ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ರೈಲು:ಅವಧಿ ವಿಸ್ತರಣೆ

Last Updated 19 ಫೆಬ್ರುವರಿ 2011, 16:00 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಯಶವಂತಪುರ- ಶಿರಡಿ ನಡುವೆ ವಾರಕ್ಕೊಮ್ಮೆ ಓಡಾಡುವ ವಿಶೇಷ ರೈಲಿನ ಅವಧಿ ವಿಸ್ತರಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ.
ಈ ಮೊದಲಿನ ತೀರ್ಮಾನದ ಪ್ರಕಾರ ಫೆ. 23ರಂದು ಈ ವಿಶೇಷ ರೈಲಿನ ಸಂಚಾರ ಕೊನೆಗೊಳ್ಳಬೇಕಿದ್ದು, ಈಗ ಜೂನ್ 28ರವರೆಗೆ ವಿಸ್ತರಿಸಲಾಗಿದೆ.

ಮಂಗಳವಾರ ಬೆಳಿಗ್ಗೆ 7.30ಕ್ಕೆ ಯಶವಂತಪುರದಿಂದ ಪ್ರಯಾಣ ಆರಂಭಿಸುವ ಈ ರೈಲು (ಸಂಖ್ಯೆ 06539) ಬಳ್ಳಾರಿ, ಗದಗ, ಬಾಗಲಕೋಟೆ, ವಿಜಾಪುರ, ಸೊಲ್ಲಾಪುರ ಮೂಲಕ ಸಾಗಿ ಬುಧವಾರ ಬೆಳಿಗ್ಗೆ 8ಕ್ಕೆ ಶಿರಡಿ ತಲುಪುತ್ತದೆ. ಬುಧವಾರ ಸಂಜೆ 6.20ಕ್ಕೆ ಶಿರಡಿಯಿಂದ ವಾಪಸಾಗುವ ಈ ರೈಲು (ಸಂಖ್ಯೆ 06540) ಮರುದಿನ ರಾತ್ರಿ 8ಕ್ಕೆ ಯಶವಂತಪುರ ತಲುಪುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT