ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವೇಕವಾಣಿ ಪಾಲನೆ: ಜೀವನ ಸಂಪನ್ನ

Last Updated 13 ಜನವರಿ 2012, 9:10 IST
ಅಕ್ಷರ ಗಾತ್ರ

ಮದ್ದೂರು: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಗುರುವಾರ ಸ್ವಾಮಿ ವಿವೇಕಾನಂದ 150ನೇ ಜಯಂತಿ ಅಂಗವಾಗಿ ರಾಷ್ಟ್ರೀಯ ಯುವ ದಿನಾಚರಣೆ ಸಂಭ್ರಮದಿಂದ ಆಚರಿಸಲಾಯಿತು.

ಸರ್ಕಾರಿ ಮಹಿಳಾ ಕಾಲೇಜು: ಇಲ್ಲಿ ಯುವಜನ ಸೇವಾ ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಹಾಗೂ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕ್ರೀಡಾ ಸಂಘವು ಸಂಯುಕ್ತವಾಗಿ ರಾಷ್ಟ್ರೀಯ ಯುವ ದಿನಾಚರಣೆ ಏರ್ಪಡಿಸಲಾಗಿತ್ತು. 

ಸ್ವಾಮಿ ವಿವೇಕಾನಂದ ಭಾವಚಿತ್ರದೊಂದಿಗೆ ಯುವಜನರ ಜಾಗೃತಿ ಜಾಥಾ ನಡೆಯಿತು. ಶಾಸಕಿ ಕಲ್ಪನ ಸಿದ್ದರಾಜು ಜಾಥಾಗೆ ಚಾಲನೆ ನೀಡಿದರು.

ಎಚ್‌ಕೆವಿ ಕಾಲೇಜಿನ ಕಾರ್ಯದರ್ಶಿ ಕೆ.ಟಿ. ಚಂದು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಂಶುಪಾಲರಾದ ಡಾ. ಲೀಲಾ ಅಪ್ಪಾಜಿ ವಿವೇಕ ವಾಣಿ ಕುರಿತು ಮಾತನಾಡಿದರು. ತಾ.ಪಂ. ಅಧ್ಯಕ್ಷೆ ಚೌಡಮ್ಮ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದರು. ಸಾಹಿತಿ ತೈಲೂರು ವೆಂಕಟಕೃಷ್ಣ, ಜಿಪಂ ಸದಸ್ಯ ಸುರೇಶಕಂಠಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಾರಸಿಂಗನಹಳ್ಳಿ ರಾಮಚಂದ್ರು, ಪುರಸಭಾಧ್ಯಕ್ಷ ಎಸ್. ಚಂದ್ರು, ಜೆಡಿಎಸ್ ಅಧ್ಯಕ್ಷ ಅಜ್ಜಹಳ್ಳಿ ರಾಮಕೃಷ್ಣ ಇದ್ದರು.

ಸಂವಾದ: ಮಧ್ಯಾಹ್ನ ವಿಚಾರವಾದಿ ಪ್ರೊ.ಕೆ.ಎಸ್. ಭಗವಾನ್ ಅವರು ವೈಚಾರಿಕೆ ಪ್ರಜ್ಞೆಗೆ ಇರುವ ಸವಾಲುಗಳು ಕುರಿತು ಮಾತನಾಡಿದರು. ಅಲ್ಲದೇ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದರು. ಉದ್ಯಮಿ ಕರಣ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಪ್ರಕಾಶ್, ಯುವ ವಿಜ್ಞಾನಿ ಡಾ. ಆನಂದ್ ಭಾಗವಹಿಸಿದ್ದರು.
ಉಪನ್ಯಾಸ: ಮನ್‌ಮುಲ್ ಮಾಜಿ ನಿರ್ದೇಶಕ ಕುಮಾರ್ ಕೊಪ್ಪ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಯಲ್ಲಿ ಯುವಜನರ ಪಾತ್ರ ಕುರಿತು ಮಾತನಾಡಿ ದರು. ಪ್ರಾಧ್ಯಾಪಕ ಡಾ.ಮ. ರಾಮಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರ ಸಂಘದ ಅಧ್ಯಕ್ಷ ವಿ.ಎಂ. ಶಿವಕುಮಾರ್, ಪುರುಷೋತ್ತಮ್ ಇದ್ದರು.
ಸಮಾರೋಪ: ಸಂಜೆ ನಡೆದ ಮುಕ್ತಾಯ ಸಮಾರಂಭದಲ್ಲಿ ಮಾಜಿ ಶಾಸಕ ಕೆ.ಟಿ. ಶ್ರೀಕಂಠೇ ಗೌಡ ಸಮಾರೋಪ ಭಾಷಣ ಮಾಡಿದರು. ನಿವೃತ್ತ ದೈಹಿಕ ಶಿಕ್ಷಕ ಬಿ.ವಿ. ಲಿಂಗಪ್ಪ, ಯೋಗಗುರು ಡಾ. ಪುಟ್ಟಸ್ವಾಮಿ, ಯುವ ಪ್ರತಿನಿಧಿ ಟಿ.ಸಿ. ರವೀಂದ್ರ, ಕೃಷಿಕ ಕೆಂಪಯ್ಯ, ಪತ್ರಕರ್ತ ಪುಟ್ಟಸ್ವಾಮಿ, ಟಾಂಗಾ ಚಾಲಕ ಮೊಖ್ತರ್ ಅವರನ್ನು ಸಮಾಜ ಸೇವಕ ತೈಲೂರು ರಘು ಸನ್ಮಾನಿಸಿದರು. ವಿವೇಕಾನಂದ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಲಾರಾ ಪ್ರಸನ್ನ, ಕನ್ನಡ ಜ್ಯೋತಿ ಯುವಕರ ಸಂಘದ ಅಧ್ಯಕ್ಷ ಸಿದ್ದರಾಜು, ಮ.ನ. ಪ್ರಸನ್ನಕುಮಾರ್, ಎನ್‌ಎಸ್‌ಎಸ್ ಅಧಿಕಾರಿ ರೂಪ, ಸುರೇಶ್ ಇತರರು ಇದ್ದರು. ಹುರುಗಲ ವಾಡಿ ರಾಮಯ್ಯ ತಂಡದಿಂದ ವಿವೇಕಾನಂದರ ಗೀತ ಗಾಯನ ನಡೆಯಿತು.

ಆಬಲವಾಡಿ: ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ವಿವೇಕಾನಂದ ಜಯಂತಿ ಕಾರ್ಯ ಕ್ರಮದಲ್ಲಿ ಮುಖ್ಯಶಿಕ್ಷಕ ಎಚ್.ವಿ. ಜಯರಾಂ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದೈಹಿಕ ಶಿಕ್ಷಕ ಬಿ.ಪಿ. ಲಿಂಗರಾಜು ಉಪನ್ಯಾಸ ನೀಡಿದರು. ಶಿಕ್ಷಕರಾದ ರಘು, ಬಸ್ಸಮ್ಮ ಕಲ್ಬುರ್ಗಿ, ಚಿದಾನಂದ, ಎಚ್.ಕೆ. ರಮೇಶ್, ನರಸಿಂಹಯ್ಯ, ಶ್ರೀಗಿರಿ ಲಕ್ಷ್ಮಣರಾವ್, ಕಚೇರಿ ಸಹಾಯಕ ರಮೇಶ್ ಇದ್ದರು.

ಹಲಗೂರು ವರದಿ: ಸ್ವಾಮಿ ವಿವೇಕಾನಂದರ ಆದರ್ಶವನ್ನು ಯುವ ಪೀಳಿಗೆ ಮೈಗೂಡಿಸಿಕೊ ಳ್ಳಬೇಕು ಎಂದು ಪ್ರಾಂಶುಪಾಲರಾದ ಪ್ರೊ.ಬಿ. ಶ್ರೀಕುಮಾರಿ ಸಲಹೆ ನೀಡಿದರು.

ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಗುರುವಾರ ನಡೆದ ಸ್ವಾಮಿ ವಿವೇಕಾನಂದ ಅವರ 150ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯುವಕರು ದೇಶ ಕಟ್ಟುವ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದರು ಹಲವು ಆದರ್ಶ ಬಿಟ್ಟುಹೋಗಿದ್ದಾರೆ. ದೇಶದ ಪ್ರಗತಿ ದೃಷ್ಟಿಯಲ್ಲಿ ಅವುಗಳ ಪಾಲನೆ ಯುವ ಜನಾಂಗಕ್ಕೆ ಸವಾಲಾಗಿದೆ. ಯುವಕರು ಅವುಗಳನ್ನು ಮೈಗೂಡಿಸಿಕೊಂಡರೆ ಭ್ರಷ್ಟಾಚಾರ ತೊಲಗುತ್ತದೆ. ತಮ್ಮ ಆದರ್ಶ ಗುಣಗಳಿಂದ ವಿವೇಕಾನಂದರು ಯುವಕರ ಸಾಲಿನಲ್ಲಿ ಸದಾ ಮಾದರಿಯಾಗುತ್ತಾರೆ ಎಂದರು.

ಸ್ವಾಮಿ ವಿವೇಕಾನಂದ ಅವರ ಜನ್ಮ ದಿನಾಚರಣೆ ಅಂಗವಾಗಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸ್ವಯಂಸೇವಕರು ಸ್ವಚ್ಛತಾ ಕಾರ್ಯ ಕೈಗೊಂಡರು. ಸಾಹಿತಿ ವಿಶ್ವಾರಾಧ್ಯ. ನಾ. ಕೋಟೆ, ಅಧ್ಯಾಪಕ ಕಾರ್ಯದರ್ಶಿ ಜಗದೀಶ್, ದೈಹಿಕ ಶಿಕ್ಷಣ ನಿರ್ದೇಶಕ ಪಿ. ಭಾಸ್ಕರ್, ಸಹಾಯಕ ಪ್ರಾಧ್ಯಾಪಕರಾದ ಚಿನ್ನಸ್ವಾಮಿ, ರಶ್ಮಿ, ವೇದಾವತಿ, ಶೀರೀನ್ ತಾಜ್, ಎಚ್.ಎಂ. ಮೂರ್ತಿ, ಟಿ.ಆರ್. ಲತಾ, ಭವ್ಯ ಇತರರು ಇದ್ದರು. ಪವಿತ್ರ ಪ್ರಾರ್ಥಿಸಿದರು. ಧನಲಕ್ಷ್ಮಿ ಸ್ವಾಗತಿಸಿದರು. ರೇಖಾ ವಂದಿಸಿದರು. ವರಲಕ್ಷ್ಮಿ ನಿರೂಪಿಸಿದರು.

ಮಳವಳ್ಳಿ ವರದಿ: ಬಿಜೆಪಿ ಯುವ ಮೋರ್ಚಾ ಸಹಯೋಗದಲ್ಲಿ ಗುರುವಾರ ಪಟ್ಟಣದ ರಾಮರೂಢ ಸಮುದಾಯ ಭವನದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಆಚರಿಸಲಾಯಿತು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಪಿ. ಮಹೇಶ್ ಮಾತನಾಡಿ, ವಿವೇಕಾನಂದರ ಆದರ್ಶ, ತತ್ವ ಇಂದಿನ ಯುವಕರು ಪಾಲಿಸಬೇಕು. ಇದರಿಂದ ದೇಶ ಅಭಿವೃದ್ಧಿಯಾಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.
ತಾಲ್ಲೂಕು ಘಟಕದ ಅಧ್ಯಕ್ಷ ಡಾ. ಕಪನಿಗೌಡ, ಮುಖಂಡರಾದ

ವಿಕಾಸ್, ದೀಪಕ್, ಆನಂದ್, ವೇಣು,ಎಂ.ಎನ್. ಕೃಷ್ಣ, ಕನ್ನಳ್ಳಿ ಸುಂದ್ರಪ್ಪ, ಮಹಿಳಾ  ಘಟಕದ ಉಮಾ, ಶಾಲಾ- ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಭಾರತ್ ವಿಕಾಸ್ ಪರಿಷತ್‌ಮಳವಳ್ಳಿ: ಸ್ವಾಮಿ ವಿವೇಕಾನಂದರ ಆದರ್ಶ ವೇದಿಕೆಯಲ್ಲಿ ಭಾಷಣ ಮಾಡಿದರೆ ಸಾಲದು, ವಿದ್ಯಾರ್ಥಿ ಜೀವನದಲ್ಲೇ ಆ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಎಂ. ರಾಮು ತಿಳಿಸಿದರು.

ಭಾರತ್ ವಿಕಾಸ್ ಪರಿಷತ್‌ನ ಶಾಲಾ ಆವರಣ ದಲ್ಲಿ ಗುರುವಾರ ನಡೆದ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ಚರ್ಚಾ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಂಡ್ಯದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಕಾರ್ಯವಾಹ ಪ್ರವೀಣ್ ವಿವೇಕಾನಂದರ ಜೀವನದ ಹಲವು ಘಟನೆಗಳನ್ನು ಸ್ಮರಿಸಿದರು. 11 ಶಾಲೆಗಳ 20 ವಿದ್ಯಾರ್ಥಿಗಳು ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಭಾರತ ವಿಕಾಸ್ ಪರಿಷತ್ ತಾಲ್ಲೂಕು ಅಧ್ಯಕ್ಷ ಎಚ್.ಆರ್. ಅಶೋಕ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಿಕಾಸ್ ಪರಿಷತ್ ಶಾಲೆ ಅಧ್ಯಕ್ಷ ರಾಮೇಗೌಡ, ಕಾರ್ಯದರ್ಶಿ ದೊಡ್ಡಣ್ಣ, ಮಾಜಿ ಅಧ್ಯಕ್ಷ ಬಿ.ಎಂ. ಮಹದೇವಪ್ಪ, ಮುಖಂಡರಾದ ಬಸವಲಿಂಗಪ್ಪ, ಮುಖ್ಯ ಶಿಕ್ಷಕ ನಾಗರಾಜು, ಯೋಗಗುರು ಮಲ್ಲಿಕಾರ್ಜುನ ಸ್ವಾಮಿ, ಸಾಹಿತಿ ಮ.ಸಿ. ನಾರಾಯಣ ಇತರರು ಇದ್ದರು.

ಶ್ರೀರಂಗಪಟ್ಟಣ ವರದಿ: ಅಪ್ರತಿಮ ದೇಶಭಕ್ತ ಸ್ವಾಮಿ ವಿವೇಕಾನಂದರ ಆದರ್ಶ ಪಾಲಿಸುವುದು ಇಂದಿನ ಅಗತ್ಯವಾಗಿದೆ ಎಂದು ಪಟ್ಟಣದ ತ್ವರಿತ ಪಥ ನ್ಯಾಯಾಲಯದ ನ್ಯಾಯಾಧೀಶ ವೈ.ಎಸ್. ವಟವಟಿ ಹೇಳಿದರು.
ಪಟ್ಟಣದಲ್ಲಿ ಗುರುವಾರ ವಕೀಲರ ಸಂಘ ಏರ್ಪಡಿಸಿದ್ದ ವಿವೇಕಾನಂದ ಜಯಂತಿ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

ವಕೀಲರ ಸಂಘದ ಅಧ್ಯಕ್ಷ ಚಂದಗಿರಿಕೊಪ್ಪಲು ಮೂರ್ತಿ ಮಾತನಾಡಿ, ವಿವೇಕಾನಂದರು ರಾಮಕೃಷ್ಣ ಮಿಷನ್ ಸ್ಥಾಪನೆ ಮಾಡಿ ದೇಶದ ಉದ್ದಗಲಕ್ಕೂ ಶೈಕ್ಷಣಿಕ ಜಾಗೃತಿ ಮೂಡಿಸಲು ಶ್ರಮಿಸಿದರು ಎಂದರು.
ನ್ಯಾಯಾಧೀಶರಾದ ಜಯಶ್ರೀ, ತಳವಾರ್, ನಾಗರಾಜು, ಎಂ.ಎಸ್.ದರಗಾದ್, ವಕೀಲರ ಸಂಘದ ಕಾರ್ಯದರ್ಶಿ ಹಾಲಪ್ಪ ಇತರರು ಇದ್ದರು.

ಕೃಷ್ಣರಾಜಪೇಟೆ ವರದಿ: ಭಾರತೀಯ ಸಂಸ್ಕೃತಿಗೆ ವಿಶ್ವ ಮಾನ್ಯತೆ ದೊರಕಿಸಿಕೊಡಲು ಶ್ರಮಿಸಿದ ಸ್ವಾಮಿ ವಿವೇಕಾನಂದರ ಚಿಂತನೆ ಸಾರ್ವಕಾಲಿಕ ಎಂದು ಪಾಂಡವಪುರ ತಾಲ್ಲೂಕು ಉಪನ್ಯಾಸಕರ ಸಂಘದ ಅಧ್ಯಕ್ಷ ಎನ್.ಎಂ. ಶಿವಪ್ರಕಾಶ್ ನುಡಿದರು.

ತಾಲ್ಲೂಕಿನ ತೆಂಡೆಕೆರೆಯ ಡಾ. ಅಂಬೇಡ್ಕರ್ ಸಮುದಾಯ ಭವನದಲ್ಲಿ ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ಗುರುವಾರ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರ 150ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸ್ಥಳೀಯ ಪ್ರೌಢಶಾಲೆ ಮುಖ್ಯಶಿಕ್ಷಕ ಎಂ.ಆರ್. ಮುತ್ತುರಾಜ್ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಸಮನ್ವಯಾಧಿಕಾರಿ ರಾಮಪ್ಪ, ಬಿಆರ್‌ಪಿಗಳಾದ ನಾಗೇಶ್, ರಮೇಶ್, ಸಿಆರ್‌ಪಿಗಳಾದ ಕೆ.ಪಿ. ಬೋರೇಗೌಡ, ಆರ್.ಕೆ. ರಮೇಶ್, ಪದ್ಮೇಶ್, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಶಿವರಾಮೇ ಗೌಡ, ಪ್ರಜ್ಞಾವಂತ ನಾಗರಿಕ ವೇದಿಕೆಯ ಅ.ನಿ. ದೇವರಾಜು, ಡಾ. ರಾಮಲಿಂಗಯ್ಯ, ಎಂ.ಎಸ್. ಯಡೂರಪ್ಪ, ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮಾರೇನಳ್ಳಿ ಲೋಕೇಶ್, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಶಿವಕುಮಾರ್ ಇತರರು ಇದ್ದರು.

ನಾಗಮಂಗಲ ವರದಿ: ಸ್ವಾಮಿ ವಿವೇಕಾನಂದರ ಓದು ಅವರನ್ನು ವಿಶ್ವವಿಖ್ಯಾತಗೊಳಿಸಿತು. ಅವರಂತೆ ವಿದ್ಯಾರ್ಥಿಗಳು ವಿಚಾರಗ್ರಾಹಿಗಳಾಗಿ ಗುರುಗಳಿಗೆ ಉತ್ತಮ ಶಿಷ್ಯರಾಗಬೇಕು ಎಂದು ಉಪನ್ಯಾಸಕ ಎ. ರಘುನಾಥ್‌ಸಿಂಗ್ ಹೇಳಿದರು.

ಗುರುವಾರ ತಾಲ್ಲೂಕಿನ ಬೆಳ್ಳೂರಿನ ಆರ್‌ಡಿಎಸ್ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಜಿಲ್ಲಾ ಯುವಜನ ಕ್ರೀಡಾ ಇಲಾಖೆ ಸಹಯೋಗದಲ್ಲಿ ನಡೆದ ಯುವದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಲ್ಲೂಕು ಕಸಾಪ ಅಧ್ಯಕ್ಷ ಎಂ.ಎನ್. ಮಂಜು ನಾಥ್, ಮುಖ್ಯ ಶಿಕ್ಷಕ ಜಯಶಂಕರ್ ಮತ್ತಿತರರು ಇದ್ದರು, ವಿದ್ಯಾರ್ಥಿನಿ ಲಕ್ಷ್ಮಿದೇವಿ ನಿರೂಪಿಸಿದರು, ಮಮತ ಸ್ವಾಗತಿಸಿ, ದಿವ್ಯ ವಂದಿಸಿದರು.

ಬಿಜಿಎಸ್ ಮಹಾವಿದ್ಯಾಲಯ: ವಿವೇಕಾನಂದರ ಮೌಲ್ಯಯುತ ಜೀವನ ವಿದ್ಯಾರ್ಥಿಗಳಿಗೆ ಅವರು ನೀಡಿದ ಅಪೂರ್ವ ಕೊಡುಗೆ ಎಂದು ಬಿಜಿಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎ.ಟಿ. ಶಿವರಾಮು ಹೇಳಿದರು.

ಗುರುವಾರ ತಾಲ್ಲೂಕಿನ ಆದಿಚುಂಚನರಿಯಲ್ಲಿ ಬಿಜಿಎಸ್ ಶಿಕ್ಷಣ ಮಹಾವಿದ್ಯಾಲಯ ಕಾಲೇಜು ಸಭಾಭವನದಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾ ನಂದರ 150ನೇ ಜನ್ಮದಿನೋತ್ಸವ ಕಾರ್ಯಕ್ರಮ ದಲ್ಲಿ ಮಾತನಾಡಿದರು.

ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಆಡಳಿತಾಧಿಕಾರಿ ಸಿ.ಟಿ. ಶಿವೇಗೌಡ, ಉಪನ್ಯಾಸಕ ಕೆ.ಎಂ. ನಾಗರಾಜು ಮಾತನಾಡಿದರು.

ಬಿ.ಇಡಿ ಪ್ರಶಿಕ್ಷಣಾರ್ಥಿಗಳಾದ ಎಸ್. ಸ್ವಾಮಿ ಸ್ವಾಗತಿಸಿ ಬಿ.ಎನ್. ಶ್ವೇತಕುಮಾರಿ ವಂದಿಸಿದರು. ಶಶಿಕಲಾ ನಿರೂಪಿಸಿದರು.

ಮಂಡ್ಯ ವರದಿ: ನಗರದ ವಿವಿಧೆಡೆ ಗುರುವಾರ ಸ್ವಾಮಿ ವಿವೇಕಾನಂದ ಜನ್ಮದಿನದ ಹಿನ್ನೆಲೆಯಲ್ಲಿ ವಿವೇಕ ಯುವ ಅಭಿಯಾನ, ವಿವೇಕಾನಂದರ ಆದರ್ಶ, ಸಂದೇಶ ಕುರಿತ ಉಪನ್ಯಾಸ ಕಾರ್ಯಕ್ರಮಗಳು ನಡೆದವು.

ಎಸ್.ಡಿ.ಜಯರಾಂ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಸರ್ಕಾರಿ ಮಹಾ ವಿದ್ಯಾಲಯದ ಆವರಣದಲ್ಲಿ ವಿವೇಕ ಅಭಿಯಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಕಾಲೇಜಿನ ಪ್ರಾಚಾರ್ಯ ಪ್ರೊ. ಡಿ.ಕೃಷ್ಣೇಗೌಡ ವಹಿಸಿದ್ದರು. ಸಂಸ್ಥೆಯ ಅಶೋಕ್ ಎಸ್.ಡಿ.ಜಯರಾಂ, ಜಾನಪದ ತಜ್ಞ ವ.ನಂ.ಶಿವರಾಮು, ಪತ್ರಕರ್ತ ಕುಮಾರ್ ಹಾಜರಿದ್ದರು.

ಕರವೇ: ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‌ಶೆಟ್ಟಿ ಬಣ) ಆಯೋಜಿಸಿದ್ದ ಸಮಾರಂಭಲ್ಲಿ ಲಿಂಗಣ್ಣ ಬಂಧೂಕಾರ್ ವರು ಮಾತನಾಡಿ ಯುವಜನರಿಗೆ ವಿವೇಕಾನಂದ ಆದರ್ಶ ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಡಿ.ಜಯರಾಂ, ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಬಿ.ಸತೀಶ ಮತ್ತಿತರ ಪದಾಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT