ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಭಾಷೆಗಳಿಗೆ ಭಾರತೀಯ ಕೃತಿ

Last Updated 23 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಇನ್ನು ಮುಂದೆ ಭಾರತೀಯ ಸಾಹಿತ್ಯ ಕೃತಿಗಳು ವಿಶ್ವದ ವಿವಿಧ ಭಾಷೆಗಳಲ್ಲಿಯೂ ಲಭ್ಯವಾಗಲಿವೆ. ಅಲ್ಲದೆ ವಿಶ್ವದ ಶ್ರೇಷ್ಠ ಕೃತಿಗಳು ಭಾರತೀಯ ಭಾಷೆಗಳಿಗೆ ತರ್ಜುಮೆಗೊಳ್ಳಲಿವೆ.

`ಭಾರತೀಯ ಸಾಹಿತ್ಯವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಹಾಗೂ ವಿಶ್ವದ ಸಾಹಿತ್ಯವನ್ನು ಭಾರತೀಯ ಓದುಗರಿಗೆ ಪರಿಚಯಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ವಿಶ್ವಸಂಸ್ಥೆಯ ಆರು ಭಾಷೆಗಳು, ಜಪಾನ್ ಹಾಗೂ ಇಟಲಿ ಭಾಷೆಗಳಲ್ಲಿ ಈಗಾಗಲೇ ಈ ಕೆಲಸ ಆರಂಭವಾಗಿದೆ~ ಎಂದು ಸಂಸ್ಕೃತಿ ಸಚಿವೆ ಕುಮಾರಿ ಶೆಲ್ಜಾ ತಿಳಿಸಿದ್ದಾರೆ.

`ವಿವಿಧ ಭಾಷೆಗಳಲ್ಲಿ ಪರಿಣತರಾದ ಬರಹಗಾರರು ನಮ್ಮಲ್ಲಿ ಸಾಕಷ್ಟು  ಇದ್ದಾರೆ. ಸಾಹಿತ್ಯ ಅಕಾಡೆಮಿ ರಚನಾತ್ಮಕ ಕಾರ್ಯ ಆರಂಭಿಸಿ ವಿಶ್ವದ ಅತ್ಯುತ್ತಮ ಕೃತಿಗಳನ್ನು ಭಾರತೀಯ ಭಾಷೆಗಳಿಗೆ ತರ್ಜುಮೆ ಮಾಡಲಿದೆ ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT