ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವೇಕ್, ಶುಭಾರಂಭ

Last Updated 29 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮೈಸೂರು: ಕರ್ನಾಟಕದ ವಿವೇಕ್  ನಂಬಿಯಾರ್ ಮತ್ತು ಪಿ.ಪಿ. ಪ್ರಚುರಾ ಶನಿವಾರ ಮೈಸೂರು ಜಿಲ್ಲಾ ಚೆಸ್ ಸಂಸ್ಥೆ ಆಶ್ರಯದಲ್ಲಿ ಆರಂಭವಾದ ಅಖಿಲ ಭಾರತ ಫಿಡೆ ರೇಟೆಡ್ ಮುಕ್ತ ಚೆಸ್ (2200 ರೇಟಿಂಗ್‌ನೊಳಗಿನವರು) ಟೂರ್ನಿಯ ಮೊದಲ ಸುತ್ತಿನಲ್ಲಿ ಶುಭಾರಂಭ ಮಾಡಿದರು.

ಪ್ರಥಮ ಸುತ್ತಿನಲ್ಲಿ ಬೆಂಗಳೂರಿನ ವಿವೇಕ್ (ರೇಟಿಂಗ್; 2177)  ಕರ್ನಾಟಕದ ಗೌರವ್ ಜಿ. ಪ್ರತೀಕ್ (ರೇಟಿಂಗ್: 1354) ವಿರುದ್ಧ ಜಯಿಸಿದರು.  ಪ್ರಥಮ ಸುತ್ತಿನಲ್ಲಿ ಕರ್ನಾಟಕದ ಪಿ.ಪಿ. ಪ್ರಚುರಾ, ಪ್ರೇರಣಾ  ವಿರುದ್ಧ  ಮತ್ತು ಕರ್ನಾಟಕ ರಾಜ್ಯ ಚೆಸ್ ಸಂಸ್ಥೆಯ ಕಾರ್ಯದರ್ಶಿಯೂ ಆಗಿರುವ ವಿ. ರಾಘವೇಂದ್ರ ಅವರು ಕರ್ನಾಟಕದವರೇ ಆದ ಇಶಾ ಶರ್ಮಾ ವಿರುದ್ಧ ಗೆದ್ದರು.

ಫಲಿತಾಂಶಗಳು:  ಪ್ರಥಮ ಸುತ್ತು: ಅಲೆಕ್ಸ್ ಕೆ. ಥಾಮಸ್ (ಕೇರಳ) ಅವರು, ಎನ್. ಲೋಕೇಶ್ (ಕರ್ನಾಟಕ) ವಿರುದ್ಧ; ವಿವೇಕ್ ನಂಬಿಯಾರ್ (ಕರ್ನಾಟಕ) ಅವರು, ಗೌರವ್ ಜಿ. ಪ್ರತೀಕ್ (ಕರ್ನಾಟಕ) ವಿರುದ್ಧ; ಎಂ. ವಿನೋದಕುಮಾರ್ (ತಮಿಳುನಾಡು)ಅವರು, ಎನ್. ರಾಚಪ್ಪ (ಕರ್ನಾಟಕ) ವಿರುದ್ಧ; ಜಿ. ವಿನೋದ್ (ತಮಿಳುನಾಡು)ಅವರು, ಆರ್. ನಿತಿನ್ (ಕರ್ನಾಟಕ) ವಿರುದ್ಧ; ಎಸ್.ಎಸ್. ಮೇಘನಂದನ್ (ತಮಿಳುನಾಡು)ಅವರು, ಪಿ. ಜಗದೀಶ್ (ಕರ್ನಾಟಕ) ವಿರುದ್ಧವೂ, ಪಿ.ಪಿ. ಪ್ರಚುರಾ (ಕರ್ನಾಟಕ) ಅವರು, ಪ್ರೇರಣಾ (ಕರ್ನಾಟಕ) ವಿರುದ್ಧ; ಪಿ. ಶಿವಶಂಕರಿ (ತಮಿಳುನಾಡು)ಅವರು,  ಎನ್. ಸುನಿಲ ಭಾರ್ಗವ್  (ಕರ್ನಾಟಕ) ವಿರುದ್ಧ; ಕಾರ್ತಿಕೇಯನ್ ಮುರಳಿ (ತಮಿಳುನಾಡು) ಅವರು, ಎಸ್.ಎನ್. ಜತೀನ್ (ಕರ್ನಾಟಕ) ವಿರುದ್ಧ; ಎಂ.ಎ. ಜಾಯ್ ಲೇಜರ್ (ಕೇರಳ)ಅವರು, ಪ್ರಣವ್ ಎಂ. ಭಟ್ (ಕರ್ನಾಟಕ) ವಿರುದ್ಧ ಜಯ ಸಾಧಿಸಿ ಮುಂದಿನ ಸುತ್ತಿಗೆ ಮುನ್ನಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT