ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಭಾತೃತ್ವಕ್ಕೆ ಆದ್ಯತೆ ನೀಡಲು ಸಲಹೆ

Last Updated 30 ಜುಲೈ 2012, 7:20 IST
ಅಕ್ಷರ ಗಾತ್ರ

ಗಜೇಂದ್ರಗಡ: ಸಮಾಜದಲ್ಲಿ ಅಸಹಾಯಕರಿಗೆ ನೆರವಿನ ಹಸ್ತ ನೀಡುವ ಮೂಲಕ ಮಾನವೀಯತೆ ಮೆರೆಯುತ್ತಿರುವ ಸಂಸ್ಥೆ ಎಂಬ ಹೆಗ್ಗಳಿಕೆ ರೋಟರಿ ಸಂಸ್ಥೆ ಹೊಂದಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ಸದಸ್ಯರು ಉದಾರ ಮನೋಭಾವದಿಂದ ನಡೆದುಕೊಳ್ಳಬೇಕು ಎಂದು ಸಂಸ್ಥೆಯ ಡಿಸಿಸಿ ಡಾ. ಸಂಗಮೇಶ ಜವಾಯಿ ಅಭಿಪ್ರಾಯಪಟ್ಟರು. 

ಇಲ್ಲಿನ ಜಗದಂಬಾ ಸಮುದಾಯ ಭವನದಲ್ಲಿ ರೋಟರಿ ಸಂಸ್ಥೆ ಆಯೋಜಿಸಿದ್ದ `ಪದಾಧಿಕಾರಿಗಳ ಅಧಿಕಾರ ಹಸ್ತಾಂತರ~ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಗೊಳಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮನುಷ್ಯನಲ್ಲಿ ತ್ಯಾಗ ಮನೋಭಾವ, ಬಲಿದಾನ, ಉದಾರತೆ, ಮಾನವೀಯತೆ, ಅಂತಃಕರಣಗಳಂತಹ ಗುಣ ಗಳು ಕಣ್ಮರೆಯಾಗುತ್ತಿದೆ ಎಂದು ವಿಷಾದಿಸಿದರು.

ಸಮಾಜದಲ್ಲಿ ನಿಸ್ಸಹಾಯಕರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ರಾಷ್ಟ್ರದ ಬೆಳವಣಿಗೆಗೆ ಧಕ್ಕೆ ಉಂಟಾ ಗುವ ಲಕ್ಷಣಗಳೇ ದಟ್ಟವಾಗಿರುತ್ತವೆ. ಆದ್ದರಿಂದ ಉಳ್ಳವರು ಇಲ್ಲದವರ ನೆರವಿಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ರೋಟರಿ ಸಂಸ್ಥೆ ಸಾಮಾಜಿಕ ಕಳಕಳಿಯೊಂದಿಗೆ ವಿಶ್ವದ 200 ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಸಂಸ್ಥೆ ಮಹತ್ವದ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ.

ಅಲ್ಲದೆ, ಅಸಂಖ್ಯಾತ ನೊಂದ ಜೀವಿಗಳ ಬದುಕಿಗೆ ಹೊಸ ಬದುಕನ್ನು ಕಲ್ಪಿಸಿಕೊಟ್ಟು ಉದಾರತೆಯನ್ನು ಮೆರೆದಿದೆ. ಇತ್ತೀಚಿನ ಕೆಲ ವರ್ಷಗಳಲ್ಲಿ ಸಂಸ್ಥೆ ಗ್ರಾಮೀಣ ಪ್ರದೇಶಕ್ಕೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದ್ದು, ಗ್ರಾಮೀಣರಲ್ಲಿಯೂ ಸಾಮಾಜಿಕ ಕಳಕಳಿಯ ಅರಿವು ಮೂಡಿಸುವ ನಿಟ್ಟಿನಲ್ಲಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದ ರು.

ವಿಶ್ವದ ಅಸಂಖ್ಯಾತ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳು ಉನ್ನತ ಶೈಕ್ಷಣಿಕ ಸೌಲಭ್ಯದಿಂದ ವಂಚಿತರಾದ ಸಂದರ್ಭಗಳಲ್ಲಿ ಸಂಸ್ಥೆ ಆರ್ಥಿಕ ನೆರವು ಒದಗಿಸಿ ಅವರ ಬಾಳು ಉಜ್ವಲಗೊಳಿಸಿದೆ. ಜೊತೆಗೆ ಅನಾರೋಗ್ಯಕ್ಕೆ ಗುರಿಯಾಗಿ ಅಮೂಲ್ಯ ಬದುಕೇ ಇಲ್ಲವಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿದ್ದ ಲಕ್ಷಾಂತರ ಕುಟುಂಬಗಳಿಗೆ ಸಂಸ್ಥೆ ಸ್ವಂತ ಖರ್ಚಿನಲ್ಲಿ ಚಿಕಿತ್ಸೆಕೊಡಿಸಿ ಹೊಸ ಬದುಕಿಗೆ ಆಸರೆ ಕಲ್ಪಿಸಿದೆ. ಇಂತಹ ಹತ್ತಾರು ಮಹತ್ವದ ಕಾರ್ಯಗಳು ಸಂಸ್ಥೆಯಿಂದ ನಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

 ನೂತನ ಪದಾಧಿಕಾರಿಗಳು: ಗಿರೀಶ ಕುಲಕರ್ಣಿ ಅಧ್ಯಕ್ಷ, ಶಂಕರ ಅಂಗಡಿ ಕಾರ್ಯದರ್ಶಿ, ಗಿರೀಶ ವರ್ಣೇಕರ್ ಖಜಾಂಚಿ, ಮಲ್ಲಿಕಾರ್ಜುನ ಹಿರೇಮನಿ ರೋಟರಿ ಶಾಲಾ ಸೊಸೈಟಿಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಹೆಸ್ಕಾಂ ಅಧಿಕಾರಿ ಚಿದಂಬರ ಕುಲಕರ್ಣಿ, ಎಎಸ್‌ಐ ಎಚ್.ಎಸ್.ದಾಸರ, ಆರೋಗ್ಯ ಇಲಾಖೆಯ ಮಲ್ಲಪ್ಪ ಗದ್ದಿ, ಪುರಸಭೆ ಪೌರ ಕಾರ್ಮಿಕ ಮುದು ಕಪ್ಪ ಹರಿಜನ, ಬಾಬು ನಾವಡೆ ಇವರುಗಳನ್ನು ಸನ್ಮಾನಿಸಲಾಯಿತು.

ಡಾ.ಆರ್.ಕೆ.ಗಚ್ಚಿನಮಠ, ಡಾ.ಕೆ.ಬಿ.ಧನ್ನೂರ, ಸಿದ್ದಣ್ಣ ಬಂಡಿ, ಜಗದೀಶ ಕನಕೇರಿ, ಅಶೋಕ ಶೆಟ್ಟರ್, ಬಾಬು ಕಾತರಕಿ, ಶೇಖಣ್ಣ ಚೋಳಿನ, ಗಣೇಶ ರಾಯಬಾಗಿ, ಸುನೀಲ ದಾನಿ, ಪರಪ್ಪ ಸಂಗನಾಳ, ಪಿ.ಹೆಚ್‌ದೊಡ್ಡಮನಿ, ಪಿ.ಬಿ.ದಲಬಂಜನ, ಸುರೇಂದ್ರಸಾ ರಾಯಬಾಗಿ, ಅಮರೇಶ ಅರಳಿ, ಡಾ.ಹೆಚ್.ಎನ್.ನಾಯ್ಕರ, ಡಾ.ಟಿ.ಶಂಕರ್, ಟಿ.ಸಿದ್ದಲಿಂಗಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT