ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ

Last Updated 22 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಕನ್ಸರ್ನ್ ಇಂಡಿಯಾ ಫೌಂಡೇಶನ್ ಬೆಂಗಳೂರು ಶಾಖೆ ವಿಶೇಷ ಮಕ್ಕಳಿಗಾಗಿ `ಸ್ಪ್ಲಾಶ್~ ಚಿತ್ರ ಬಿಡಿಸುವ ಕಾರ್ಯಕ್ರಮವನ್ನು ಕಬ್ಬನ್‌ಪಾರ್ಕ್  ಬಾಲಭವನದಲ್ಲಿ ಹಮ್ಮಿಕೊಂಡಿತ್ತು. ಬುದ್ಧಿಮಾಂದ್ಯ ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಈ ವೇದಿಕೆ ನೆರವಾಯಿತು.

ನಗರದ 25 ಶಾಲೆಗಳ 220 ಮಕ್ಕಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಅವರೊಂದಿಗೆ ಶಿಕ್ಷಕರು, ಪೋಷಕರು ಹಾಗೂ ಸಹಾಯಕಿಯರು ಭಾಗವಹಿಸಿದ್ದರು. ಐದರಿಂದ ಒಂಬತ್ತು ಹಾಗೂ ಹತ್ತರಿಂದ ಹದಿನೈದು ವರ್ಷಗಳ ಎರಡು ತಂಡಗಳನ್ನು ತಯಾರಿಸಿ ಕಾರ್ಯಕ್ರಮ ನಡೆಸಲಾಯಿತು. ಮಕ್ಕಳಿಗಾಗಿ ಮ್ಯಾಜಿಕ್ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿತ್ತು. ಚಿತ್ರ ಬರೆಯುತ್ತಲೇ ಅವರು ಸಾಕಷ್ಟು ಮನರಂಜನಾ ಆಟಗಳಲ್ಲೂ ಪಾಲ್ಗೊಂಡರು.

ಹಿರಿಯ ಕಲಾವಿದರಾದ ದೊಡ್ಡಮನಿ ಹಾಗೂ ಟಿ.ಎಂ. ಅಜೀಜ್ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು. ಮಕ್ಕಳು ಬಿಡಿಸಿದ ಚಿತ್ರಗಳನ್ನು ಕಂಡು ಅತಿಥಿಗಳೂ ಚಕಿತರಾಗಿದರು. ಆಕರ್ಷಕ ಗಿಫ್ಟ್, ಮೆಡಲ್ ಹಾಗೂ ಪ್ರಮಾಣಪತ್ರಗಳನ್ನು ವಿಜೇತರಾದವರಿಗೆ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT