ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಅಥ್ಲೆಟಿಕ್ಸ್: ಚಿನ್ನ ಗೆದ್ದ ಉಸೇನ್ ಬೋಲ್ಟ್

Last Updated 3 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಡೇಗು (ದಕ್ಷಿಣ ಕೊರಿಯಾ): 100 ಮೀಟರ್ ಓಟದಲ್ಲಿ ಅನರ್ಹಗೊಂಡು ನಿರಾಸೆಗೆ ಒಳಗಾಗಿದ್ದ ಜಮೈಕಾದ ಉಸೇನ್ ಬೋಲ್ಟ್ 200 ಮೀ.ನಲ್ಲಿ ಚಿನ್ನ ಗೆದ್ದು ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. 13ನೇ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ 200 ಮೀ. ಓಟದ ಫೈನಲ್‌ನಲ್ಲಿ ಬೋಲ್ಟ್ ಶನಿವಾರ 19.40 ಸೆಕೆಂಡ್‌ಗಳಲ್ಲಿ ಕ್ರಮಿಸಿದರು. 
200 ಮೀ. ಓಟದಲ್ಲಿ ಇದು ನಾಲ್ಕನೇ ಶ್ರೇಷ್ಠ ಸಾಧನೆ. ಈ ವಿಭಾಗದಲ್ಲಿ ಬೋಲ್ಟ್ (19.19 ಸೆ.) ವಿಶ್ವ ದಾಖಲೆ ಹೊಂದಿದ್ದಾರೆ. ಮತ್ತೊಮ್ಮೆ ಅವರು 19.30 ಸೆಕೆಂಡ್‌ಗಳಲ್ಲಿ ಕ್ರಮಿಸಿದ್ದರು. ಮೈಕಲ್ ಜಾನ್ಸನ್ ಈ ಗುರಿಯನ್ನು ಒಮ್ಮೆ 19.32 ಸೆ.ನಲ್ಲಿ ತಲುಪಿದ್ದರು.

`ನಾನೇನು ಸಿಟ್ಟಿನಿಂದ ಓಡಲಿಲ್ಲ. ಆದರೆ 100 ಮೀಟರ್ ಓಟದಲ್ಲಿ ಮಾಡಿದ ತಪ್ಪಿಗಾಗಿ ಜನರ ಕ್ಷಮೆಯಾಚಿಸಿದೆ ~ ಎಂದು ಬೋಲ್ಟ್ ನುಡಿದರು. ಈ ವಿಭಾಗದಲ್ಲಿ ಅಮೆರಿಕದ ವಾಲ್ಟರ್ ಡಿಕ್ಸ್ (19.70 ಸೆ.) ಹಾಗೂ ಫ್ರಾನ್ಸ್‌ನ ಕ್ರಿಸ್ಟೋಫ್ ಲೆಮಿಟ್ರೆ (19.80 ಸೆ.) ನಂತರದ ಸ್ಥಾನ ಪಡೆದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT