ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿ ಭೂಮಿ ಪರಭಾರೆ ಸಲ್ಲ

Last Updated 22 ಜನವರಿ 2012, 19:30 IST
ಅಕ್ಷರ ಗಾತ್ರ

 ಬೆಂಗಳೂರು ವಿಶ್ವವಿದ್ಯಾಲಯ ಆಡಳಿತದ ಗೊಂದಲ ಮತ್ತು ರಾಜಕೀಯದಿಂದಾಗಿ ಯುಜಿಸಿಯಿಂದ ಬರಬೇಕಾಗಿದ್ದ  50 ಕೋಟಿ ರೂ. ಅನುದಾನ ತಪ್ಪಿಹೋಗಿದೆ.

ವಿ ವಿ ಕ್ಯಾಂಪಸ್‌ನ 50 ಎಕರೆ ಭೂಮಿಯನ್ನು ಜಿಂದಾಲ್ ಸಂಸ್ಥೆಗೆ ಪರಭಾರೆ ಮಾಡಿ ಅಲ್ಲಿ `ಸ್ಕೂಲ್ ಆಫ್ ಎಕನಾಮಿಕ್ಸ್~ ಎಂಬ ಸ್ವಾಯತ್ತ ಸಂಸ್ಥೆ ತೆರೆಯುವ ಪ್ರಯತ್ನಕ್ಕೆ ಕೆಲವರು ಉತ್ತೇಜನ ನೀಡುತ್ತಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿದೆ. ಇದನ್ನೆಲ್ಲ ನೋಡಿದರೆ ವಿಶ್ವ ವಿದ್ಯಾಲಯದಲ್ಲಿ ಏನು ನಡೆಯುತ್ತಿದೆ ಎಂಬುದೇ ಜನರಿಗೆ ತಿಳಿಯುತ್ತಿಲ್ಲ.

ವಿಶ್ವವಿದ್ಯಾಲಯದಲ್ಲಿ ಈಗಾಗಲೇ ಅರ್ಥಶಾಸ್ತ್ರದ ಸ್ನಾತಕೋತ್ತರ ವಿಭಾಗವಿದೆ. ಜಿಂದಾಲ್ ಸಂಸ್ಥೆ `ಸ್ಕೂಲ್ ಆಫ್ ಎಕನಾಮಿಕ್ಸ್~ ಪ್ರಾರಂಭಿಸಿದರೆ ವಿ ವಿಯ ಅರ್ಥಶಾಸ್ತ್ರ ವಿಭಾಗದ ಗತಿ ಏನು? ಎರಡೂ ಕಾರ್ಯ ನಿರ್ವಹಿಸುತ್ತವೆಯೇ ಎಂಬುದು ಸ್ಪಷ್ಟವಾಗಿಲ್ಲ. ಜಿಂದಾಲ್ ಸಂಸ್ಥೆ `ಸ್ಕೂಲ್ ಆಫ್ ಎಕನಾಮಿಕ್ಸ್~ ಆರಂಭಿಸುವುದರಿಂದ ವಿ ವಿಗೆ ಏನು ಲಾಭ? ಈಗಾಗಲೇ ಕೆನರಾ ಬ್ಯಾಂಕ್ ಹೆಸರಿನಲ್ಲಿ `ಕೆನರಾ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್~ ನಡೆಯುತ್ತಿದೆ. ಆದರೆ ಅದು ಸಂಪೂರ್ಣವಾಗಿ ವಿ ವಿಯ ಭಾಗವಾಗಿದೆ.

ಹಾಗೆಯೇ ಜಿಂದಾಲ್‌ನ  ಸ್ಕೂಲ್ ಆಫ್ ಎಕನಾಮಿಕ್ಸ್ ಸಹಾ ವಿಶ್ವವಿದ್ಯಾಲಯದ ಭಾಗವಾಗಿಯೇ ಉಳಿಯಬೇಕು. ಜಿಂದಾಲ್ ಸಂಸ್ಥೆಗೆ ವಿ ವಿ ಭೂಮಿ ಪರಭಾರೆಗೆ ಅವಕಾಶ ಕೊಡಬಾರದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT