ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ನಿವ್ವಳ ಲಾಭವು ಶೇ 10ರಷ್ಟು ಮಾತ್ರ ಹೆಚ್ಚಳವಾಗಿದೆ. ಒಟ್ಟು ವರಮಾನವು ಶೇ 12ರಷ್ಟು ಏರಿಕೆಯಾಗಿ ರೂ. 7829 ಕೋಟಿಗಳಷ್ಟಾಗಿದೆ. ಸಂಸ್ಥೆಯ ಒಟ್ಟಾರೆ ವಹಿವಾಟಿನಲ್ಲಿ ಶೇ 76ರಷ್ಟಿರುವ ಐ.ಟಿ ಸೇವೆಯ ವರಮಾನವು ರೂ. 5,949 ಕೋಟಿಗಳಷ್ಟಾಗಿದ್ದು ವರ್ಷದಿಂದ ವರ್ಷಕ್ಕೆ ಶೇ 15ರಷ್ಟು ಏರಿಕೆ ದಾಖಲಿಸಿದೆ.