ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಆರ್ಥಿಕ ಮುನ್ನೋಟ ತಗ್ಗಿಸಿದ ಐಎಂಎಫ್

Last Updated 6 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬರ್ಲಿನ್ (ಎಎಫ್‌ಪಿ): ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಜಾಗತಿಕ ಆರ್ಥಿಕ ಪ್ರಗತಿ ಮುನ್ನೋಟ ತಗ್ಗಿಸಿದ್ದು, ಆರ್ಥಿಕ ಪುನಶ್ಚೇತನಕ್ಕಾಗಿ ಅಮೆರಿಕ ಮತ್ತು ಯುರೋಪ್ ಒಕ್ಕೂಟದ ರಾಜಕೀಯ ಮುಖಂಡರು ಕೆಲವು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂದು ಹೇಳಿದೆ.

`ಐಎಂಎಫ್~ನ ವಿಶ್ವ ಆರ್ಥಿಕ ಮುನ್ನೋಟ ವರದಿ ಮುಂದಿನ ವಾರ ಪ್ರಕಟಗೊಳ್ಳಲಿದೆ. ಈ ವರದಿಯಲ್ಲಿ 2012ರಲ್ಲಿ ಶೇ 3.3 ಮತ್ತು 2013 ರಲ್ಲಿ    ಶೇ 3.6ರಷ್ಟು ವಿಶ್ವ ಆರ್ಥಿಕ ಪ್ರಗತಿ ಅಂದಾಜು ಮಾಡಲಾಗಿದೆ ಎಂದು ಜರ್ಮನಿ ಮೂಲದ ಪತ್ರಿಕೆಯೊಂದು ವರದಿ ಮಾಡಿದೆ. 

ಜಾಗತಿಕ ಆರ್ಥಿಕ ವಿಶ್ವಾಸ ಸ್ಥಿರಗೊಳ್ಳಲು ಯುರೋಪ್ ಮತ್ತು ಅಮೆರಿಕದ ನಾಯಕರು ಕೆಲವು ಮಹತ್ವದ ಸುಧಾರಣೆಗಳನ್ನು ಕೈಗೊಳ್ಳಬೇಕಿರುವುದು ಅನಿವಾರ್ಯ.  ಈ ವರ್ಷ ಯುರೋಪ್ ಆರ್ಥಿಕತೆ ಶೇ 0.4ರಷ್ಟು ಕುಸಿಯಲಿದೆ. 2013ರಲ್ಲಿ ಶೇ 0.2ರಷ್ಟು ಚೇತರಿಸಿಕೊಳ್ಳಬಹುದು ಎಂದಿದೆ. 

ಚೀನಾ, ಭಾರತ ಮತ್ತು ಬ್ರೆಜಿಲ್ `ಜಿಡಿಪಿ~ ಪ್ರಗತಿಯನ್ನು `ಐಎಂಎಫ್~ ಕ್ರಮವಾಗಿ ಶೇ 8, ಶೇ 6 ಮತ್ತು ಶೇ 4ಕ್ಕೆ ತಗ್ಗಿಸಿದೆ. ಭಾರತವೂ ಸೇರಿದಂತೆ ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳಲ್ಲಿ ಹಣದುಬ್ಬರ ಇನ್ನಷ್ಟು ತಗ್ಗಿದರೆ ಮತ್ತು ಬಡ್ಡಿದರಗಳು ಇಳಿಕೆಯಾದರೆ ಆರ್ಥಿಕತೆ ಚೇತರಿಸಿಕೊಳ್ಳಲಿದೆ ಎಂದು `ಐಎಂಎಫ್~ ಹೇಳಿರುವುದಾಗಿ ಪತ್ರಿಕೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT