ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ವ್ಯಾಪಾರ ಸಂಘಟನೆ

ಸುದ್ದಿ ಹಿನ್ನೆಲೆ
Last Updated 9 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಇಂಡೊನೇಷ್ಯಾದ ಬಾಲಿಯಲ್ಲಿ ನಡೆದ ವಿಶ್ವ ವ್ಯಾಪಾರ ಸಂಘಟನೆಯ ಸಚಿವರ 9ನೆ ಸಮ್ಮೇ­ಳನ­, ಜಾಗತಿಕ ವ್ಯಾಪಾರಕ್ಕೆ ಸಂಬಂಧಿ­ಸಿದಂತೆ ಐತಿಹಾಸಿಕ ಒಪ್ಪಂದಕ್ಕೆ ಬಂದಿದೆ.

ಬಡವರಿಗೆ ಅಗ್ಗದ ದರದಲ್ಲಿ ಆಹಾರ ಧಾನ್ಯ ಒದಗಿಸುವ ಆಹಾರ ಭದ್ರತೆ ಯೋಜನೆಗೆ ಯಾವುದೇ ಧಕ್ಕೆ ಒದಗ­ಬಾರದು ಎನ್ನುವ ಭಾರತದ ಕಾಳಜಿಗೆ ಮನ್ನಣೆ ಸಿಕ್ಕಿದೆ. ದೋಹಾ ಸುತ್ತಿನ ಮಾತುಕತೆಗಳಿಗೆ ಚಾಲನೆ ನೀಡಿದ ನಂತರ ಇದೇ ಮೊದಲ ಬಾರಿಗೆ ಇಂತಹ ಒಪ್ಪಂದ ಸಾಧ್ಯವಾಗಿದೆ. 159 ದೇಶ­ಗಳು ‘ಬಾಲಿ ಕೊಡುಗೆ’ಗೆ ಸಮ್ಮತಿಸಿವೆ.

ಸದಸ್ಯ ದೇಶಗಳು ಸಬ್ಸಿಡಿ ದರಗಳಲ್ಲಿ ಆಹಾರ ಧಾನ್ಯ ಒದಗಿ­ಸುವುದಕ್ಕೆ ದಂಡನಾ ಕ್ರಮ­ಗಳನ್ನು ವಿಧಿಸದಿರಲು ‘ಡಬ್ಲ್ಯುಟಿಒ’  ಸಮ್ಮ­ತಿಸಿದೆ. ಆಹಾರ ಭದ್ರತೆ ಯೋಜ­ನೆಗೆ ಸರ್ಕಾರಗಳು ಆಹಾರ ಧಾನ್ಯಗಳನ್ನು ಸಂಗ್ರ­ಹಿಸಿ ಇಡುವುದು ವಿವಾದಕ್ಕೆ ಕಾರ­ಣ­ವಾಗಿತ್ತು.

ಸಚಿವರ ಸಮ್ಮೇಳನ
ಸಂಘಟನೆಯ ಸಚಿವರ ಸಮ್ಮೇಳನ­ದಲ್ಲಿ­ಯೇ ಮಹತ್ವದ ನೀತಿ ನಿರ್ಧಾರ ಕೈಗೊಳ್ಳ­ಲಾಗುತ್ತಿದೆ. ಪ್ರತಿ 2 ವರ್ಷ­ಕ್ಕೊಮ್ಮೆ ಇಂತಹ ಸಮ್ಮೇ­ಳನ ನಡೆಯು­ತ್ತದೆ. ಸಂಘಟನೆಯ ಎಲ್ಲ ಸದಸ್ಯ ದೇಶಗಳ ವಾಣಿಜ್ಯ ಸಚಿವರು ಇಂತಹ ಸಮ್ಮೇಳನಗಳಲ್ಲಿ ಭಾಗವಹಿ­ಸುತ್ತಾರೆ.

ದೋಹಾ ಮಾತುಕತೆ
ದೋಹಾದಲ್ಲಿ 2001ರ ನವೆಂಬರ್  ನಲ್ಲಿ ನಡೆದ ಸಚಿವರ ನಾಲ್ಕನೆ ಸಮ್ಮೇಳನ­ದಲ್ಲಿ ಸದ್ಯದ ಸಂಧಾನ ಮಾತುಕತೆಗಳಿಗೆ ಚಾಲನೆ ನೀಡಲಾಗಿತ್ತು.

ಜಾಗತೀಕರಣಕ್ಕೆ ಇನ್ನಷ್ಟು ದೇಶಗಳು ಸೇರ್ಪಡೆಗೊಳ್ಳುವಂತೆ ಮಾಡುವುದು, ಅಂತರರಾಷ್ಟ್ರೀಯ ವ್ಯಾಪಾರಕ್ಕೆ ಎದುರಾ­ಗುವ ಅಡೆತಡೆಗಳನ್ನು ನಿವಾರಿಸಿ ಬಡ­ವರಿಗೆ ನೆರವಾಗುವ ಮಹತ್ವಾ­ಕಾಂಕ್ಷೆಯ ಗುರಿ­ಗಳನ್ನು  ಈ ಮಾತು­ಕತೆಗೆ ನಿಗದಿ­ಪಡಿ­ಸಲಾಗಿತ್ತು.2005ರಲ್ಲಿಯೇ ಈ ಮಾತುಕತೆ ಪೂರ್ಣಗೊಳಿಸಲು ಕಾಲ­ಮಿತಿ ನಿಗದಿಪ­ಡಿ­ಸಲಾಗಿತ್ತು. ಕಳೆದ ವರ್ಷ­ದವರೆಗೂ ದೋಹಾ ಸುತ್ತಿನ ಮಾತುಕತೆಗಳ ಮುಂದು­ವರಿಕೆಗೆ ಅನಿಶ್ಚಿತತೆ ತಲೆ­ದೋರಿತ್ತು.

ಅಂತರರಾಷ್ಟ್ರೀಯ ವಾಣಿಜ್ಯ  ವ್ಯಾಪಾರ   ಉದಾರೀಕರಣ­ಗೊಳಿಸುವ ಮತ್ತು ಅದರ ಮೇಲ್ವಿಚಾರಣೆ ನೋಡಿ­ಕೊಳ್ಳುವ ಉದ್ದೇಶದಿಂದ ವಿಶ್ವ ವ್ಯಾಪಾರ ಸಂಘಟನೆ `ಡಬ್ಲ್ಯುಟಿಒ' 1995ರ ಜನವರಿಯಲ್ಲಿ ಅಸ್ತಿತ್ವಕ್ಕೆ ಬಂದಿತ್ತು.

1948ರಿಂದ ತೆರಿಗೆ ಮತ್ತು ವ್ಯಾಪಾರ ಸಾಮಾನ್ಯ ಒಪ್ಪಂದವು  (General Agreement on Tariffs and Trade – -GATT) ‘ಗ್ಯಾಟ್’ ಒಪ್ಪಂದ ಎಂದೇ ಬಳಕೆಯಲ್ಲಿತ್ತು. ಅದರ ಬದಲಿಗೆ 1995ರಲ್ಲಿ ‘ಡಬ್ಲ್ಯುಟಿಒ’ ಅಸ್ತಿತ್ವಕ್ಕೆ ಬಂದಿತು.

ಭಾರತದ ನಿಲುವು
ಕೃಷಿ ರಂಗದಲ್ಲಿನ ತಾರತಮ್ಯಗಳಿಂದ ಕೂಡಿದ ಮತ್ತು ವಹಿವಾಟು ವಿರೂಪ­ಗೊಳಿಸುವ ಸಬ್ಸಿಡಿ ಸಮಸ್ಯೆ ಪರಿಹರಿಸ­ಬೇಕು ಎನ್ನುವುದು ಬಡ ದೇಶಗಳ ಪ್ರಮುಖ ಹಕ್ಕೊತ್ತಾಯವಾಗಿದೆ. ರೈತರಿಗೆ ಗರಿಷ್ಠ ಪ್ರತಿಫಲ ಒದಗಿಸದ ಮುಕ್ತ ವ್ಯಾಪಾರ ವ್ಯವಸ್ಥೆ ಬದಲಿಸಲು ಭಾರತ ನಿರಂತರವಾಗಿ ಪ್ರಯತ್ನಿಸುತ್ತಿದೆ. ಭಾರತದ ನಿಲುವನ್ನು ೧೧೦ಕ್ಕೂ ಹೆಚ್ಚು ಬಡ ದೇಶಗಳು ಬೆಂಬಲಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT