ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಸ್ನೂಕರ್‌ಗೆ ಭಾರತ ಆತಿಥ್ಯ

Last Updated 17 ಜುಲೈ 2013, 19:45 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್): ವಿಶ್ವದ ಪ್ರಮುಖ 64 ಸ್ಪರ್ಧಿಗಳು ಪಾಲ್ಗೊಳ್ಳುವ ವಿಶ್ವ ರ‍್ಯಾಂಕಿಂಗ್ ಸ್ನೂಕರ್ ಟೂರ್ನಿಗೆ ಮೊದಲ ಸಲ ಭಾರತ ಆತಿಥ್ಯ ವಹಿಸಿದೆ. ಅಕ್ಟೋಬರ್ 14ರಿಂದ 18ರ ವರೆಗೆ ನಡೆಯಲಿರುವ ಈ ಟೂರ್ನಿಯಲ್ಲಿ ಆರು ದೇಶಗಳ ಸ್ಪರ್ಧಿಗಳು ಪೈಪೋಟಿ ನಡೆಸಲಿದ್ದಾರೆ.

`ಭಾರತದಲ್ಲಿ ಸ್ನೂಕರ್ ಮತ್ತಷ್ಟು ಖ್ಯಾತಿ ಪಡೆಯಲು ಈ ಟೂರ್ನಿ ನೆರವಾಗಲಿದೆ' ಎಂದು ವಿಶ್ವ ವೃತ್ತಿಪರ ಸ್ನೂಕರ್ ಹಾಗೂ ಬಿಲಿಯರ್ಡ್ಸ್ ಫೆಡರೇಷನ್ ಮುಖ್ಯಸ್ಥ ಜಾಸನ್ ಫರ್ಗ್ಯೂಸನ್ ತಿಳಿಸಿದ್ದಾರೆ.  ಪ್ರಿ ಕ್ವಾರ್ಟರ್ ಫೈನಲ್‌ನಿಂದ  ಪಂದ್ಯಗಳು ಪ್ರಮುಖ ವಾಹಿನಿಗಳಲ್ಲಿ ನೇರ ಪ್ರಸಾರವಾಗಲಿವೆ.

`ವಿಶ್ವ ಸ್ನೂಕರ್ ಭಾರತದಲ್ಲಿಯೇ ನಡೆಯಲಿದೆ. ಆದ್ದರಿಂದ ಪ್ರಮುಖ ಸ್ಪರ್ಧಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದ್ದೇವೆ. ಈ ಟೂರ್ನಿಗೂ ಮುನ್ನ ಹಲವು ರ‍್ಯಾಂಕಿಂಗ್ ಟೂರ್ನಿಗಳು ನಡೆಯಲಿವೆ. ಅಲ್ಲಿ ಉತ್ತಮ ಪ್ರದರ್ಶನ ತೋರುವ ಸ್ಪರ್ಧಿಗಳಿಗೆ ಮಹತ್ವದ ವಿಶ್ವ ಸ್ನೂಕರ್‌ನಲ್ಲಿ ಸ್ಪರ್ಧಿಸುವ ಅವಕಾಶ ಲಭಿಸಲಿದೆ' ಎಂದು ಭಾರತ ಸ್ನೂಕರ್ ಹಾಗೂ ಬಿಲಿಯರ್ಡ್ಸ್ ಫೆಡರೇಷನ್ (ಬಿಎಸ್‌ಎಫ್‌ಐ) ತಿಳಿಸಿದೆ.

`ಈ ಟೂರ್ನಿ ಭಾರತದಲ್ಲಿ ಸ್ನೂಕರ್‌ಗೆ ಹೊಸ ಆಯಾಮ ನೀಡಲಿದೆ. ಸಾಕಷ್ಟು ಯುವ ಸ್ಪರ್ಧಿಗಳು ಹೊರಹೊಮ್ಮಲು ನೆರವಾಗಲಿದೆ' ಎಂದು ಬಿಎಸ್‌ಎಫ್‌ಐ ಅಧ್ಯಕ್ಷ ಪಿವಿಕೆ ಮೋಹನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT