ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ಬುಡಕಟ್ಟು ಯೋಜನೆಗೆ ಒತ್ತಾಯ

Last Updated 3 ಏಪ್ರಿಲ್ 2013, 20:02 IST
ಅಕ್ಷರ ಗಾತ್ರ

ಬೆಂಗಳೂರು: ದಲಿತರು ಹಾಗೂ ಬುಡಕಟ್ಟು ಜನರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ 1980ರಲ್ಲಿ ರೂಪಿಸಿರುವ ವಿಶೇಷ ಘಟಕ ಯೋಜನೆ ಮತ್ತು ವಿಶೇಷ ಬುಡಕಟ್ಟು ಉಪ ಯೋಜನೆಗಳನ್ನು ಕಾಯ್ದೆಯಾಗಿ ಮಾರ್ಪಡಿಸುವ ವಿಚಾರವನ್ನು ರಾಜಕೀಯ ಪಕ್ಷಗಳು ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಬೇಕು ಎಂದು ದಲಿತ ಬಹುಜನ ಚಳವಳಿ ಸಂಘಟನೆ ಒತ್ತಾಯಿಸಿದೆ.

ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಸಂಚಾಲಕ ರಾಜೇಂದ್ರನ್ ಪ್ರಭಾಕರ್, `ಯೋಜನೆಗಳನ್ನು ರೂಪಿಸಿ ಎರಡು ದಶಕಗಳು ಕಳೆದರೂ ರಾಜ್ಯದಲ್ಲಿ ಇವು ಸಮರ್ಪಕವಾಗಿ ಜಾರಿಯಾಗಿಲ್ಲ. ಇದರಿಂದ ದಲಿತರು ಹಾಗೂ ಬುಡಕಟ್ಟು ಜನರು ಸರ್ಕಾರದ ನೆರವಿನಿಂದ ವಂಚಿತರಾಗಿದ್ದಾರೆ. ಆಂಧ್ರಪ್ರದೇಶದಲ್ಲಿ ಈ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರಲಾಗಿದೆ' ಎಂದರು.

`ಯೋಜನೆಗಳ ಮೂಲಕ ಸರ್ಕಾರದ ನೆರವಿನ ಹಣ ನೇರವಾಗಿ ದಲಿತರು ಹಾಗೂ ಬುಡಕಟ್ಟು ಜನರಿಗೆ ಸಿಗುತ್ತದೆ. ಆದರೆ, ರಾಜ್ಯದಲ್ಲಿ ಯೋಜನೆ ಸರಿಯಾಗಿ ಜಾರಿಗೆ ಬಾರದ ಕಾರಣ ಇದನ್ನು ಕಾಯ್ದೆಯಾಗಿ ಮಾರ್ಪಡಿಸಬೇಕು. ಈ ವಿಚಾರವನ್ನು ರಾಜಕೀಯ ಪಕ್ಷಗಳು ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಬೇಕು' ಎಂದು  ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT