ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

Last Updated 11 ಡಿಸೆಂಬರ್ 2013, 19:52 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾ­ಲಯವು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನದ ಕಾರಣ ಡಿ.11 ರಂದು ಮುಂದೂಡಿದ್ದ ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದೆ.

ಡಿ.11 ರಂದು ನಡೆಯಬೇಕಿದ್ದ ಬಿ.ಎ/­­ಬಿ.ಎಸ್‌ಸಿ 1ನೇ   ಸೆಮಿಸ್ಟರಿನ   ಪರೀ­ಕ್ಷೆ­ಗಳು ಶುಕ್ರವಾರ (ಡಿ.13) ಬೆಳಿಗ್ಗೆ 9.30ಕ್ಕೆ, 5ನೇ ಸೆಮಿಸ್ಟರಿನ ಪರೀ­ಕ್ಷೆ­ಗಳು ಮಧ್ಯಾಹ್ನ 2ಕ್ಕೆ  ನಡೆಯಲಿವೆ.

ಎಲ್.ಎಲ್.ಬಿ 1 ಮತ್ತು 5ನೇ ಸೆಮಿ­ಸ್ಟರಿನ ಪರೀಕ್ಷೆಗಳು ಡಿ.31 ರಂದು ಬೆಳಿಗ್ಗೆ 9.30ಕ್ಕೆ ಹಾಗೂ 4 ಮತ್ತು  8ನೇ ಸೆಮಿಸ್ಟರಿನ ಪರೀಕ್ಷೆಗಳು ಮಧ್ಯಾಹ್ನ 2ಕ್ಕೆ ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ. ಮಾಹಿತಿಗೆ  ಕುಲಸ­ಚಿ­ವರ (ಮೌಲ್ಯಮಾಪನ) ಕಚೇರಿ, ಪರೀಕ್ಷಾ ಭವನ, ಜ್ಞಾನಭಾರತಿ ಆವ­ರಣ, ಬೆಂಗಳೂರು ವಿವಿ ಸಂಪರ್ಕಿಸಲು ಕೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT