ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಬೇಡಿಕೆಗಾಗಿ ಮಠಾಧೀಶರ ಬೃಹತ್ ಜಾಥಾ

Last Updated 18 ಜುಲೈ 2012, 9:45 IST
ಅಕ್ಷರ ಗಾತ್ರ

ಹೊಸಪೇಟೆ: ಕುಡಿಯುವ ನೀರು ಸೇರಿದಂತೆ ವಿವಿಧ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆಗ್ರಹಿಸಿ ಎರಡು ದಿನಗಳ ಪಾದಯಾತ್ರೆ ಮಠಾಧೀಶರ ಧರ್ಮ ಪರಿಷತ್ ಮಂಗಳವಾರ ಹೊಸಪೇಟೆಯಲ್ಲಿ ಆರಂಭಿಸಿದರು.

ಬೆಳಿಗ್ಗೆ ಹೊಸಪೇಟೆಯ ಶ್ರೀ ಸಣ್ಣಕ್ಕಿ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆ ಆರಂಭಿಸುವ ಪೂರ್ವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀ ಸಂಡೂರು ವಿರಕ್ತಮಠದ ಪ್ರಭುಸ್ವಾಮಿಗಳು ಹೈದ್ರಾಬಾದ ಕರ್ನಾಟಕದ ಜೀವನಾಡಿ ಎಂದು ತುಂಗಭದ್ರೆಗೆ ಕರೆದರೂ ಜಲಾಶಯದ ಕೂಗಳತೆ ದೂರದ ಮರಿಯಮ್ಮನಹಳ್ಳಿ ಸೇರಿದಂತೆ ಸುತ್ತಲ ಗ್ರಾಮಗಳಿಗೆ ಕುಡಿಯುವ ನೀರು ಇಲ್ಲದಿರುವುದು ವಿಷಾದನೀಯ ಎಂದರು.

ಅಧಿಕಾರಿಗಳ ಸರಿಯಾದ ನಿರ್ವಹಣೆಯ ಕೊರತೆಯಿಂದಾಗಿ ಅನಗತ್ಯ ನೀರು ಪೋಲಾಗುವುದು ಸೇರಿದಂತೆ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದ್ದು ಇಂತಹ ವಿಚಾರಗಳ ಕುರಿತು ಜಾಗೃತಿ ಮೂಡಿಸಲು ಹಾಗೂ ಕೆಲ ತ್ವರಿತ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ಪಾದಯಾತ್ರೆ ಆರಂಭಿಸಿದ್ದಾಗಿ, 18ರಂದು ಬುಧವಾರ ಸಂಜೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.

ಬೇಡಿಕೆಗಳು: ತುಂಗಭದ್ರಾ ಡ್ಯಾಂ ಹತ್ತಿರ ಇದ್ದರೂ ಜಲಾಶಯದ ನೀರು ಕುಡಿಯಲು ಇಲ್ಲದ ಮರಿಯಮ್ಮನಹಳ್ಳಿ ಸೇರಿದಂತೆ ಸುತ್ತಲ ಗ್ರಾಮಗಳಿಗೆ ಕುಡಿಯುವ ನೀರು ನೀಡುವುದು, ಸಿಂಗಟಾಲೂರು ಏತ ನೀರಾವರಿ ಯೋಜನೆಯನ್ನು ಆರಂಭಿಸಬೇಕು, ಮಾಲ್ವಿ ಜಲಾಶಯದ ನೀರನ್ನು ಸಮರ್ಥವಾಗಿ ಬಳಸಲು ಮುಂದಾಗ ಬೇಕು, ತುಂಗಭದ್ರಾ ಜಲಾಶಯದ ಹೆಚ್ಚುವರಿ ನೀರನ್ನು ಬಳಕೆ ಮಾಡಲು ಯೋಜನೆ ರೂಪಿಸಬೇಕು, ತುಂಗಭದ್ರಾ ಡ್ಯಾಂ ಮುಂಭಾಗದಲ್ಲಿ ಬ್ಯಾರೇಜ್ ನಿರ್ಮಾಣ ಮಾಡಿ ಹೊಸಪೇಟೆ, ಕೊಪ್ಪಳ ಮತ್ತು ಬಳ್ಳಾರಿ ನಗರಗಳಿಗೆ ಕುಡಿಯುವ ನೀರು ಯೋಜನೆಗೆ ಸೌಲಭ್ಯವಾಗುವಂತೆ ಮಾಡಬೇಕು, ಜಲಾಶಯದ ನೀರನ್ನು ಸಮಾನಾಂತರ ಕಾಲುವೆಗಳ ಮೂಲಕ ಈ ಭಾಗದ ಕೆರೆ ಕಟ್ಟಿಗಳಿಗೆ ನೀರು ತುಂಬಬೇಕು ಎಂಬ ಬೇಡಿಕೆಗಳನ್ನು  ಸರ್ಕಾರಕ್ಕೆ ಸಲ್ಲಿಸುವು ದಾಗಿ ತಿಳಿಸಿದರು.

ಮರಿಯಮ್ಮಹಳ್ಳಿಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಜೀ, ತೆಕ್ಕಲಕೋಟೆಯ ಶ್ರೀ ವೀರಭದ್ರ ಶಿವಾಚಾರ್ಯಮಹಾಸ್ವಾಮಿಜೀ, ಕೊಟ್ಟೂರಿನ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿ, ನಂದಿಪುರದ ಶ್ರೀ ಮಹೇಶ್ವರ ಸ್ವಾಮೀಜಿ, ಹಿರೇಹಡಗಲಿಯ ಅಭಿನವ ಹಾಲವೀರಪ್ಪಜ್ಜ ಪಂಡಿತಾರಾಧ್ಯ ಸ್ವಾಮೀಜಿ, ಕಾನಾಮಡುಗು ಶ್ರೀ ಐಮುಡಿ ಶ್ರೀ ಶರಣಾರ್ಯರು ಸೇರಿದಂತೆ 20ಕ್ಕೂ ಹೆಚ್ಚು ಮಠಾಧೀಶರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಮಂಗಳವಾರ ತೋರಣಗಲ್ ಪಟ್ಟಣದಲ್ಲಿ ವಾಸ್ತವ್ಯವಾಗಿ ಬುಧವಾರ ಸಂಜೆ ಬಳ್ಳಾರಿ ಜಿಲ್ಲಾಧಿಕಾರಿಗಳ ಕಚೇರಿ ಯಲ್ಲಿ ಅಂತ್ಯ ಆಗಲಿದೆ ಎಂದು ಮಠಾಧೀಶರ ಧರ್ಮ ಪರಿಷತ್ ಕಾರ್ಯದರ್ಶಿಗಳು ಆದ ಕೊಟ್ಟೂರು ಸಿದ್ಧಲಿಂಗ ಶಿವಾಚಾರ್ಯರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT