಸುಧಾರಿತ ತಂತ್ರಜ್ಞಾನ ಅಳವಡಿಸಲಾಗಿರುವುದರಿಂದ ಇಂಧನ ಬಳಕೆ ಕಡಿಮೆ ಆಗಿರುವುದರ ಜತೆಗೆ, ಬೆಳಕಿನ ಪ್ರಕಾಶ ಮತ್ತು ಹರಡುವಿಕೆ ಪ್ರಮಾಣ ಗಣನೀಯವಾಗಿ ಹೆಚ್ಚಿದೆ  ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT