ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಬೇಡಿಕೆಗಳ ಆಗ್ರಹ: ಮನವಿ

Last Updated 18 ಡಿಸೆಂಬರ್ 2012, 9:32 IST
ಅಕ್ಷರ ಗಾತ್ರ

ಶಿರಹಟ್ಟಿ:  ವಿವಿಧ ಬೇಡಿಕೆಗಳ ಈಡೇರಿಸುವಲ್ಲಿ ರಾಜ್ಯ ಸರ್ಕಾರ ವಿಫಲಾಗಿದೆ ಎಂದು ಆಶಾ ಕಾರ್ಯಕರ್ತರು ಸೋಮುವಾರ ಪ್ರತಿಭಟನೆ ನಡೆಸಿ,  ತಹಶೀಲ್ದಾರರಿಗೆ  ಮನವಿ ಸಲ್ಲಿಸಿದರು.
ತಾಲ್ಲೂಕು ಆಶಾ ಕಾರ್ಯಕರ್ತರ ಸಂಘದ ಅಧ್ಯಕ್ಷೆ ಸುಂದ್ರವ್ವ ಪಾಟೀಲ ಮಾತನಾಡಿ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಇಲಾಖೆಯಲ್ಲಿ ರಾಜ್ಯದಲ್ಲಿ ಸುಮಾರು  30 ಸಾವಿರ ಆಶಾ  ಕಾರ್ಯಕರ್ತರು ಸೇವೆ ಸಲ್ಲಿಸುತ್ತಿದ್ದಾರೆ.

ರಾಜ್ಯದಲ್ಲಿ ಸಕಾಲಕ್ಕೆ ರೋಗಿಗಳಿಗೆ, ಗರ್ಭಿಣಿಯರಿಗೆ  ಸೇವೆ ನೀಡುತ್ತಿದ್ದಾರೆ. ಸಹಸ್ರಾರು ಗ್ರಾಮೀಣ ಬಡ ಜನರು, ಬಾಣಂತಿಯರ  ಮತ್ತು ನವಜಾತು ಶಿಶುಗಳ ಜೀವ ಉಳಿಸುತ್ತಿದ್ದಾರೆ. ಅಂಥವರಿಗೆ ವೇತನ ನೀಡುವಲ್ಲಿ ತಾರತಮ ಮಾಡಲಾಗುತ್ತಿದೆ ಎಂದು  ಆಕ್ರೋಶ ವ್ಯಕ್ತಪಡಿಸಿದರು.

ಸಾಮಾಜಿಕ ಭದ್ರತೆ, ನಿಗದಿತ ವೇತನ ಮತ್ತು ಮಾರಣಾಂತಿಕ ಕಾಯಿಲೆಗೆ ತುತ್ತಾದ ಕಾರ್ಯಕರ್ತೆಯರಿಗೆ ಸರ್ಕಾರದಿಂದ ಸಂಪೂರ್ಣ ಉಚಿತ ಚಿಕಿತ್ಸೆ ಮತ್ತು ಆರ್ಥಿಕ ನೆರವು ನೀಡಲು ಸೂಕ್ತ  ಕೈಗೊಳ್ಳಬೇಕು. ಜೀವ ವಿಮೆ, ವಾಜಪೇಯಿ ಆರೋಗ್ಯಶ್ರೀ ಕಾರ್ಡ್ ವಿತರಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಆಶಾ ತಾಲ್ಲೂಕು ಘಟಕದ ಅಧ್ಯಕ್ಷೆ ಸುಂದ್ರವ್ವ ಪಾಟೀಲ, ಎಸ್.ಎಸ್. ಕೋಟ್ಯಾಳಮಠ, ಮಂಜುಳಾ  ಅಡ್ರಕಟ್ಟಿ, ಆರ್.ಎಸ್.ಉಪಾರ, ಎಸ್.ಐ,ಚಕ್ರಸಾಲಿ, ಎಂ.ಎಂ . ಮೋರಶಿಳ್ಳಿ, ಕೆ.ಸಿ.ಕಟಳಿ, ಎಂ.ಎ.ಹರಿಜನ, ಎಸ್.ಎಚ್.ಬಡ್ನಿ, ಜಿ.ವೈ.ಲಮಾಣಿ, ಸಿ.ಎನ್.ಕಾರಬಾರಿ, ಪ್ರೇಮಾ ಬಂಡಿವಡ್ಡರ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT