ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾಹೇತರ ಸಂಬಂಧ: ಮಹಿಳೆ ಹತ್ಯೆ

Last Updated 16 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌ (ಪಿಟಿಐ): ವಿವಾಹೇತರ ಸಂಬಂಧ ಹೊಂದಿದ್ದರು ಎನ್ನಲಾದ ಮಹಿಳೆಯೊಬ್ಬರನ್ನು ಬುಡಕಟ್ಟು ಪಂಚಾಯ್ತಿ (ಜಿರ್ಗಾ) ಆದೇಶದ ಮೇರೆಗೆ ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಖೈಬರ್ ಪಂಖ್ತುಂಖ್ವಾ ಪ್ರಾಂತ್ಯದಲ್ಲಿ ನಡೆದಿದೆ. ಈ ಮಹಿಳೆ ಬೆಂಬಲಕ್ಕೆ ಇದ್ದ ಇಬ್ಬರು ಮಹಿಳೆಯರನ್ನು ಕೂಡ ಕೊಲೆ ಮಾಡಲಾಗಿದೆ.

ಸಾದಿಯಾ ಎಂಬ ಮಹಿಳೆ (22) ಮದುವೆಯಾಗಿ ಎರಡು ವರ್ಷಗಳ ಬಳಿಕ ಇನ್ನೊಬ್ಬನ ಜತೆ ಸ್ವಾತ್ ಕಣಿವೆಗೆ ಓಡಿಹೋಗಿ­ದ್ದರೆಂದು ಆರೋಪಿಸಲಾಗಿತ್ತು.  ಸ್ವಾತ್‌ನಲ್ಲಿ ಈಕೆಯನ್ನು ಪತ್ತೆ ಮಾಡಿದ ಪೊಲೀಸರು ಕುಟುಂಬದವರಿಗೆ ಒಪ್ಪಿಸಿದರು. 

ಈ ನಡುವೆ ಬುಡಕಟ್ಟು ಪಂಚಾಯ್ತಿ, ಭಾನುವಾರ ರಾತ್ರಿ ಸಭೆ ಸೇರಿ ಈಕೆಯನ್ನು ತಪ್ಪಿತಸ್ಥೆ ಎಂದು ಘೋಷಿಸಿತು. ನಂತರ ಬುಡಕಟ್ಟು ವಾಸಿಗಳು ಈಕೆಯನ್ನು ಗುಂಡಿಟ್ಟು ಹತ್ಯೆ ಮಾಡಿದರು. ಈಕೆ ಪಲಾಯನ ಮಾಡಲು ನೆರವು ನೀಡಿದ್ದ ಇನ್ನಿಬ್ಬರು ಮಹಿಳೆಯರನ್ನೂ ಕೊಲೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT