ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಪೊಲೀಸ್ ಕ್ರೀಡಾಕೂಟ: ಭಾರತಕ್ಕೆ 11 ಬಂಗಾರ

Last Updated 4 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಬೆಲ್‌ಫಾಸ್ಟ್, ಐರ್ಲೆಂಡ್ (ಪಿಟಿಐ): ಉತ್ತಮ ಪ್ರದರ್ಶನ ತೋರುತ್ತಿರುವ ಭಾರತದ ಸ್ಪರ್ಧಿಗಳು ಇಲ್ಲಿ ನಡೆಯುತ್ತಿರುವ `15ನೇ ವಿಶ್ವ ಪೊಲೀಸ್ ಹಾಗೂ ಅಗ್ನಿ ಶಾಮಕ ಕ್ರೀಡಾಕೂಟ'ದಲ್ಲಿ 11 ಬಂಗಾರ ಸೇರಿದಂತೆ 21 ಪದಕ ಗೆದ್ದಿದ್ದಾರೆ.

ಕ್ರೀಡಾಕೂಟದ ಮೊದಲ ದಿನ 6 ಪದಕ ಜಯಿಸಿದ್ದ ಭಾರತದ ಸ್ಪರ್ಧಿಗಳು, ಎರಡನೇ ದಿನ 15 ಪದಕ ಗೆದ್ದು ಗಮನಾರ್ಹ ಸಾಧನೆ ಮಾಡಿದ್ದಾರೆ.

ಬಿಎಸ್‌ಫ್‌ನ ಎಸ್.ಐ. ನಂದರ್ ಆನಂದ್ ಭಾರತದ ಪರ ಮೊದಲ ಪದಕ ಗೆದ್ದರು. ಪುರುಷರ ಈಜು ಸ್ಪರ್ಧೆಯ 400 ಮೀ ಫ್ರಿಸ್ಟೈಲ್ ಸ್ಪರ್ಧೆಯಲ್ಲಿ ಆನಂದ್ (4:12.21 ಸೆ.) ಬಂಗಾರದ ಸಾಧನೆ ತೋರಿದರು. 200 ಮೀ. ವೈಯಕ್ತಿಕ ಮೆಡ್ಲೆ ವಿಭಾಗದಲ್ಲೂ ಆನಂದ್ (2:19.12 ಸೆ.) ಚಿನ್ನ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT