ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನಯಾನ ತುಟ್ಟಿ

Last Updated 2 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಒಂದರ ಮೇಲೊಂದು ಹಬ್ಬಗಳು, ರಜೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ರೈಲು ಮತ್ತು ಬಸ್ ಪ್ರಯಾಣಿಕರ ನೂಕುನುಗ್ಗಲು ಹೆಚ್ಚಿದೆ. ಮುಂಗಡ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿವೆ. ಇದರಿಂದ ವಿಮಾನ ಪ್ರಯಾಣವೂ ದುಬಾರಿಯಾಗಿದೆ. "

ವೆುಟ್ರೊ ನಗರಗಳಿಂದ ಮೆಟ್ರೊ ನಗರಗಳಿಗೆ ನೇರ ಸಂಪರ್ಕ ಕಲ್ಪಿಸುವ ವಿಮಾನಯಾನ ಸಂಸ್ಥೆಗಳು ಟಿಕೆಟ್ ದರವನ್ನು ಗಣನೀಯವಾಗಿ ಹೆಚ್ಚಿಸಿವೆ. ಹಬ್ಬ ಮತ್ತು ರಜಾ ಕಾಲದ ಸಂಪೂರ್ಣ ಲಾಭವನ್ನು ಪಡೆಯಲು ಸಿದ್ಧಗೊಂಡಿರುವ ವಿಮಾನಯಾನ ಕಂಪೆನಿಗಳು, ಎರಡು ಮೂರು ದಿನ ಅಂತರದ  ಏಕಮುಖ ಸಂಚಾರದ ದರವನ್ನು ್ಙ14 ಸಾವಿರದಿಂದ ್ಙ30 ಸಾವಿರದವರೆಗೆ ಹೆಚ್ಚಿಸಿವೆ.

ಹೆಚ್ಚಿನ ಬೇಡಿಕೆ ಇರುವ ಕೋಲ್ಕತ್ತ-ದೆಹಲಿ, ರಾಂಚಿ-ದೆಹಲಿ, ಮಾರ್ಗದ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿದ್ದು, ಆನ್‌ಲೈನ್ ಮೂಲಕ ಟಿಕೆಟ್ ಕಾಯ್ದಿರಿಸಬಹುದಾದ ತಾಣಗಳು ತಾತ್ಕಾಲಿಕವಾಗಿ ಸೇವೆ ಸ್ಥಗಿತಗೊಳಿಸಿವೆ. ಇಂತಹ ತಾಣಗಳಲ್ಲಿ ಹೆಚ್ಚುವರಿ ವಿಮಾನ ಸೇವೆ ಲಭ್ಯವಿದ್ದರೂ, ಟಿಕೆಟ್‌ಗಳ ದರಗಳು ಗಗನಮುಖಿಯಾಗಿವೆ.

ಬಹುತೇಕ ಎಲ್ಲ ಪ್ರಮುಖ ವಿಮಾನಯಾನ ಸಂಸ್ಥೆಗಳ ಕೊನೆಯ ಕ್ಷಣದ ದರಗಳು ಶೇ 30ರಿಂದ ಶೇ 40ರಷ್ಟು ಹೆಚ್ಚಾಗಿವೆ. ನೇರ ಸಂಪರ್ಕ ಕಲ್ಪಿಸುವ ವಿಮಾನಗಳಲ್ಲಿ ಟಿಕೆಟ್ ಈಗಾಗಲೇ ಮಾರಾಟವಾಗಿರುವುದರಿಂದ ಪ್ರಯಾಣಿಕರು ಅನಿವಾರ್ಯವಾಗಿ ಬಳಸು ಮಾರ್ಗದ ಮೂಲಕ ದುಪ್ಪಟ್ಟು ಹಣ ತೆತ್ತು ಪ್ರಯಾಣಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT