ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧೆಡೆ `ಕ್ಷೀರಭಾಗ್ಯ'ಯೋಜನೆಗೆ ಚಾಲನೆ

Last Updated 2 ಆಗಸ್ಟ್ 2013, 12:24 IST
ಅಕ್ಷರ ಗಾತ್ರ

ಕೊಪ್ಪಳ ಜಿಲ್ಲೆಯಲ್ಲಿ ವಿವಿಧೆಡೆ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ `ಕ್ಷೀರಭಾಗ್ಯ'ಕ್ಕೆ ಗುರುವಾರ ಚಾಲನೆ ನೀಡಲಾಯಿತು.

ಕೊಪ್ಪಳ ವರದಿ
ರಕ್ತಹೀನತೆ ಮತ್ತು ಅಪೌಷ್ಟಿಕತೆ ತಡೆಗಟ್ಟಲು ಕ್ಷೀರಭಾಗ್ಯ ಯೋಜನೆ ಅತ್ಯವಶ್ಯಕ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯವಸ್ಥಾಪಕ ಬಸವರಾಜ  ಪಟ್ಟಣಶೆಟ್ಟಿ ಹೇಳಿದರು.

ನಗರದ ಬನ್ನಿಕಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕ್ಷೀರ ಭಾಗ್ಯ ಯೋಜನೆ ಅಡಿ ವಿದ್ಯಾರ್ಥಿಗಳಿಗೆ ಹಾಲು ವಿತರಣಾ ಕಾರ್ಯಕ್ರಮದಲ್ಲಿ ಗುರುವಾರ ಅವರು ಮಾತನಾಡಿದರು.

ಶಿಕ್ಷಕರು ಕೆಲಸದ ಒತ್ತಡದ ನಡುವೆಯೂ ಇಂಥ ಯೋಜನೆ ಅನುಷ್ಠಾನಗೊಳಿಸಲು ಕಂಕಣಬದ್ಧರಾಗಿರಬೇಕು. ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಮುಖ್ಯ ಶಿಕ್ಷಕರ ಮತ್ತು ಶಿಕ್ಷಕರ ಇಚ್ಛಾಶಕ್ತಿ, ಸೇವಾ ಮನೋಭಾವ ಇಮ್ಮಡಿಗೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ನಗರಸಭಾ ಸದಸ್ಯ ಪ್ರಾಣೇಶ ಮಹೇಂದ್ರಕರ್ ಮಾತನಾಡಿ, ರಾಜ್ಯದಲ್ಲಿ ಮಾದರಿ ಯೋಜನೆಯೊಂದನ್ನು ಜಾರಿಗೊಳಿಸುತ್ತಿರುವುದು ಪಾಲಕರಲ್ಲಿ ಸಂತಸ ಉಂಟುಮಾಡಿದೆ. ಕೇವಲ ಉಳ್ಳವರ ಮಕ್ಕಳು ಮಾತ್ರ ಸೇವಿಸುತ್ತಿದ್ದ ಹಾಲು ಸಮಾಜದ ಕಟ್ಟ ಕಡೆಯ ಮಗುವಿಗೂ ಶಾಲೆಯಲ್ಲಿ ದೊರೆಯುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪರಮಾನಂದ ಯಾಳಗಿ  ಮಾತನಾಡಿ, ಹಸಿವಿಗೆ ಅನ್ನ, ಆರೋಗ್ಯಕ್ಕೆ ಹಾಲು ನೀಡಿದಾಗ ಮಕ್ಕಳು ಆರೋಗ್ಯಪೂರ್ಣವಾಗಿ ಶಕ್ತಿವಂತ ಹಾಗೂ ದೃಢಕಾಯರಾಗಿ ಬೆಳೆಯಲು ಸಾಧ್ಯ. ಸಮತೋಲನ ಆಹಾರ ನೀಡಿ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಬಹುದು ಎಂದು ನುಡಿದರು.

ನಿವೃತ್ತ ಮುಖ್ಯ ಶಿಕ್ಷಕ ಶ್ರೀಧರಮೂರ್ತಿ, ಎಸ್‌ಡಿಎಂಸಿ ಸದಸ್ಯರಾದ ರಮೇಶ ಬಿ.ಶೆಟ್ಟಿ, ಮಲ್ಲಪ್ಪ ದೊಡ್ಡಮನಿ, ಮಲ್ಲಿಕಾರ್ಜುನ ಪ್ರಭುಶೆಟ್ಟರ್, ಮಂಜುಳಾ ಹೂಗಾರ, ಪಾಲಕರಾದ ಜ್ಞಾನದೇವ ಗೊಂಧಳಿ, ಮಹಾದೇವಯ್ಯ ಹಿರೇಮಠ, ಪುಂಡಲೀಕ ಜಾಧವ, ತಿಮ್ಮನಗೌಡ ಪಾಟೀಲ್, ಮುಖ್ಯ ಶಿಕ್ಷಕರಾದ ಕರಿಬಸಪ್ಪ ಪಲ್ಲೆೀದ ಉಪಸ್ಥಿತರಿದ್ದರು.

ಶಿಕ್ಷಕ ಜಯರಾಜ ಬೂಸದ ಸ್ವಾಗತಿಸಿದರು. ರಾಮರಡ್ಡೆಪ್ಪ ಪ್ರಾಸ್ತಾವಿಕ  ಮಾತನಾಡಿದರು. ವಿ. ಮಂಜುಳಾ ವಂದಿಸಿದರು.

ಕುಷ್ಟಗಿ ವರದಿ
`ಮಕ್ಕಳಲ್ಲಿನ ಅಪೌಷ್ಟಿಕತೆ ನೀಗಿಸುವುದಕ್ಕೆ ಜಾರಿಗೆ ತಂದಿರುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ `ಕ್ಷೀರಭಾಗ್ಯ' ಯೋಜನೆ ಮಕ್ಕಳ ಪಾಲಿಗೆ ವರದಾನವಾಗಿದ್ದು, ಯಶಸ್ವಿಗೆ ಅಧಿಕಾರಿಗಳು ಮತ್ತು ಶಿಕ್ಷಕರು ಮುತುವರ್ಜಿ ವಹಿಸುವುದು ಅವಶ್ಯ' ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಶರಣು ತಳ್ಳಿಕೇರಿ ಹೇಳಿದರು.

ಪಟ್ಟಣದ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಮಕ್ಕಳಿಗೆ ಹಾಲು ವಿತರಿಸಿ ನಂತರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಚ್.ಗೋನಾಳ ಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಅನ್ನಪೂರ್ಣಮ್ಮ ವಾಲ್ಮೀಕಿ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ಯೋಜನೆಗೆ ಸಾಂಕೇತಿಕ ಚಾಲನೆ ನೀಡಿದರು. ತಾ.ಪಂ ಕಾರ್ಯನಿರ್ವಹಣಾಧಿಕಾರಿ ಸಿ.ಬಿ.ಮ್ಯಾಗೇರಿ, ಬಿಆರ್‌ಸಿ ಸಮನ್ವಯಾಧಿಕಾರಿ ಸುರೇಂದ್ರ ಕಾಂಬಳೆ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ವಿ.ಬಿ.ಉಪ್ಪಿನ, ಸಿಡಿಪಿಒ ನಾಗನೌಡ, ಹಾಲು ಒಕ್ಕೂಟದ ಮಾರ್ಗ ಸಮೀಕ್ಷಕ ಬಸವರಾಜ ಯರದೊಡ್ಡಿ, ಮುಖ್ಯಶಿಕ್ಷಕ ಅಮರೇಗೌಡ ನಾಗೂರು, ಬಸವರಾಜ ಬಾಗಲಿ, ಶ್ರೀಧರ ಕುಲಕರ್ಣಿ, ಸಿದ್ರಾಮಪ್ಪ ಅಮರಾವತಿ, ಅಹ್ಮದ್ ಹುಸೇನ್, ಶಿವಾನಂದ ನಾಗೂರು ಇತರರು ಉಪಸ್ಥಿತರಿದ್ದರು. ನಟರಾಜ ಸೋನಾರ ನಿರೂಪಿಸಿದರು.

ಪ್ರೌಢಶಾಲೆ: ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ಮಕ್ಕಳಿಗೆ ಹಾಲು ವಿತರಿಸಿದ ಪ್ರಾಚಾರ್ಯ ಡಾ.ಎಚ್.ಜಿ.ನೀರಲಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸೋಮನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವೆಂಕಟೇಶ ಕುಲಕರ್ಣಿ, ವಿಜಯಾ ಮೇಟಿ, ಸಿ.ಶರಣಪ್ಪ, ಸದ್ದುಬಾ, ದಾಕ್ಷಾಯಣಿ, ಮಹಾಂತಮ್ಮ ಸಂಗನಾಳ, ನಬೀಸಾಬ್ ಇದ್ದರು. ಅರವಿಂದಕುಮಾರ ದೇಸಾಯಿ ನಿರೂಪಿಸಿದರು.

ಹನುಮಸಾಗರ ವರದಿ
`ಕ್ಷೀರ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಂಡಾಗ ಮಾತ್ರ ಯಶಸ್ವಿಯಾದಂತೆ, ಆದರೆ ಆ ಯಶಸ್ವಿಯ ಹಿಂದೆ ಶಿಕ್ಷಕರ ಗುರುತರ ಜವಾಬ್ದಾರಿ ಇದೆ' ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಶರಣು ತಳ್ಳಿಕೇರಿ ಹೇಳಿದರು.

ಗುರುವಾರ ಇಲ್ಲಿನ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕ್ಷೀರ ಭಾಗ್ಯ ಯೋಜನೆಯನ್ನು ವಿದ್ಯಾರ್ಥಿನಿಗೆ ಹಾಲು ಕುಡಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಹನುಮಂತಪ್ಪ ರಾಠೋಡ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತಮ್ಮ ಹುಲ್ಲೂರ, ಬಾಬುುಮಿಯಾ ಚೌಧರಿ, ಮೈನೂದ್ದಿನ್ ಖಾಜಿ, ಯಂಕಪ್ಪ, ಸೂಚಪ್ಪ ಭೋವಿ, ಸಮೂಹ ಸಂಪನ್ಮೂಲ ಕೇಂದ್ರದ ಸಿದ್ದಪ್ಪ ಮಳಗಿ, ಶಾಲಾ ಸಿಬ್ಬಂದಿ ಇದ್ದರು.

ಕಬ್ಬರಗಿ: ಕಬ್ಬರಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಮೇಘರಾಜ ವಜ್ಜಲ, ತಾಲ್ಲೂಕು ಪಂಚಾಯಿತಿ ಸದಸ್ಯ ಪರಶುರಾಮ ನಂದ್ಯಾಳ, ಭೀಮಣ್ಣ ವಜ್ಜಲ, ಗ್ರಾಮ ಪಂಚಾಯಿತಿ ಸದಸ್ಯ ಮಾಸಪ್ಪ ಬಿಳಿಯಪ್ಪನವರ, ಸಿದ್ದಣ್ಣ ಕೆಜಿ, ಯಮನೂರಪ್ಪ ಕುರಿ, ದುರಗಪ್ಪ, ಫಕೀರಪ್ಪ, ಸೋಮಣ್ಣ ಹಾಗೂ ಶಾಲಾ ಸಿಬ್ಬಂದಿ ಇದ್ದರು.

ಮಿಯಾಪುರ: ಸಮೀಪದ ಮಿಯಾಪುರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮವನ್ನು ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮಲ್ಲಪ್ಪ ಗಾಡಿ ಉದ್ಘಾಟಿಸಿದರು.

ಉಪಾಧ್ಯಕ್ಷೆ ಸುಜಾತಾ ದೊಡ್ಡಬಸವರಾಜ, ಗ್ರಾಮ ಪಂಚಾಯಿತಿ ಸದಸ್ಯ ಜಗದೀಶ ಉಪ್ಪೇರಿ, ಬಸವರಾಜ ಹುಲ್ಲೂರ, ರಾಮಣ್ಣ ಗೌಡ್ರ, ಶರಣಪ್ಪ, ಮುಖ್ಯಶಿಕ್ಷಕ ಸಿದ್ರಾಮಯ್ಯ ಇದ್ದರು.

ಹೂಲಗೇರಿ: ಹೂಲಗೇರಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪ್ರಕಾಶ ರಾಠೋಡ ವಿದ್ಯಾರ್ಥಿಗಳಿಗೆ ಹಾಲು ವಿತರಿಸುವ ಮೂಲಕ ಚಾಲನೆ ನೀಡಿದರು.

ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಗುರುಸಿದ್ದಪ್ಪ ಹೊರಪ್ಯಾಟಿ, ಶೇಖರ ಹೊರಪ್ಯಾಟಿ, ಸಂಗಪ್ಪ ಹೊರಪ್ಯಾಟಿ, ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಕಾಂತ ಕರಡಿ, ಚಂದಪ್ಪ ಗುಡಿಮನಿ, ಶಂಕ್ರಪ್ಪ ಬಳಿಗೇರ, ಡಾ.ಶರಣಪ್ಪ ಚಳಗೇರಿ, ಸಿದ್ದಲಿಂಗಪ್ಪ ಕರಡಕಲ್, ಮಹಾಂತೇಶ ಸೋಬಾನದ, ಮುಖ್ಯ ಶಿಕ್ಷಕ ಮಲ್ಲಪ್ಪ ಗಾಣಿಗೇರ ಇತರರು ಇದ್ದರು.

ಮಾವಿನಇಟಗಿ: ಮಾವಿನಇಟಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಕ್ಷೀರ ಭಾಗ್ಯ ಯೋಜನೆಯನ್ವಯ ಮುಖ್ಯ ಶಿಕ್ಷಕ ಗೂಳಪ್ಪ ಕೋಟಿ ಗ್ರಾಮದ ಮುಖಂಡರು ವಿದ್ಯಾರ್ಥಿಗಳಿಗೆ ಹಾಲು ವಿತರಿಸಿದರು.

ಗಂಗಾವತಿ ವರದಿ
ಪ್ರಾಥಮಿಕ ಮತ್ತು ಪ್ರೌಢ ಶಾಲಾ ಹಂತದ ಮಕ್ಕಳಲ್ಲಿ ಕಂಡು ಬರುವ ಪೌಷ್ಟಿಕಾಂಶದ ಕೊರತೆ ನೀಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದ ಕ್ಷೀರ ಭಾಗ್ಯ ಯೋಜನೆಗೆ ತಾಲ್ಲೂಕಿನಾದ್ಯಂತ ಏಕಕಾಲಕ್ಕೆ ಗುರವಾರ ಚಾಲನೆ ನೀಡಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ನಗರದ ಉಪ್ಪಿನಮಾಳಿಕ್ಯಾಂಪಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ಗುರುವಾರ ಯೋಜನೆಗೆ ಸಾಂಕೇತಿಕವಾಗಿ ಚಾಲನೆ ನೀಡಿದರು.

ಆನೆಗೊಂದಿ ಗ್ರಾಮ: ಗ್ರಾಮದ ಹಂಪಿ ರಸ್ತೆಯಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆನೆಗೊಂದಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಘವೇಂದ್ರ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ಚಾಲನೆ ನೀಡಿದರು. ಶಿಕ್ಷಣ ಸಮನ್ವಯಾಧಿಕಾರಿ ಪ್ರಕಾಶ ಇಟಗಿ ನೇತೃತ್ವ ವಹಿಸಿದ್ದರು. 

ಮುಖ್ಯ ಶಿಕ್ಷಕಿ ಸವಿತಾಗೌಡ ಮಾತನಾಡಿ, ಪ್ರತಿ ಮಗುವಿಗೆ 18 ಗ್ರಾಂ ಹಾಲಿನ ಪುಡಿ ಅಥವಾ 150 ಮಿ.ಲೀ. ಹಾಲು ವಿತರಿಸಲಾಗುತ್ತಿದೆ ಎಂದರು.

ಶಿಕ್ಷಕ ಶ್ರೀಕಾಂತ, ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರಶೇಖರ, ಗೋವಿಂದಪ್ಪ, ವರಲಕ್ಷ್ಮಿ, ಈಶ್ವರಮ್ಮ ಇತರರಿದ್ದರು.
ನೀಲಕಂಠೇಶ್ವರ ವೃತ್ತ: ಗಂಗಾವತಿ ನಗರಸಭಾ ವ್ಯಾಪ್ತಿಯ 19ನೇ ವಾರ್ಡ್ ನೀಲಕಂಠೇಶ್ವರ ವೃತ್ತದಲ್ಲಿರುವ ಬಾಲಕಿಯರ ಸರ್ಕಾರಿ ಹಿರಿಯ ಶಾಸಕರ ಮಾದರಿ ಶಾಲೆಯಲ್ಲಿ ನಗರಸಭಾ ಸದಸ್ಯೆ ಕುರುಗೋಡು ದಾಕ್ಷಾಯಣಿ ಕ್ಷೀರಭಾಗ್ಯ ಯೋಜನೆಗೆ ಚಾಲನೆ ನೀಡಿದರು.
ಮುಖ್ಯಗುರು ಮಲ್ಲನಗೌಡ ಗೌಡರ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಬಿ.ಆರ್. ಜೋಶಿ, ಸುರೇಶ, ಅನ್ನಪೂರ್ಣ ದೇವಿ, ಕೆ.ಎಸ್. ವೀರಮಹೇಶ್ವರಿ ದೇವಿ, ಶಾರದಾ ಮಿರ್ಜಿ, ಶರಣವ್ವ ಅಂಗಡಿ, ವಾರ್ಡಿನ ಪ್ರಮುಖ ಕುರುಗೋಡು ಶ್ರೀನಿವಾಸ ಇತರರಿದ್ದರು.

ಕಾರಟಗಿ ವರದಿ
ಕ್ಷೀರಭಾಗ್ಯ ಯೋಜನೆಗೆ ವಿವಿಧ ಶಾಲೆಗಳಲ್ಲಿ ಗುರುವಾರ ಚಾಲನೆ ನೀಡಲಾಯಿತು.

ಚಳ್ಳೂರ ಗ್ರಾಮ: ಸಮೀಪದ ಚಳ್ಳೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನವಲಿ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯೆ ಜ್ಯೋತಿ ನಾಗರಾಜ್ ಬಿಲ್ಗಾರ್ ಚಾಲನೆ ನೀಡಿದರು.

ಸಮೂಹ ಸಂಪನ್ಮೂಲ ಕೇಂದ್ರದ ಅಧಿಕಾರಿಗಳು ಯೋಜನೆಯ ಬಗೆಗೆ ವಿವರ ನೀಡಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಸಿದ್ದಪ್ಪ ರಾಟಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಚಿದಾನಂದಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಈಶ್ವರಪ್ಪ ಮೊದಲಾದವರು ಉಪಸ್ಥಿತರಿದ್ದರು.

ಸಿದ್ಧಲಿಂಗನಗರ: ಸಮೀಪದ ಸಿದ್ಧಲಿಂಗ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಹಿರೇಬಸಪ್ಪ ಸಜ್ಜನ್ ಕ್ಷೀರಭಾಗ್ಯ ಯೋಜನೆಗೆ ಚಾಲನೆ ನೀಡಿದರು.

ಗ್ರಾಮ ಪಂಚಾಯಿತಿ ಸದಸ್ಯ ದೊಡ್ಡಪ್ಪ, ರಾಮಣ್ಣ, ಶ್ರೀನಿವಾಸ, ಮುಖ್ಯಗುರು ಭೀಮಣ್ಣ ಕರಡಿ, ಎಸ್‌ಡಿಎಂಸಿ ಸದಸ್ಯರು, ಪಾಲಕರು ಉಪಸ್ಥಿತರಿದ್ದರು.

ಸರ್ಕಾರಿ ಪ್ರೌಢಶಾಲೆ: ಇಲ್ಲಿಯ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಅಮರೇಶ್ ಕುಳಗಿ ಕ್ಷೀರಭಾಗ್ಯ ಯೋಜನೆಗೆ ಚಾಲನೆ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ. ಶರಣಯ್ಯಸ್ವಾಮಿ ಕ್ಷೀರಭಾಗ್ಯ ಯೋಜನೆಯ ಯಶಸ್ವಿಗೆ ಪಂಚಾಯಿತಿ ಅನುದಾನದಲ್ಲಿ ಲೋಟಗಳನ್ನು ಕೊಡಿಸುವ ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಉಪ ಪ್ರಾಚಾರ್ಯ ಶರಣಪ್ಪ ಗೌರಿಪೂರ, ತಾಲ್ಲೂಕು ಪಂಚಾಯಿತಿ ಸದಸ್ಯ ಹಿರೇಬಸಪ್ಪ ಸಜ್ಜನ್, ಶಿಕ್ಷಣಪ್ರೇಮಿ ಶರಣಪ್ಪ ಉಪನಾಳ ಮಾತನಾಡಿದರು.

ತಾಲ್ಲೂಕು ಪಂಚಾಯಿತಿ ಸದಸ್ಯೆ ಟಿ. ಗಂಗಮ್ಮ, ಶಿಕ್ಷಣ ಸಂಯೋಜಕ ವಿಶ್ವನಾಥ ದಾಸ್, ಸಿಆರ್‌ಪಿ ರಾಜೇಂದ್ರ ಶೆಟ್ಟರ್ ಪ್ರಮುಖರಾದ ದೊಡ್ಡಬಸಪ್ಪ, ಪುರುಷೋತ್ತಮ, ವಿಜಯಕುಮಾರ, ಲಕ್ಷಣ, ರೇಖಾ ಗಡಗಿ, ಲಕ್ಷಣ ಹುಲಿಗಿ ಉಪಸ್ಥಿತರಿದ್ದರು.

ಸಂತೋಶ್ ಸಂಗಡಿಗರು ಪ್ರಾರ್ಥಿಸಿದರು. ವಿಜಯಕುಮಾರ ಸ್ವಾಗತಿಸಿದರು. ಹಜರತ್ ಬಾಗಲಿ ನಿರೂಪಿಸಿದರು. ಸಲೀಮಾ ಪಿ ವಂದಿಸಿದರು.

ಕೇಂದ್ರ ಹಿರಿಯ ಪ್ರಾಥಮಿಕ ಶಾಲೆ: ಕ್ಷೀರಭಾಗ್ಯ ಯೋಜನೆಯಡಿ ವಿದ್ಯಾರ್ಥಿಗಳಿಗೆ ಹಾಲು ನೀಡುವ ಕಾರ್ಯಕ್ಕೆ ಜಿಲ್ಲಾ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಅಮರೇಶ್ ಕುಳಗಿ ಚಾಲನೆ ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ. ಶರಣಯ್ಯಸ್ವಾಮಿ ಮಾತನಾಡಿದರು.

ತಾಲ್ಲೂಕು ಪಂಚಾಯಿತಿ ಸದಸ್ಯರಾದ ಹಿರೇಬಸಪ್ಪ ಸಜ್ಜನ್, ಟಿ. ಗಂಗಮ್ಮ, ಗ್ರಾಮ ಪಂಚಾಯಿತಿ ಸದಸ್ಯ ಹನುಮಂತಸಿಂಗ್, ಎಸ್‌ಡಿಎಂಸಿ ಅಧ್ಯಕ್ಷ ತಾಯಪ್ಪ, ದ್ಯಾವಣ್ಣ, ಶಿಕ್ಷಣ ಸಂಯೋಜಕ ವಿಶ್ವನಾಥ ದಾಸ್, ಸಿಆರ್‌ಪಿ, ಎಸ್‌ಡಿಎಂಸಿ ಸದಸ್ಯರು, ಎರಡು ಶಾಲೆಗಳ ಮುಖ್ಯಗುರುಗಳು ಉಪಸ್ಥಿರಿದ್ದರು.

ಕನಕಗಿರಿ ವರದಿ
ಇಲ್ಲಿನ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಗುರುವಾರ ಜನಪ್ರತಿನಿಧಿಗಳು, ಗಣ್ಯರು ಮಕ್ಕಳಿಗೆ ಹಾಲು ವಿತರಿಸಿದರು.

ಸಮೀಪದ ಮುಸಲಾಪುರ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸಪ್ಪ ತಳವಾರ ಹಾಲು ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕ್ಷೀರ ಭಾಗ್ಯ ಕಾರ್ಯಕ್ರದ ಮಹತ್ವ ಕುರಿತು ಮುಖ್ಯ ಶಿಕ್ಷಕ ಎನ್. ಮಹಾಂತೇಶ ಮಾತನಾಡಿದರು.

ಗ್ರಾಪಂ ಸದಸ್ಯ ಸಿದ್ದಬಸಯ್ಯ, ಶಿಕ್ಷಕರಾದ ಲಾಲಸಾಬ, ಜಲಾಲಸಾಬ ಹುಡೇದ, ಗೀತಾ, ರೇಖಾ, ಮೀನಾಕ್ಷಿ, ವಿಜಯಭಾಸ್ಕರ ರೆಡ್ಡಿ, ಮಂಜುನಾಥ, ಉಮಾ ಶೆಟ್ಟರ್ ಇತರರು ಇದ್ದರು.

ರುದ್ರಸ್ವಾಮಿ ಶಾಲೆ: ಇಲ್ಲಿನ ರುದ್ರಸ್ವಾಮಿ ಪ್ರೌಢಶಾಲೆ ಹಾಗೂ ಶ್ರೀ ಶಿವಯೋಗಿ ಚನ್ನಮಲ್ಲಸ್ವಾಮಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಗುರುವಾರ ಹಾಲು ವಿತರಿಸಲಾಯಿತು. ಹಿರಿಯ ಮುಖಂಡ ಕೆ. ಮಹಾಬಳೇಶ್ವರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಪಂಚಾಯಿತಿ ಸದಸ್ಯ ಗಂಗಣ್ಣ ಸಮಗಂಡಿ, ಕರ್ನಾಟಕ ರಾಜ್ಯ ಕೈಗಾರಿಕಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಶೇಖರಗೌಡ ಪಾಟೀಲ, ಆಡಳಿತ ಮಂಡಳಿ ಸದಸ್ಯ ಗುರುಸಿದ್ದಪ್ಪ ಹಾದಿಮನಿ, ಮುಖ್ಯ ಶಿಕ್ಷಕ ಮೌನೇಶ್ವರ ಬಡಿಗೇರ ಮಾತನಾಡಿದರು.

ಗ್ರಾಪಂ ಉಪಾಧ್ಯಕ್ಷ ಪ್ರಕಾಶ ಹಾದಿಮನಿ, ಸಂಸ್ಥೆಯ ಕಾರ್ಯದರ್ಶಿ ಮಹಾಬಳೇಶ್ವರ ಸಜ್ಜನ್, ಸದಸ್ಯರಾದ ವಿರೂಪಾಕ್ಷಪ್ಪ ಬತ್ತದ, ರುದ್ರಮುನಿ ಪ್ರಭುಶೆಟ್ಟರ್, ಪ್ರಶಾಂತ ಪ್ರಭುಶೆಟ್ಟರ್, ಶಿಕ್ಷಕರಾದ ಗಂಗಾಧರ ಗದ್ದಿ, ಮಹ್ಮದರಫಿ, ಕರೇಗೌಡ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT