ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ಪೋಡಿ ಆಂದೋಲನ ಆರಂಭ

Last Updated 8 ಸೆಪ್ಟೆಂಬರ್ 2011, 10:10 IST
ಅಕ್ಷರ ಗಾತ್ರ

ಚಾಮರಾಜನಗರ: ಗ್ರಾಮದಲ್ಲಿ ಎಲ್ಲ ರೀತಿಯ ಅಳತೆ ಕಾರ್ಯ ಪೂರ್ಣಗೊಳಿಸುವುದರೊಂದಿಗೆ ಭೂ ದಾಖಲೆಗಳನ್ನು ಕಾಲೋಚಿತಗೊಳಿಸಿ ವ್ಯಾಜ್ಯ ಕಡಿಮೆ ಮಾಡುವ ಸಂಬಂಧ ರೂಪಿಸಿರುವ ವಿಶೇಷ ಪೋಡಿ ಆಂದೋಲನ ಜಿಲ್ಲೆಯ ಯಳಂದೂರು ತಾಲ್ಲೂಕಿನ ಅಗರ ಹೋಬಳಿಯಲ್ಲಿ ಆರಂಭವಾಗಿದೆ.

ಪ್ರಸ್ತುತ ಭೂಮಿಗೆ ಸಂಬಂಧಿಸಿದಂತೆ ವ್ಯಾಜ್ಯಗಳು ಹೆಚ್ಚುತ್ತಿವೆ. ಭೂ ದಾಖಲೆಗಳಲ್ಲಿ ಕಾಲಕಾಲಕ್ಕೆ ಬದಲಾವಣೆ ಮಾಡದಿರುವುದೇ ವ್ಯಾಜ್ಯಗಳ ಹೆಚ್ಚಳಕ್ಕೆ ಕಾರಣವಾಗಿದೆ. ಜತೆಗೆ, ಭೂ ವಿವಾದಗಳಿಂದ ರೈತರು ಹಣ, ಸಮಯ, ನೆಮ್ಮದಿ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ, ಭೂಮಿಯ ಎಲ್ಲೆಗಳನ್ನು ಭೂ ದಾಖಲೆಗಳಲ್ಲಿ ಅಳತೆಯಿಂದ ನಿಖರವಾಗಿ ಮರು ಗುರ್ತಿಸಲು ಅನುಕೂಲವಾಗುವಂತೆ ರಾಜ್ಯ ಸರ್ಕಾರ 2011- 12ನೇ ಸಾಲಿನ ಆಯವ್ಯಯದಲ್ಲಿ ಬಾಕಿ ಇರುವ ಪೋಡಿ ಕಡತಗಳ ವಿಲೇವಾರಿ ಮಾಡಲು ಕಾರ್ಯಕ್ರಮ ಘೋಷಿಸಿದೆ.
ಈ ಮಧ್ಯೆ ಸರ್ಕಾರಿ ಜಮೀನುಗಳು ಒತ್ತುವರಿ ಮೂಲಕ ದುರ್ಬಳಕೆಯಾಗುತ್ತಿವೆ. ಗೋಮಾಳ, ಗುಂಡುತೋಪು, ಸೇಂದಿವನ, ಪರಂಪೋಕು ಇತ್ಯಾದಿ ಯನ್ನು ಅಳತೆಯಿಂದ ಸಮಗ್ರವಾಗಿ ಗುರ್ತಿಸಿ ಸಂರಕ್ಷಿಸಲು ಈ ಆಂದೋಲನ ಹಮ್ಮಿಕೊಳ್ಳಲಾಗಿದೆ.

ಅಗರ ಹೋಬಳಿಯಲ್ಲಿ ಈ ಕಾರ್ಯವನ್ನು ವಿಶೇಷ ಪೋಡಿ ಆಂದೋಲನದ ಮೂಲಕ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಕ್ರಿಯಾಯೋಜನೆ ಸಿದ್ಧಪಡಿಸ ಲಾಗಿದೆ. ಈ ಆಂದೋಲನ ಪ್ರತಿ ಗ್ರಾಮದಲ್ಲೂ ನಡೆಯಲಿದೆ.

ಒಂದು ಗ್ರಾಮದಲ್ಲಿರುವ ಎ್ಲ್ಲಲ ರೀತಿಯ ಅಳತೆ ಕಾರ್ಯ ಪೂರ್ಣಗೊಳಿಸಿ ಭೂ ದಾಖಲೆಗಳನ್ನು ಕಾಲೋಚಿತಗೊಳಿಸಲಾಗುವುದು. ಅಗರ ಹೋಬಳಿಯ ಎ್ಲ್ಲಲ ಗ್ರಾಮಗಳಲ್ಲೂ ಈ ಕಾರ್ಯ ಪೂರ್ಣಗೊಳಿಸಿ ತಾಲ್ಲೂಕಿನ ಉಳಿದ ಹೋಬಳಿಗಳಲ್ಲಿಯೂ ಪ್ರಾರಂಭಿ ಸಲು ನಿರ್ಧರಿಸಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

ಆಂದೋಲನದಡಿ ಮೊದಲ ಆದ್ಯತೆ ಮೇಲೆ ಅಳತೆಗೆ ಉಳಿದಿರುವ ಪೋಡಿ ಕಡತಗಳಾದ ಭೂಮಂಜೂರಿ- ಭೂಸ್ವಾಧೀನ- ಭೂ ಸುಧಾರಣೆ ಕಡತದ ಅಳತೆಯ ಜತೆಗೆ ರೈತರ ಜಮೀನಿನ ಸರ್ವೇ ನಂಬರ್, ಹಿಸ್ಸಾಗಳ ಎಲ್ಲೆಗಳನ್ನು ಮರು ಗುರುತಿಸಲಾಗುವುದು. ತಹಶೀ ಲ್ದಾರ್‌ಗೆ ಹದ್ದುಬಸ್ತು ಅರ್ಜಿ ಸಲ್ಲಿಸಿರುವ ಪ್ರಕರಣ ಗಳನ್ನು ಅಳತೆಗೆ ಒಳಪಡಿಸಿ ದಾಖಲೆ ಸಿದ್ಧಪಡಿಸ ಲಾಗುವುದು. ಅಳತೆ ನಂತರ ಮ್ಯುಟೇಶನ್ ಮತ್ತು ಅನ್ಯಕ್ರಾಂತ ನಡೆಯಲಿದೆ. ಈ ಕುರಿತು ಪ್ರತ್ಯೇಕವಾದ ದಿನಾಂಕ ನಿಗದಿಪಡಿಸಿ ಪ್ರಕಟಣೆ ಹೊರಡಿಸಲಾಗುತ್ತದೆ.

ಆಂದೋಲನದ ಯಶಸ್ಸಿಗಾಗಿ ಅಗರ ಹೋಬಳಿಯಲ್ಲಿ ಕ್ಯಾಂಪ್ ಕಚೇರಿ ತೆರೆಯಲಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ತಮ್ಮ ಗ್ರಾಮಕ್ಕೆ ಸಂಬಂಧಿಸಿದ ಎ್ಲ್ಲಲ ರೀತಿಯ ಅಳತೆ ಕಾರ್ಯ ಪೂರ್ಣಗೊಳಿಸಲು ಸಹಕರಿಸಬೇಕಿದೆ.

ಕಂದಾಯ ಹಾಗೂ ಭೂ ಮಾಪನ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಲಿದೆ. ನಿಗದಿತ ದಿನದಂದು ತಮ್ಮ ಜಮೀನುಗಳಲ್ಲಿ ಹಾಜರಿರಬೇಕು. ಭೂ ಪ್ರದೇಶವನ್ನು ಅವಶ್ಯ ದಾಖಲೆಗಳೊಂದಿಗೆ ಭೂ ಮಾಪನ ತಂಡದ ಭೂಮಾಪಕರಿಗೆ ತೋರಿಸಬೇಕು. ಆ ಮೂಲಕ ಅಳತೆಗೆ ಸಹಕರಿಸಬೇಕು ಎಂದು ತಹಶೀಲ್ದಾರ್ ಕೋರಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT